ಜ.16: ಸಾಲಿಗ್ರಾಮ ಜಾತ್ರೆ, ಮನ್ಮಹಾರಥೋತ್ಸವ

ಕೋಟ: ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದ ವಾರ್ಷಿಕ ಜಾತ್ರೆ, ಮನ್ಮಹಾರಥೋತ್ಸವವು ಜ.16ರಂದು ನಡೆಯಲಿದೆ. ಈ ಪ್ರಯುಕ್ತವಾಗಿ ಬೆಳಗ್ಗೆ 6ಕ್ಕೆ ರಥಾವರೋಹಣ ಮಧ್ಯಾಹ್ನ ಅನ್ನ ಸಂತಪರ್ಣೆ ಜರಗಲಿದೆ.

    ರಥೋತ್ಸವದ ಪೂರ್ವಭಾವಿಯಾಗಿ ಜ.13ರಂದು ಸಂಜೆ 6.30ಕ್ಕೆ ಶ್ರೀ ಗುರುನರಸಿಂಹ ದೇವಸ್ಥಾನದ ಬಯಲು ರಂಗಮಂಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅನಂತರ ಸುಗಮ ಸಂಗೀತ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾ ವೇದಿಕೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.

ಜ.14ರಂದು ಪೂರ್ವಾಹ್ನ 11.30ಕ್ಕೆ ಬೆಳ್ಳಿ ರಥ ಸರ್ಮಪಣೆ, ಸಭಾ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಜ.15ರಂದು ಪೂರ್ವಾಹ್ನ 11.30ಕ್ಕೆ ದೇವಳದ ಹೊರ ಪ್ರಾಂಗಣ ಮತ್ತು ದಕ್ಷಿಣ ಭಾಗದ ಗೋಲಾಕಾರ ಛಾವಣಿ ತೀರ್ಥ ಮಂಟಪ ಸರ್ಮಪಣೆ ಸಭಾಕಾರ್ಯಕ್ರಮಗಳು ಜರಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ್‌ ಕಾರಂತ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com