ಸರಕಾರಿ ನೌಕರರಿಗೆ ಸಾಮಾಜಿಕ ಜಾಲ ತಾಣ ಬಂದ್

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರು ಇನ್ಮುಂದೆ ತಮ್ಮ ಕಚೇರಿಯಲ್ಲಿನ ಕಂಪ್ಯೂಟರ್ ಬಳಸಿ, ಅಂತರ್ಜಾಲದ ಮೂಲಕ ಸಾಮಾಜಿಕ ಜಾಲಗಳನ್ನೂ ಜಾಲಾಡುವಂತಿಲ್ಲ. ಈ ಹಿಂದೆ ವಿಧಾನಸೌಧದಲ್ಲಿರುವ ಅಧಿಕಾರಿಗಳೂ ಸೇರಿದಂತೆ ರಾಜ್ಯದ ಹಲವೆಡೆ ಸರಕಾರಿ ಕಚೇರಿಗಳಲ್ಲಿ ಅಂತರ್ಜಾಲದ ಮೂಲಕ ಅಶ್ಲೀಲ ಚಿತ್ರಪಟಗಳನ್ನು ನೋಡುತ್ತಾರೆ ಎಂಬ ವರದಿಯನ್ನಾಧರಿಸಿ, ಸರಕಾರ ಈಗಾಗಲೇ ಪೋರ್ನ್ ವೆಬ್ ಸೈಟ್ ಗಳನ್ನು ನಿಷೇಧಿಸಿದೆ. ಇದೀಗ, Facebook ಮತ್ತು Twitter ನಂತಹ ವೈಯಕ್ತಿಕ ಜಾಲತಾಣಗಳನ್ನೂ ಬಳಸುವಂತಿಲ್ಲ ಎಂದು ಸರಕಾರಿ ಆದೇಶ ಹೊರಬಿದ್ದಿದೆ. ಮೂರು ತಿಂಗಳ ಹಿಂದೆ ಸರಕಾರವು ಪೋರ್ನ್ ವೆಬ್ ಸೈಟ್ ಗಳು ಮತ್ತು ಮನರಂಜನಾ ತಾಣಗಳನ್ನು ನಿಷೇಧಿಸಿತ್ತು. ಆದರೆ ಸುದ್ದಿ ಮಾಧ್ಯಮ ವೆಬ್ ಸೈಟ್ ಗಳನ್ನು ನೋಡಿ. ನ್ಯೂಸ್ ಅಪ್ ಡೇಟ್ ಮಾಡಿಕೊಳ್ಳಬಹುದಾಗಿದೆ. kar.nic.in ಮೂಲಕ ಕರ್ನಾಟಕ ಸರಕಾರಿ ನೌಕರರು ಯಾವುದೇ ಎಗ್ಗಿಲ್ಲದೆ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದಾರೆ ಎಂದು Central Bureau of Investigation ವರದಿ ಸಲ್ಲಿಸಿತ್ತು. ಭಯೋತ್ಪಾದನೆ ಚಟುವಟಿಕೆಗಳ ಮೇಲೆ ನಿಗಾಯಿಟ್ಟಿದ್ದ ಸಿಬಿಐಗೆ ಕರ್ನಾಟಕದ ಸರಕಾರಿ ನೌಕರರು ಅಶ್ಲೀಲ ಚಿತ್ರಗಳನ್ನು ನೋಡುತ್ತಿರುವುದು ಅಚಾನಕ್ಕಾಗಿ ಕಂಡುಬಂದಿತ್ತು.  ಇದೀಗ Vidhana Soudha, Vikasa Soudha, M S Building ಮತ್ತು Visvesvaraya Towersಗಳಲ್ಲಿರುವ ಸರಕಾರಿ ಕಚೇರಿಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು e-shopping site ಸೈಟ್ ಗಳನ್ನು department of e-governance ನಿಷೇಧಿಸಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ತಿಳಿಸಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com