ಬಡಕ್ಕಯಿ ತೇರ್ ಯಾತ್ರೆಗೆ ಬಾರಕೂರಿನಲ್ಲಿ ಚಾಲನೆ

ಬ್ರಹ್ಮಾವರ: ತುಳು ತೇರು ಅಂದರೆ ಭಾಷೆಯ ಮತ್ತು ಸಂಸ್ಕೃತಿಯ ತೇರು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವ್ವಾಮೀಜಿ ಹೇಳಿದರು. 

ದೇವಾಲಯಗಳ ನಗರ, ತುಳು ನಾಡ ರಾಜಧಾನಿ ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ತುಳು ನಾಡ ತೇರಿನ ರಥಯಾತ್ರೆ ಚಾಲನೆಯ ಬಳಿಕ ಕಲ್ಲು ಚಪ್ಪರದ ಬಳಿ ಜರುಗಿದ ಸಭೆಯಲ್ಲಿ ಆಶೀರ್ವಚನ ನೀಡಿದರು. 

ಭಾಷೆಗಳು ಬಾಂಧವ್ಯ, ಸಂಬಂಧ ಬೆಸೆಯುತ್ತದೆ. ಭಾಷಾಭಿಮಾನ ಇದ್ದರೆ ಮಾತ್ರ ರಾಷ್ಟ್ರಾಭಿಮಾನ ಇರಲು ಸಾಧ್ಯ ಎಂದರಲ್ಲದೆ ಜನವರಿ ತಿಂಗಳಲ್ಲಿ ಮಂಗಳೂರಿನಲ್ಲಿ ಜರುಗುವ ವಿಜಯ ಸಂಭ್ರಮ-2014 ಭಾಷೆ ಹಬ್ಬಕ್ಕೆ ಸಾರ್ವಜನಿಕರನ್ನು ಅಹ್ವಾನಿಸಿದರು. 

ಬಾರಕೂರು ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಂಟ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೋಕ್ತೇಸರ ಬೈಕಾಡಿ ಸುಪ್ರಸಾದ್ ಶೆಟ್ಟಿ ಮತ್ತು ಬಾರಕೂರಿನ ನಾನಾ ದೇವಸ್ಥಾನದ ಆಡಳಿತ ಸಮಿತಿಯ ಮಂಜುನಾಥ್ ರಾವ್, ಶ್ರೀನಿವಾಸ ಶೆಟ್ಟಿಗಾರ, ಉದಯ ಕುಮಾರ್ ಶೆಟ್ಟಿ,ಉಮೇಶ್ ಆಚಾರ್ಯ, ಕೂಡ್ಲಿ ಸತ್ಯ ನಾರಾಯಣ ಉಡುಪ, ಗಣೇಶ್ ಕುಂದರ್, ಎನ್. ಭೋಜ ರಾಜ್ ಶೆಟ್ಟಿ, ಸಮಿತಿಯ ತಾರಾನಾಥ ಕೊಟ್ಟಾರಿ ಉಪಸ್ಥಿತರಿದ್ದರು. 

ಪಂಚಲಿಂಗೇಶ್ವರ ದೇವಸ್ಥಾನದಿಂದ 2 ಕಿ.ಮೀ. ದೂರದ ಕಲ್ಲುಚಪ್ಪರದ ತನಕ ಸಹಸ್ರಾರ ಜನರು ರಥ ಯಾತ್ರೆಯ ಮೆರವಣಿಗೆಯಲ್ಲಿದ್ದರು. ರಥ ಜಾತ್ರೆಯ ಸಂಯೋಜಕ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ ಸ್ವಾಗತಿಸಿದರು. ವೆಂಕಟರಮಣ ಭಂಡಾರ್‌ಕರ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com