ಅಶ್ಲಿಲ ಚಿತ್ರ ಪ್ರಕರಣ: ಫೇಸ್‌ಬುಕ್‌ನಲ್ಲಿ ಮತ್ತಷ್ಟು ಮಾನಹಾನಿ

ಉಡುಪಿ: ವಿದ್ಯಾರ್ಥಿನಿಯೊಂದಿಗೆ ಅಶ್ಲೀಲ ಭಂಗಿಯಲ್ಲಿರುವ ಚಿತ್ರವು ಆರೋಪಿ ಮಹಮ್ಮದ್‌ ಯಾಸೀರ್‌ನ ಫೇಸ್‌ಬುಕ್‌ನಲ್ಲಿ ಯಾವ ರೀತಿಯಲ್ಲಿ ಅಪ್‌ಲೋಡ್‌ ಆಗಿದೆಯೋ ಅದಕ್ಕಿಂತಲೂ ಒಂದು ಪಟ್ಟು ಹೆಚ್ಚು ಎನ್ನುವಂತೆ ಇತರರ ಫೇಸ್‌ಬುಕ್‌ ಖಾತೆಯಲ್ಲಿ ಅಶ್ಲೀಲ ಚಿತ್ರಗಳು ಹರಿದಾಡುತ್ತಿದೆ. ವಿದ್ಯಾರ್ಥಿನಿಯ ಚಿತ್ರವನ್ನು ಬ್ಲಿರ್‌ ಮಾಡದೆ ನೇರವಾಗಿ ಕೆಲವರು ಬಳಸಿಕೊಂಡಿದ್ದಾರೆ. ಈ ರೀತಿಯಾಗಿ ಕೆಲವರು ವಿದ್ಯಾರ್ಥಿನಿಯ ಮಾನವನ್ನು ಮತ್ತಷ್ಟು ಹರಾಜು ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಾನಹಾನಿಕರವಾಗಿ ಚಿತ್ರ ಪಸರಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

ವಿವಿಧ ಮಸಾಲೆ ಭರಿತ ತಲೆಬರಹ, ಇನ್ನಿತರ ಕೆಟ್ಟ ಶಬ್ದಗಳನ್ನು ಉಪಯೋಗಿಸಿಕೊಂಡು ಫೇಸ್‌ಬುಕ್‌ನಲ್ಲಿ ವಿದ್ಯಾರ್ಥಿನಿಯ ಚಿತ್ರವನ್ನು ಅಪ್‌ಲೋಡ್‌ ಮಾಡಲಾಗಿದೆ. ಇದನ್ನು ಹಲವರಿಗೆ ಟ್ಯಾಗ್‌ ಮಾಡಲಾಗುತ್ತಿದೆ. ಇನ್ನು ಕೆಲವರು ಶೇರ್‌, ಲೈಕ್‌, ಕಮೆಂಟ್‌ ಮಾಡಿಕೊಳ್ಳುತ್ತಿರುವುದು ಹೆಚ್ಚುತ್ತಲಿದೆ. ಈ ಬಗ್ಗೆ ಹಿಂದು ಸಂಘಟನೆಗಳ ಪ್ರಮುಖರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಶ್ಲೀಲ ಚಿತ್ರಗಳನ್ನು ಮೊಬೈಲ್‌ನಲ್ಲಿ ಇರಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ. ಅಂತಹದರಲ್ಲಿ ಫೇಸ್‌ಬುಕ್‌ನಲ್ಲಿ ಮುಕ್ತವಾಗಿ ಅಶ್ಲೀಲ ಚಿತ್ರಗಳು ಹರಿದಾಡುತ್ತಿದೆ ಎಂದರೆ ಅಪರಾಧವಲ್ಲವೆ. ಮಾಧ್ಯಮಗಳಿಗೆ ಬಿಡುಗಡೆಗೊಂಡ ಚಿತ್ರಕ್ಕಿಂತ ಭಿನ್ನಭಿನ್ನವಾದ ಚಿತ್ರಗಳು ಇತರ ಯುವಕರಿಗೆ ಎಲ್ಲಿಂದ? ಹೇಗೆ? ಸಿಕ್ಕಿತು ಎನ್ನುವುದರ ಕುರಿತು ಸೈಬರ್‌ ಕ್ರೈಂ ಪೊಲೀಸರು ತನಿಖೆ ನಡೆಸಿ ಕಿಡಿಗೇಡಿ ಕೃತ್ಯಕ್ಕೆ ಬ್ರೇಕ್‌ ಹಾಕಬೇಕು. ಇಲ್ಲವಾದರೆ ಇಂತಹ ಕೃತ್ಯಗಳು ಮತ್ತೆ ಮತ್ತೆ ಮುಂದುವರಿಯಬಹುದು ಎಂದು ಹಿಂದು ಸಂಘಟನೆಯ ಮುಖಂಡರು ಎಚ್ಚರಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com