ಸಾಹಿತ್ಯ ಕ್ಷೇತ್ರಕ್ಕೆ ಗೋಪಾಲಕೃಷ್ಣ ಅಡಿಗರ ಕೊಡುಗೆ ಅಪಾರ

ಬೈಂದೂರು: ಕನ್ನಡದ ಮಾರ್ಗದರ್ಶಕ ಕವಿ ದಿ. ಮೊಗೇರಿ ಗೋಪಾಲಕಷ್ಣ ಅಡಿಗರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ. ಅವರ ರಾಜಕೀಯ ಚಿಂತನೆಗಳು ಮತ್ತು ಪರಿಸರ ಸಂಬಂಧಿಸಿದ ನಿಲುವುಗಳು ಇಂದಿಗೂ ಸಹ ಪಥ ದರ್ಶಕಗಳಾಗಿವೆ ಎಂದು ಬೆಂಗಳೂರು ಭಾರತೀಯ ವಿದ್ಯಾಭವನದ ಮಾಧ್ಯಮ ಭಾರತಿ ನಿರ್ದೇಶಕ ಎಂ. ಜಯರಾಮ ಅಡಿಗ ಹೇಳಿದರು. 

ಉಪ್ಪ್ಪುಂದ ಶಂಕರ ಕಲಾ ಮಂದಿರದಲ್ಲಿ ಜೆಸಿಐ ಉಪ್ಪ್ಪುಂದ, ಸಿರಿ ಮೊಗೇರಿ ಸಾಹಿತ್ಯ ಸಂಸ್ಕೃತಿ ಪ್ರಯರ ಬಳಗ ಮತ್ತು ಕುಂದ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ ಕವಿ ಅಡಿಗರ 90ನೇ ಜನ್ಮದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾದ ಮೋಹನ ಮುರಳಿ ಅಡಿಗರು ವಿಚಾರ ಸಂಕಿರಣ, ಕವಿಗೋಷ್ಠಿ-ಭಾವಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಪ್ರಾಸ್ತಾವಿಕ ಮಾತನಾಡಿದ ಕುಂದ ಅಧ್ಯಯನ ಕೇಂದ್ರದ ಸಂಸ್ಥಾಪಕ ಉಪ್ಪುಂದ ಚಂದ್ರಶೇಖರ ಹೊಳ್ಳರು ಮೊಗೇರಿ ಅಡಿಗರು ಈ ಭಾಗದ ಉತ್ಕೃಷ್ಟ ಮಾದರಿ ವ್ಯಕ್ತಿಯಾಗಿದ್ದು, ಅವರ ಕೃತಿಗಳು ಪ್ರಾದೇಶಿಕ ಅಧ್ಯಯನ ಮತ್ತು ಸಂಘಟನೆಗೆ ಚೈತನ್ಯದಾಯಕವಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಅನಿಲ್ ಕುಮಾರ್ ಶೆಟ್ಟಿ ಅಡಿಗರ ಮೋಹನ ಮುರಳಿಯನ್ನು ಪು.ತಿ.ನರ ಯದುಗಿರಿಯ ಬೆಳಕು ಕವನದೊಂದಿಗೆ ತುಲನಾತ್ಮಕವಾಗಿ ಅರ್ಥೈಸಿದರು. ಜೇಸಿಐ ಸುಧಾಕರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದು, ಜೇಸಿಐ ಸ್ಥಾಪಕಾಧ್ಯ್ಯಕ್ಷ ದಿವಾಕರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಮಂಗೇಶ ಶ್ಯಾನುಭಾಗ್, ಕಾರ್ಯದರ್ಶಿ ಗುರುಪ್ರಸಾದ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com