ಎಎನ್‌ಫ್‌ ಕ್ಯಾಂಪ್‌ನಲ್ಲಿ ಗುಂಡು ಹಾರಿಕೊಂಡು ಪೊಲೀಸ್‌ ಆತ್ಮ ಹತ್ಯೆ ಮಾಡಿಕೊಳ್ಳಲು ಕಾರಣವೇನು?

ಸಿದ್ದಾಪುರ: ಕುಂದಾಪುರ ತಾಲೂಕಿನ ಅಮಾಸೆಬೈಲು ಠಾಣೆ ವ್ಯಾಪ್ತಿಯ ಜಡ್ಡಿನಗದ್ದೆ ನಕ್ಸಲ್‌ ನಿಗ್ರಹ ದಳದ ಕ್ಯಾಂಪಿನಲ್ಲಿ ನಕ್ಸ್‌ಲ್‌ ನಿಗ್ರಹ ದಳದ ಪೊಲೀಸ್‌ ಕಾನ್‌ಸ್ಟೆàಬಲ್‌ ತಲೆಗೆ ತನ್ನ ಗನ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.13ರ ಮಧ್ಯ ರಾತ್ರಿ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಬಲಾ°ಡು ಗ್ರಾಮದ ದೇವಸ್ಯ ನಿವಾಸಿ ಅಲ್ಬರ್ಟ ಡಿಸೋಜ(38 ) ರಾಗಿರುತ್ತಾರೆ. ಇವರು ಅವಿವಾಹಿತರಾಗಿದ್ದಾರೆ. ಅಲ್ಬರ್ಟ ಡಿಸೋಜ ಅವರು ಜಡ್ಡಿನಗದ್ದೆ ಕ್ಯಾಂಪಿನಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಒಂದು ವಾರದ ರಜೆಯ ಮೇಲೆ ಊರಿಗೆ ತೆರಳಿದ ಅವರು ಎರಡು ದಿನ ಹಿಂದೆ ಅಷ್ಟೆ ಕರ್ತವ್ಯಕ್ಕೆ ಹಾಜರಾಗಿದ ಅವರು ಸೋಮವಾರ ಕೂಂಬಿಂಗ್‌ ಕಾರ್ಯವನ್ನು ಮುಗಿಸಿ, ಸಂಜೆ ಕ್ಯಾಂಪಿಗೆ ವಾಪಾಸಾಗಿದ್ದರು. ಮತ್ತೆ ರಾತ್ರಿಯ ಪಾಳಿಯದಂತೆ ಪಹರೆ ಕಾಯಲು ಬಂದ ಅಲ್ಬರ್ಟ ಡಿಸೋಜಾ ರಾತ್ರಿ 11.20 ಸುಮಾರಿಗೆ ಎಸ್‌.ಎಲ್‌. ಆರ್‌. ಗನ್‌ನಿಂದ ಗಲ್ಲದ ಅತೀ ಸಮೀಪದಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ನಡೆದ ಕೂಡಲೇ ಸಮೀಪದಲ್ಲಿ ಪಹರೆ ಕಾಯುತ್ತಿದ್ದ ಅಧಿಕಾರಿಗಳು ಸ್ಥಳಕ್ಕೆ ದಾವಿಸಿದಾಗ ಅಲ್ಬರ್ಟ ಡಿಸೋಜಾ ಪ್ರಾಣ ಪ್ರಾಣಪಕ್ಷಿ ಹಾರಿಹೋಗಿತ್ತು. ಅಲ್ಬರ್ಟ ಡಿಸೋಜಾ ಅತೀ ಸಮೀಪದಿಂದ ಗುಂಡು ಹಾರಸಿಕೊಂಡಿದ್ದರಿಂದ ಅವರ ಗಲ್ಲದ ಕೆಳಬಾಗದಿಂದ ಹಾದುಹೋದ ಗುಂಡು ನಾಲಿಗೆ ಮೂಲಕ ತೂರಿ ನಂತರ ತಲೆಯ ಮೂಲಕ ಹೊರಕ್ಕೆ ಹೋಗಿದೆ. ಈ ಸಂದರ್ಭ ಅವರು ಶಿರಸ್ರಾಣವನ್ನು(ಹೆಲ್ಮೆಟ್‌) ದರಿಸಿದ್ದು ಅದು ಗುಂಡಿನ ರಭಸಕ್ಕೆ ತಲೆಯಿಂದ ಹಾರಿಹೋಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

2001 ರಿಂದ ಉಡುಪಿ ಜಿಲ್ಲೆಯಲ್ಲಿ ನಕ್ಸ್‌ಲ್‌ ಚಟುವಟಿಕೆ ಪ್ರಾರಂಭವಾದ ನಂತರ ಕುಂದಾಪುರ ತಾಲೂಕಿನ ಅಮಾಸೆಬೈಲಿನಲ್ಲಿ ನಕ್ಸ್‌ಲ್‌ ನಿಗ್ರಹಪಡೆಯ ಖಾಯಂ ಕ್ಯಾಂಪನ್ನು ತೆರೆಯಲಾಗಿತ್ತು. ಸೊಮೇಶ್ವರ ಆಭಯಾರಣ್ಯದ ಸರಹದ್ದಿನ ವ್ಯಾಪ್ತಿಯ ಜಡ್ಡಿನಗದ್ದೆಯ ಕ್ಯಾಂಪಿನ ರಕ್ಷಣೆ ಪ್ರತಿದಿನ 8 ಜನ ಶಸ್ತ್ರಸಜ್ಜಿತ ಯೋದರು ರಕ್ಷಣೆಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗುತ್ತಿದ್ದರು.

ಜಿಲ್ಲಾ ವರಿಷ್ಠಾಧಿಕಾರಿ ಡಾ| ಬೋರಲಿಂಗಯ್ಯ, ಅಡಿಷನಲ್‌ ಎಸ್‌ಪಿ. ಸಂತೋಷ್‌ ಶೆಟ್ಟಿ, ನಕ್ಸಲ್‌ ಡಿಐಜಿ. ಮನಿಶ್‌ ವಿ. ಕರ್ಬಿಕರ್‌, ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತನು ಸಿನ್ಹಾ, , ಕುಂದಾಪುರ ಹೆಚ್ಚುವರಿ ಪೊಲೀಸ್‌ ವರಿಷ್ಟ ಸಿ.ಬಿ. ಪಾಟೀಲ್‌, ವೃತ್ತ ನಿರೀಕ್ಷಕ ದಿವಾಕರ್‌, ನಕ್ಸ್‌ಲ್‌ ನಿಗ್ರಹ ಪಡೆ ವರಿಷ್ಟಾಧಿಕಾರಿ ಸುದರ್ಶನ್‌, ಅಮಾಸೆಬೈಲು ಪೊಲೀಸ್‌ ಉಪನಿರೀಕ್ಷ ನಾಸೀರ್‌ ಹುಸೇನ್‌, ಜಡ್ಡಿನಗದ್ದೆಯ ಕ್ಯಾಂಪಿನ ಪಿಎಸೈ ಶರತ್‌ ಎಂ., ಮುಂತಾದವರು ಸ್ಥಳಕ್ಕೆ ಬೇಟಿ ನೀಡಿ ಪರಿಶಿಲಿಸಿದ್ದರು. ನಂತರ ಕುಟುಂಬ ಸದಸ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದಾಗ ಕೂಡಲೆ ಅವರು ಆಗಮಿಸಿ, ಮಂಗಳವಾರ ಮುಂಜಾನೆ 5ರ ಸುಮಾರಿಗೆ ಮೃತದೇಹವನ್ನು ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಸಾಗಿಸಿದರು. ನಂತರ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಹುಟ್ಟೂರಿನಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತ್ತು. ಅಲ್ಬರ್ಟ ಡಿಸೋಜ ಅವರ ಮೃತ ದೇಹವನ್ನು ಜಡ್ಡಿನಗದ್ದೆಯಿಂದ ಮಂಗಳೂರಿನ ತನಕ ಕೊಂಡೊಯಿದು, ವೆನ್‌ಲಾಕ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಹುಟ್ಟೂರಿನಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡುವ ತನಕ ಅಮಾಸೆಬೈಲು ಪಿಎಸೈ ಅವರು ಶ್ರಮವಹಿಸಿದರು.

ಮೃದು ಸ್ವಭಾವದ ಅಲ್ಬರ್ಟ ಡಿಸೋಜಾ: ಅಲ್ಬರ್ಟ ಡಿಸೋಜ ಅವರು ಜಡ್ಡಿನಗದ್ದೆ ಕ್ಯಾಂಪಿನಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಬರ್ಟ ಡಿಸೋಜಾ ಬಹಳ ಮೃದು ಸ್ವಭಾವವದವರಾಗಿದ್ದು ಯಾವಾಗಲೂ ಕ್ರೀಯಾಶೀಲ ವ್ಯಕ್ತಿಯಾಗಿದ್ದರು. ಶಂಕರನಾರಾಯಣ ಠಾಣೆ ವ್ಯಾಪ್ತಿಯ ನಕ್ಸ್‌ಲ್‌ ನಿಗ್ರಹಪಡೆಯಲ್ಲಿ 2ವರ್ಷ ಕಾರ್ಯ ನಿರ್ವಹಿಸುತ್ತಿರುವಾಗಲೂ ಆತ ಎಲ್ಲರೊಂದಿಗೆ ಬೆರೆಯುತ್ತಿದ್ದರೂ. ಎಲ್ಲರ ವಿಶ್ವಾಸ ಮತ್ತು ಮೇಲಾಧಿಕಾರಿಗಳ ಪ್ರೀತಿಗಳಿಸಿದ್ದಾರೆ ಎಂದು ಜಡ್ಡಿನಗದ್ದೆ ನಕ್ಸಲ್‌ ದಳದ ಸಿಬ್ಬಂದಿಗಳು ಹೇಳುತ್ತಾರೆ.

ಮದುವೆ ನಿಶ್ಚಯ: ಅವಿವಾಹಿತರಾದ ಅಲ್ಬರ್ಟ ಡಿಸೋಜ ಅವರಿಗೆ ಜ.26ರಂದು ಮಡಿಕೇರಿಯ ಹುಡುಗಿಯೋರ್ವರೊಂದಿಗೆ ವಿವಾಹ ನಿಶ್ಚಿತಾರ್ಥ ನಿಗದಿಯಾಗಿತ್ತು. ಅಲ್ಲದೇ ಜ.5ರಮದು ಪುತ್ತೂರಿನ ತನ್ನ ಮನೆಗೆ ಬಂದು ನಿಶ್ಚಯಾರ್ಥಕ್ಕೆ ಬೇಕಾದ ಬಟ್ಟೆ ಬರೆಗಳನ್ನು ತೆಗೆದುಕೊಳ್ಳಲು ಹಣವನ್ನೂ ಸಹ ಕೊಟ್ಟು ಹೋಗಿದ್ದರು. ಅಲ್ಲದೇ ನಿತ್ಯವೂ ತಾನು ಮದುವೆಯಾಗುವ ಹುಡುಗಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಆದರೆ ಮನೆಯವರಿಗೆ ಮಾತ್ರ ಈ ಘಟನೆ ಏಕೆ ಸಂಭವಿಸಿದೆ ಎನ್ನುವುದು ನಿಗೂಢವಾಗಿದೆ.

ಕುಟುಂಬ ಸಮಸ್ಯೆ: ಅಲ್ಬರ್ಟ ಡಿಸೋಜ ಅವರು ಸೋಮವಾರ ಕೂಂಬಿಂಗ್‌ ಕಾರ್ಯವನ್ನು ಮುಗಿಸಿ, ರಾತ್ರಿ 10ಗಂಟೆಯ ತನಕ ಸ್ನೇಹಿತರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ನಗುತ್ತಾ ಮಾತನಾಡಿ, ಊಟ ಮಾಡಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ರಾತ್ರಿ 10ಗಂಟೆಯ ನಂತರ ಮನೆಯವರೊಂದಿಗೆ ಹಾಗೂ ನಿಶ್ಚಯವಾದ ಹುಡುಗಿಯೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಗೆ ಕೌಟುಂಬಿಕ ಸಮಸ್ಯೆ ಇರಬಹುದೆಂದು ಪೊಲೀಸರು ಹೇಳುತ್ತಾರೆ. ಮನೆಯಲ್ಲಿ ಮದುವೆಯಾಗದ ಅಣ್ಣ, ಆನಾರೋಗ್ಯದಿಂದ ಬಳಲುತ್ತಿರುವ ತಂದೆ-ತಾಯಿ ಇದ್ದಾರೆ. ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದ್ದಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com