ಪ್ರತಿಭಾ ರಂಜನೆ-2013: ಸಂಘಟನೆ ನಾಯಕತ್ವ ರೂಪಿಸಲಿ

ಮರವಂತೆ :  ಸಮುದಾಯ ಸಂಘಟನೆಗಳು ತಮ್ಮ ಎಲ್ಲೆಯನ್ನು ಮೀರಿ ಕೆಲಸ ಮಾಡುವ ಮೂಲಕ ಎಲ್ಲರ ನಡುವೆ ಸೌಹಾರ್ದತೆ ಸಾಧಿಸುವುದರ ಜತೆಗೆ ನಾಯಕತ್ವ ರೂಪಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಮರವಂತೆಯ ವಿಶ್ವಕರ್ಮ ಸಮಾಜ ಸೇವಾ ಸಂಘ ಈಚೆಗೆ ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಧನಾ ಮಂಟಪದಲ್ಲಿ ನಡೆಸಿದ 'ಪ್ರತಿಭಾ ರಂಜನೆ-2013' ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಅವರು ಮಾತನಾಡಿದರು.

   ಸಂಘದ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಇನ್ನೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವಿಶ್ವಕರ್ಮ ಸಮುದಾಯವು ಹಿರಿಯರು ಹಾಕಿಕೊಟ್ಟ ಪರಂಪರೆಯಲ್ಲಿ ಮುಂದಕ್ಕೆ ಸಾಗುತ್ತಿದೆ. ಅದರೊಂದಿಗೆ ತನ್ನ ಮಕ್ಕಳ ಶಿಕ್ಷಣಕ್ಕೂ ಮಹತ್ವನೀಡಿ ಸಮಾಜ ಕಟ್ಟುವತ್ತ ಗಮನ ಹರಿಸಬೇಕು ಎಂದರು. ಸ್ಥಳೀಯ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ, ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಯು. ಕೆ. ಎಸ್. ಸೀತಾರಾಮ ಆಚಾರ್ಯ, ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ತ್ರಾಸಿ ಸುಧಾಕರ ಆಚಾರ್ಯ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ಉದ್ಯಮಿ ಸತೀಶ ಪಿ. ಮರವಂತೆ ಶುಭ ಹಾರೈಸಿದರು. 

   ಸುಭಾಸ್ ಆಚಾರ್ಯ ಸ್ವಾಗತಿಸಿದರು. ಕರುಣಾಕರ ಆಚಾರ್ಯ ಪ್ರಸ್ತಾವನೆಗೈದರು. ಚಂದ್ರಶೇಖರ ಆಚಾರ್ಯ ಪರಿಚಯಿಸಿದರು. ಜನಾರ್ದನ ಆಚಾರ್ಯ ಮತ್ತು ದೀಪಾ ಚಂದ್ರ ಆಚಾರ್ಯ ನಿರೂಪಿಸಿದರು. ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕಾಲೇಜನ್ನು ಪ್ರತಿನಿಧಿಸಿದ ನಾವುಂದ ಗಣೇಶ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶಕುಮಾರ ಶೆಟ್ಟಿ, ಕಿರುತೆರೆ ನಟ, ರಂಗಕರ್ಮಿ ಸತೀಶ ಪಿ. ಮಧ್ಯಸ್ಥ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮೂಹ ನೃತ್ಯ, ನಾಟಕ ಪ್ರದರ್ಶನಗೊಂಡವು. 

   ಬೆಳಗ್ಗಿನ ಸ್ಪರ್ಧೆಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಎ. ಸುಗುಣಾ ಉದ್ಘಾಟಿಸಿದ್ದರು. ನಾವುಂದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಗದೀಶ ಪೂಜಾರಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೆಟ್ಟಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಕೆ. ಗೋಪಾಲ ಮುಖ್ಯ ಅತಿಥಿಗಳಾಗಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com