ಬೆಳ್ಳಿರಥ ಶ್ರೀ ದೇವಳಕ್ಕೆ ಹಸ್ತಾಂತರ

ಗೋಪಾಡಿ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಸಪ್ತ ರಥೋತ್ಸವದ ಅಂಗವಾಗಿ ನಿರ್ಮಾಣವಾಗುತ್ತಿರುವ ಶ್ರೀ ದೇವರ ಬೆಳ್ಳಿ ರಥದ ಕುಸುರಿ ಕೆಲಸ ಪೂರ್ಣಗೊಂಡಿದ್ದು, ಈ ಬೆಳ್ಳಿ ರಥವನ್ನು ಶಾಸ್ತ್ರೋಕ್ತವಾಗಿ ದೇವಳಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ಜ. 13ರಂದು ಸಂಜೆ ನಡೆಯಿತು.
   ಪ್ರಸಿದ್ಧ ಶಿಲ್ಪಿ ಸಹೋದರರಾದ ಸ್ವರ್ಣ ಶಿಲ್ಪಿ ಗೋಪಾಡಿ ಪ್ರಭಾಕರ ಆಚಾರ್ಯ ಹಾಗೂ ಗೋಪಾಡಿ ಕೃಷ್ಣಯ್ಯ ಆಚಾರ್ಯ ಈ ಬೆಳ್ಳಿ ರಥದ ಕುಸುರಿ ಕೆಲಸವನ್ನು ನೆರವೇರಿಸಿದ್ದಾರೆ.
ಈ ಸಂದರ್ಭ ದೇವಳದ ಸಿಬ್ಬಂದಿಗಳಾದ ಪ್ರಭಾಕರ ಮಯ್ಯ, ಗುರು ಮೂರ್ತಿ ಭಟ್‌, ಶಂಕರ ದೇವಾಡಿಗ, ರಘು ಹೆಬ್ಟಾರ್‌ ಹಾಗೂ ತಾಂತ್ರಿಕ ಶಿಲ್ಪಿ ಕೋಟ ರಾಮಚಂದ್ರ ಆಚಾರ್ಯ, ಕಳೆದ ಒಂದು ವರ್ಷಗಳಿಂದಲೂ ಈ ಬೆಳ್ಳಿರಥದ ಕುಸುರಿ ಕೆಲಸದಲ್ಲಿ ನಿರತರಾಗಿದ್ದ ಶಶಿಧರ ಆಚಾರ್ಯ, ದಿನೇಶ್‌ ಆಚಾರ್ಯ, ಮಂಜುನಾಥ ಆಚಾರ್ಯ, ಪ್ರಶಾಂತ್‌ ಆಚಾರ್ಯ, ವಾಸುದೇವ ಆಚಾರ್ಯ ಹಾಗೂ ಗಜೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com