ಸಾಮಾಜಿಕ ತಾಣಗಳಲ್ಲಿ ಅಶ್ಲಿಲ ಚಿತ್ರ: ಯುವಕ ಸೆರೆ

ಉಡುಪಿ: ದೇರಳಕಟ್ಟೆಯ ಪ್ರಕರಣ ಕಾವೇರುತ್ತಿರುವಾಗಲೇ, ಇದೀಗ ಅದೇ ಮಾದರಿಯಲ್ಲಿ ಭಿನ್ನ ಕೋಮಿನ ಕಾಮುಕ ಯುವಕನೋರ್ವ ವಿದ್ಯಾರ್ಥಿನಿ ಯನ್ನು ಪುಸಲಾಯಿಸಿ ಆಕೆಯೊಂದಿಗಿನ ಲೈಂಗಿಕ ಚಿತ್ರಗಳನ್ನಿಟ್ಟು ಹಣದ ಬೇಡಿಕೆ ಮುಂದಿರಿಸಿ ಬ್ಲ್ಯಾಕ್ ಮೇಲ್ ಮಾಡಿ ಆತ್ಮೀಯವಾಗಿರುವ ಹಸಿಬಿಸಿ ಚಿತ್ರಗಳು ಫೇಸ್ ಬುಕ್, ವಾಟ್ಸಪ್ ಮೊದಲಾದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದು ಇದೀಗ ಪೊಲೀಸರು ಕಟಪಾಡಿಯ ಯುವಕನನ್ನು ಬಂಧಿಸಿದ್ದಾರೆ.  ಉಡುಪಿಯ ಕಾಲೇಜೊಂದರ ಯುವತಿ ನೀಡಿದ ದೂರಿನಂತೆ ಕಟಪಾಡಿಯ ಮಹಮ್ಮದ್ ಯಾಶೀರ್ (22) ಎಂಬಾತನನ್ನು ಬಂಧಿಸಿದ್ದು, ಆತನಿಗೆ ಜ.22ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.   

ಪ್ರಕರಣದ ವಿವರ: ಯುವಕ-ಯುವತಿಯ ಈ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇವುಗಳನ್ನು ಯುವಕನೇ ಅಪ್ ಲೋಡ್ ಮಾಡಿದ್ದಾನೆ ಎಂದು ಯುವತಿ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ವಿದ್ಯಾರ್ಥಿನಿ ಮತ್ತು ಈ ಮಹಮ್ಮದ್ ಯಾಶೀರ್ ನಡುವೆ ಸ್ನೇಹವಿದ್ದು, ಅದು ಪ್ರೇಮಕ್ಕೋ, ಕಾಮಕ್ಕೋ ತಿರುಗಿತ್ತೆನ್ನಲಾಗಿದೆ. ಎರಡು ತಿಂಗಳ ಹಿಂದೆ ಇವರಿಬ್ಬರು ಒಟ್ಟಿಗೆ ಕಳೆದ ಖಾಸಗಿ ಕ್ಷಣಗಳ ಫೋಟೊವನ್ನು ಆತ ಕ್ಲಿಕ್ಕಿಸಿಕೊಂಡಿದ್ದಾನೆ. ಆನಂತರ ಅದು ವ್ಯಾಟ್ಸ್‌ಅಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಹರಿದಾಡಿದೆ.   ಮತ್ತೊಬ್ಬಳ ಜತೆ ಲವ್: ಈ ಯುವತಿಗಿಂತ ಮೊದಲು ಯಾಶೀರ್ ಇನ್ನೊಬ್ಬಳ ಜತೆ ಸ್ನೇಹವಿದ್ದು, ಮಂಗಳೂರು ಮೂಲದ ಆಕೆ ಕೆಲವು ಸಮಯದ ಹಿಂದೆ ಆಕೆ ವಿದೇಶಕ್ಕೆ ಹೋಗಿ ಅಲ್ಲಿ ತಂದೆ ತಾಯಿ ಜತೆಗೆ ನೆಲೆಸಿದ್ದಾಳೆ. ಆನಂತರವೂ ಆಕೆ ಈತನ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.   ಈ ನಡುವೆ, ಯಾಶೀರ್‌ಗೆ ಈ ಯುವತಿ ಜತೆ ಸ್ನೇಹಾಚಾರವಿದ್ದು, ಆಕೆಯ ಜತೆಗಿನ ಸಖ್ಯದ ಹಸಿಬಿಸಿ ಚಿತ್ರಗಳನ್ನು ತೆಗೆದಿದ್ದ. ಇದೀಗ ಈ ಚಿತ್ರದ ಅಪ್‌ಲೋಡ್ ಮಾಡುವಲ್ಲಿ ಮೊದಲ ಹುಡುಗಿಯ ಕೈವಾಡವಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಮಹಮ್ಮದ್ ಯಾಶೀರ್ ಮತ್ತು ಆಶಾ ವಿರುದ್ಧ ಸೈಬರ್ ಕೈಂ ಪ್ರಕರಣ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.   

ಹಣಕ್ಕಾಗಿ ಬೇಡಿಕೆ ಇಟ್ಟಿದ್ದನೇ? : ಆದರೆ ಈ ಫೋಟೊಗಳು ಹರಿದಾಡಲು ಬೇರೆ ಕಾರಣಗಳು ಇವೆ ಎಂಬ ಮಾತುಗಳು ಹರಿದಾಡುತ್ತಿವೆ. ಮೊದಲು ಈ ಫೋಟೊಗಳನ್ನು ಕ್ಲಿಕ್ಕಿಸಿಕೊಂಡ ಬಳಿಕ ಈತ ಈ ಚಿತ್ರಗಳನ್ನು ಬಹಿರಂಗಪಡಿಸದಿರಲು ಹತ್ತು ಲಕ್ಷ ರೂ. ಬೇಡಿಕೆ ಇಟ್ಟಿದ್ದನಂತೆ. ಮನೆಯವರು ಸ್ವಲ್ಪ ಹಣ ಕೊಟ್ಟು ಪ್ರಕರಣವನ್ನು ಅಲ್ಲಿಗೆ ಮುಗಿಸಲು ನೋಡಿದ್ದಾರೆ. ಅವರು ನೀಡಿದ ಹಣ ಕೊಂಡೋದ ಆತ ಮತ್ತೆ ಪೂರ್ತಿ ಹಣಕ್ಕೆ ಬೇಡಿಕೆ ನೀಡಿದ್ದಾನೆ. ಒಂದು ವಾರದ ಹಿಂದೆ ಹಣ ಕೊಡುವುದಾಗಿ ಕರೆಸಿದ ಮನೆಯವರು ಸರಿಯಾಗಿ ತದಕಿ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ಔಷಧ ಪಡೆದುಕೊಂಡ ಆತ, ಈ ಸಿಟ್ಟಿನಲ್ಲಿ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿದಾಡಲು ಬಿಟ್ಟಿದ್ದಾನೆ ಎನ್ನಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com