ಸಂಭ್ರಮದ ಪರ್ಯಾಯೋತ್ಸವ

ಉಡುಪಿ: ಸಂಭ್ರಮ, ಸಡಗರದಲ್ಲಿ ಶ್ರೀಕಾಣಿಯೂರು ಮಠದ ಪರ್ಯಾಯೋತ್ಸವಕ್ಕೆ ಶನಿವಾರ ಮುಂಜಾವ ಚಾಲನೆ ದೊರಕಿದೆ. ಉಡುಪಿ ನಗರಾದ್ಯಂತ ವಿದ್ಯುದ್ದೀಪಾಲಂಕಾರವಿದ್ದು ಜನಮನ ಗೆದ್ದಿದೆ. ವಿವಿಧೆಡೆಗಳಲ್ಲಿ ಸಾಂಸ್ಕೃತಿಕ ರಸದೌತಣ. ನಗರಪೂರ್ತಿ ಜಾಗರವಿದ್ದು ಭಾವೀ ಪರ್ಯಾಯ ಮಠಾಧೀಶ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರನ್ನು ಸ್ವಾಗತಿಸಿದರು.

ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಶ್ರೀಕಾಣಿಯೂರು ಮಠ ಪರಂಪರೆಯಲ್ಲಿ 30ನೆಯವರು. ಪರ್ಯಾಯ ಪೀಠದಿಂದ ನಿರ್ಗಮಿಸುತ್ತಿರುವವರು ಶ್ರೀಸೋದೆ ಮಠ ಪರಂಪರೆಯಲ್ಲಿ 36ನೆಯವರು. ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಿಂದಿನ ಪರ್ಯಾಯದಲ್ಲಿ ಒಂದು ವರ್ಷ ಪರ್ಯಾಯವನ್ನು ನಡೆಸಿದ ಅನುಭವ ಹೊಂದಿದ್ದಾರೆ.

ಶನಿವಾರ ಮುಂಜಾನೆ ಕಾಪು ಬಳಿಯ ದಂಡತೀರ್ಥದಲ್ಲಿ ಸ್ನಾನ, ಅಲ್ಲಿಂದ ಜೋಡುಕಟ್ಟೆಗೆ ಆಗಮನ, ಅಲ್ಲಿ ಪರ್ಯಾಯೋತ್ಸವದ ದಿನ ಮಾತ್ರ ಮಠಾಧೀಶರು ಪೇಟ ಸುತ್ತಿಕೊಳ್ಳುವ ಸಂಪ್ರದಾಯ. ವಿವಿಧ ಬ್ಯಾಂಡ್‌ ಸೆಟ್‌, ವಾದ್ಯೋಪಕರಣಗಳು- ಟ್ಯಾಬ್ಲೋಗಳ ವೈಭವದ ಮೆರವಣಿಗೆ, ಭಾವೀ ಪರ್ಯಾಯ ಪೀಠಾಧೀಶರ ಪಟ್ಟದ ದೇವರಾದ ನರಸಿಂಹನ ಪ್ರತಿಮೆಯನ್ನು ಪಲ್ಲಕಿಯಲ್ಲಿರಿಸಿ ಹಿಂದಿನಿಂದ ಕಾಣಿಯೂರು ಮಠಾಧೀಶರು, ಅನಂತರ ಆಶ್ರಮ ಜ್ಯೇಷ್ಠತ್ವದಂತೆ ಪೇಜಾವರ, ಕೃಷ್ಣಾಪುರ ಮೊದಲಾದ ಶ್ರೀಗಳವರ ಮೆರವಣಿಗೆ....

ನಿಂತುಹೋದ ಭಕ್ತರು ಹೊರುವ ಪಲ್ಲಕಿ

ಇದುವರೆಗೆ ಸ್ವಾಮೀಜಿಯವರು ಪಲ್ಲಕಿಯಲ್ಲಿ ಕುಳಿತು ಅದನ್ನು ಭಕ್ತರು ಹೊತ್ತು ಮೆರವಣಿಗೆಯಲ್ಲಿ ಬರುತ್ತಿದ್ದರು. ಈ ಬಾರಿಯಿಂದ ಇದರ ಬದಲು ವಾಹನದ ಮೇಲೆ ಪಲ್ಲಕಿ ಇರಿಸಿ ಅದರ ಮೇಲೆ ಸ್ವಾಮೀಜಿ ಕುಳಿತುಕೊಂಡು ಬರಲು ಪೇಜಾವರ ಶ್ರೀಪಾದರು ನಿರ್ಧರಿಸಿದರು. ಇದನ್ನು ಉಳಿದವರೂ ಪಾಲಿಸುವ ಸಾಧ್ಯತೆ ಹೆಚ್ಚಾಗಿದೆ. ಯಾರು ಹೇಗೆ ಬಂದರೂ ಹೊತ್ತುಕೊಂಡು ಬರುವ ಸಾಧ್ಯತೆ ಇಲ್ಲವಾಗಿದೆ.

ಉದಯವಾಣಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com