ಉಗ್ರ ಯಾಸಿನ್‌ ಭಟ್ಕಳ್‌ ಬಿಡುಗಡೆಗಾಗಿ ಕೇಜ್ರಿವಾಲ್‌ ಅಪಹರಣಕ್ಕೆ ಸಂಚು

ನವದೆಹಲಿ: ಕರ್ನಾಟಕ ಪೊಲೀಸರ ವಶದಲ್ಲಿರುವ ಉಗ್ರ ಯಾಸಿನ್‌ ಭಟ್ಕಳ್‌ನನ್ನು ಬಿಡುಗಡೆ ಮಾಡಿಸಿಕೊಳ್ಳುವ ಸಲುವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಅಪಹರಿಸಲು ಇಂಡಿಯನ್‌ ಮುಜಾಹಿದ್ದೀನ್‌ ಉಗ್ರಗಾಮಿ ಸಂಘಟನೆ ಸಂಚು ರೂಪಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಜೈಶ್‌ ಎ ಮೊಹಮ್ಮದ್‌ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜಾರ್‌ ಮತ್ತು ಇತರೆ ಇಬ್ಬರನ್ನು ಬಿಡುಗಡೆಗೊಳಿಸಿಕೊಳ್ಳುವುದಕ್ಕೆ ಏರ್‌ ಇಂಡಿಯಾ ವಿಮಾನವನ್ನು ಉಗ್ರರು 1999ರಲ್ಲಿ ಹೈಜಾಕ್‌ ಮಾಡಿದ್ದರು. ಈಗ ಇದೇ ತಂತ್ರವನ್ನು ಅನುಸರಿಸಲು ಉಗ್ರರು ಮುಂದಾಗಿದ್ದು ಇಲ್ಲಿ ವಿಮಾನದ ಬದಲಿಗೆ ದೆಹಲಿ ಮುಖ್ಯಮಂತ್ರಿ ಅವರನ್ನು ಅಪಹರಿಸಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

ಯಾವುದೇ ಪೊಲೀಸ್‌ ಭದ್ರತೆ ಪಡೆಯದಿರುವ ಕಾರಣ ಕೇಜ್ರಿವಾಲ್‌ ಅವರಿಗೆ ಉಗ್ರರಿಂದ ಅಪಾಯವಿದೆ ಎಂದು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಝಡ್‌ ಶ್ರೇಣಿ ಭದ್ರತೆ ಪಡೆಯುವಂತೆ ಕೇಜ್ರಿವಾಲ್‌ ಅವರಿಗೆ ಮತ್ತೂಮ್ಮೆ ತಿಳಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
  
ಆದರೆ ಪೊಲೀಸರ ಈ ಮನವಿ ತಿರಸ್ಕರಿಸಿರುವ ಕೇಜ್ರಿವಾಲ್‌, 'ನನಗೆ ಪ್ರಾಣಭಯವಿಲ್ಲ. ಮೊದಲು ದಿಲ್ಲಿ ನಾಗರಿಕರಿಗೆ ಪೊಲೀಸರು ಭದ್ರತೆ ನೀಡಲಿ' ಎಂದು ಪುನರುಚ್ಚರಿಸಿದ್ದಾರೆ.

ಹೈದರಾಬಾದ್‌ ಏರ್‌ಪೋರ್ಟಲ್ಲೂ ಹೈ ಅಲರ್ಟ್‌:

ಭಟ್ಕಳನನ್ನು ಬಿಡಿಸಿಕೊಳ್ಳಲು ವಿಮಾನ ಅಪಹರಿಸಲಾಗುವ ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹೈದರಾಬಾದ್‌ ಏರ್‌ಪೋರ್ಟ್‌ನಲ್ಲೂ ಕಟ್ಟೆಚ್ಚರ ಸಾರಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com