ಶಿಕ್ಷಣ ಮತ್ತು ಶಿಕ್ಷಕರು ಸಮಾಜದ ಆಸ್ತಿ : ಕೋಟ ಶ್ರೀನಿವಾಸ ಪೂಜಾರಿ

ಬೈಂದೂರು : ಸರಕಾರ ಪ್ರಾಥಮಿಕ ಹಂತದಲ್ಲಿ  ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎನ್ನುವ ನೆಲೆಯಲ್ಲಿ ಹತ್ತಾರು ವಿಭಿನ್ನ ಯೋಜನೆಗಳನ್ನು ರೂಪಿಸಿದೆ. ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಶಿಕ್ಷಣದ ಜೊತೆಗೆ ವ್ಯಕ್ತಿತ್ವಕ್ಕೆ ಪೂರಕವಾದ ಅಂಶಗಳನ್ನು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಮಾಡಬೇಕಾಗಿದೆ. ಆದರ್ಶ ವ್ಯಕ್ತಿತ್ವದ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಮೌಲ್ಯಯುತ ಶಿಕ್ಷಕರದ್ದಾಗಿದೆ. ಶಾಲೆಯ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಪ್ರೇಮಿಗಳ ಸಹಕಾರ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶಿರೂರು ಮಾದರಿ ಹಿ.ಪಾ. ಶಾಲೆಯ ನೂತನ ಕೊಠಡಿ ಹಾಗೂ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ನೂತನ ಕೊಠಡಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಶಿಕ್ಷಕರು ಹಾಗೂ ಪಾಲಕರು ಜವಾಬ್ದಾರಿಯುತವಾಗಿ ಸೇವೆ ನೀಡಿದಾಗ ಕನ್ನಡ ಮಾಧ್ಯಮ ಶಾಲೆಯ ಬೆಳವಣಿಗೆ ಸಾಧ್ಯ. ಪ್ರತಿಭಾವಂತರಿಗೆ ಮಾಧ್ಯಮ ಮುಖ್ಯವಲ್ಲ ಎಂದರು.



ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಶಾಲಾ ಹಸ್ತ ಪ್ರತಿ ಬಿಡುಗಡೆ ಮಾಡಿದರು. ಗ್ರಾ.ಪಂ. ಅಧ್ಯಕ್ಷ ರಾಮ ಮೇಸ್ತ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯೆ ಸಾವಿತ್ರಿ ಎನ್. ಮೊಗೇರ, ನಿವೃತ್ತ ಶಿಕ್ಷಕ ನಾರಾಯಣ ಶೆಟ್ಟಿ, ನಾರಾಯಣ ಬಿಲ್ಲವ, ಎಸ್.ಎಚ್.ಸತೀಶ್ ಕುಮಾರ ಶೆಟ್ಟಿ, ಪ್ರಕಾಶ ಪ್ರಭು, ಪುಷ್ಪರಾಜ ಶೆಟ್ಟಿ, ರವೀಂದ್ರ ಶೆಟ್ಟಿ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಶಂಕರ ಬಿಲ್ಲವ, ಸಿ.ಎನ್. ಬಿಲ್ಲವ, ಮಾಧವ ಬಿಲ್ಲವ, ಮುಖ್ಯ ಶಿಕ್ಷಕಿ ಸಾಧಿಕಾ, ವಿದ್ಯಾರ್ಥಿನಾಯಕ ಪ್ರಜ್ವಲ್ ಬಿಲ್ಲವ ಉಪಸ್ಥಿತರಿದ್ದರು.

 ದಿನಕರ ಶಿಕ್ಷಕರು ಸ್ವಾಗತಿಸಿ, ಸಹಶಿಕ್ಷಕ ಮಹಾದೇವ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು. ಜಲಾಲುದ್ದೀನ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com