ಮಂಗಳೂರು ಬೆಂಗರೆಯಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ

ಮಂಗಳೂರು: ಸಾಹಿತ್ಯಾಸಕ್ತರ ಕುತೂಹಲಕ್ಕೆ ಕಾರಣವಾಗಿರುವ ವಿಶ್ವದ ಏಕೈಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ೫ ನೇ ಆಚರಣೆ ಫೆಬ್ರವರಿ ೧೪ ರಂದು ಸಂಜೆ ೬.೦೦ ರಿಂದ ಮರುದಿನ ಬೆಳಗ್ಗೆ ೬.೦೦ ರವರೆಗೆ ಮಂಗಳೂರಿನ ಬೆಂಗರೆಯಲ್ಲಿ "ಸಾಹಿತ್ಯ ಪ್ರೇಮಿಗಳ ದಿನಾಚರಣೆ" ಎಂಬ ಶೀರ್ಷಿಕೆ ಮತ್ತು "ಮಾನವ ಕುಲಂ ತಾನೊಂದೆ ವಲಂ" ಎಂಬ ಸದಾಶಯದೊಂದಿಗೆ ಸಾಹಿತಿ ನಾ. ಮೊಗಸಾಲೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಆ ದಿನ ಸಂಜೆ ೫.೦೦ ರಿಂದ ೫.೩೦ ವರೆಗೆ ಅಧ್ಯಕ್ಷರೊಂದಿಗೆ ಸಮುದ್ರ ವಿಹಾರ ಕಾರ್ಯಕ್ರಮ ಮೆರವಣಿಗೆಯಂತೆ ನಡೆಯಲಿದೆ ಎಂದು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ತಿಳಿಸಿದರು.
ಅವರು ನೇತ್ರಾವತಿ, ಗುರುಪುರ ಮತ್ತು ಸಮುದ್ರಗಳ ಸಂಗಮ ಅಳಿವೆ ಬಾಗಿಲಿನಲ್ಲಿ ಹಡಗಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಮ್ಮ ಪರ್ಯಾಯ ದ್ವೀಪದಲ್ಲಿ ಈ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಿದ್ದೇವೆ, ಸರ್ವರ ಸಹಕಾರ ಬೇಕು ಎಂದು ಬೆಂಗರೆ ಮಹಾಜನ ಸಭಾದ ಅಧ್ಯಕ್ಷ ಶೇಖರ ಸುವರ್ಣ ಅವರು ಹೇಳಿದರು.
ತ್ರಿವೇಣಿ ಸಂಗಮದಂತಹ ಅಳಿವೆ ಬಾಗಿಲಿನಲ್ಲಿ ಹಡಗಿನಲ್ಲಿ ಈ ವಿಶಿಷ್ಠ ಪತ್ರಿಕಾ ಗೋಷ್ಠಿ ನಡೆದಿರುವುದೇ ಈ ಸಮ್ಮೇಳನದ ಯಶಸ್ವಿಗೆ ಮುನ್ನುಡಿಯಾಘಿದೆ ಎಂದು ಸಭಾದ ಪ್ರಧಾನ ಕಾರ್ಯದರ್ಶಿ ಸಂಜಯ ಸುವರ್ಣ ಅಭಿಪ್ರಾಯಿಸಿದರು.
ನಮ್ಮ ಪುಟ್ಟ ಊರಿನಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳು ನಡೆದಿವೆ ಆದರೆ ಸಾಹಿತ್ಯದ ಅದರಲ್ಲೂ ಬೆಳದಿಂಗಳ ಕಾರ್ಯಕ್ರಮ ಮೊದಲ ಬಾರಿಗೆ ನಡೆಯುತ್ತಿರುವುದು ಸಂತೋಷ ಮತ್ತು ಅದನ್ನು ಈ ಜಾಗಕ್ಕೆ ತಂದ ಸಮಿತಿಯವರು ಅಭಿನಂದನಾರ್ಹರು ಎಂದು ೬೦ ನೇ ವಾರ್ಡಿನ ಮಹಾನಗರ ಪಾಲಿಕಾ ಸದಸ್ಯೆ ಮೀರಾ ಕರ್ಕೇರಾ ತಿಳಿಸಿದರು.
ಸಮ್ಮೇನವನ್ನು ಖ್ಯಾತ ವಾಗ್ಮಿ, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಅವರು ಮತ್ತು ಮಕ್ಕಳ ಪ್ರತಿಭೋತ್ಸವವನ್ನು ಗಲಿ ಗಿಲಿ ಮ್ಯಾಜಿಕ್‌ನ ಜ್ಯೂ. ಶಂಕರ್ ಅವರು ಉದ್ಘಾಟಿಸುವರು. ಸಮ್ಮೇಳನದ ಸಂಪ್ರದಾಯದಂತೆ ಯುವ ಸಾಧಕ, ರಂಗಕರ್ಮಿ ಸುಕುಮಾರ್ ಮುದ್ರಾಡಿ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಡಾ. ಚಂದ್ರ ಶೇಖರ ದಾಮ್ಲೆ, ಚಂದ್ರಹಾಸ ರೈ, ಮೆಲ್ವಿನ್ ರಾಡ್ರಿಗಸ್, ಶೇಖರ ಸುವರ್ಣ, ಮೀರಾ ಕರ್ಕೇರಾ, ಮಲಾರ್ ಜಯರಾಮ್ ರೈ ಮೊದಲಾದವರು ಅತಿಥಿಗಳಾಗಿರುವರು.
ಮೊದಲ ಕಾರ್ಯಕ್ರಮ:
ಮಕ್ಕಳ ಪ್ರತಿಭೋತ್ಸವ ಸಮ್ಮೇಳನದ ಮೊದಲ ಕಾರ್ಯಕ್ರಮವಾಗಿದ್ದು ಉಡುಪಿಯ ಯಶ್ ಜೋಗಿ (ಯಕ್ಷಗಾನ),  ಮೂಡುಬಿದಿರೆಯ ಹರ್ಷಾ ಕೋಟ್ಯಾನ್ (ಕರಾಟೆ), ಕಾಸರಗೋಡಿನ ಮಯೂರಿ ಮತ್ತು ಮನವಿ ಸಹೋದರಿಯರು ( ನೃತ್ಯ), ಅನರುದ್ಧ ವಾತಿಷ್ಠ ಶರ್ಮಾ (ಯಕ್ಷಗಾನ), ದಿವಿತ್ ಕೋಟ್ಯಾನ್ ( ತೆಂಕು ತಿಟ್ಟು ಯಕ್ಷಗಾನ), ಅಭಿಲಾಷ್ ಕಿನ್ನಿಗೋಳಿ ( ನೃತ್ಯ), ಮಹಾಲಕ್ಷ್ಮಿ ಉಪ್ಪಿನ ಕುದ್ರು,( ಭಾಷಣ), ಸಂಕೇತ್ ಬೆಂಗ್ರೆ ಸೇರಿದಂತೆ ೧೦ ಮಂದಿ ಸಂಜೆ.೬.೦೦ ರಿಂದ ಪ್ರದರ್ಶನ ನೀಡಿ ಉದ್ಘಾಟನಾ ಸಮಾರಂಭದಲ್ಲಿ ಪ್ರತಿಭಾ ಗೌರವ ಸ್ವೀಕರಿಸುವರು. ರಾಜ್ಯ ಮಟ್ಟದಲ್ಲಿ ಮಿಂಚುವ ಬಾಲ-ಯುವ ಕಲಾವಿದರ ಪ್ರತಿಭಾ ಪ್ರದರ್ಶನ ವಿಶೇಷ ಆಕರ್ಷಣೆ ಆಗಿದೆ.
ಮಹಿಳೆಯರ ಕುರಿತು ಬೆಳಕು ಚೆಲ್ಲುವ ಮಹಿಳಾ ಗೋಷ್ಢಿ ಮೈಸೂರಿನ ಸಿರಿಗನ್ನಡ ವೇದಿಕೆಯ ಮಹಿಳಾ ಘಟಕಾಧ್ಯಕ್ಷೆ ಪದ್ಮ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಪ್ರೊ.ವಿನಿತಾ, 
ಡಾ.ಶೈಲಾ ಯು ವಿಚಾರ ಮಂಡಿಸುವರು, ತುಳು ಅಕಾಡೆಮಿಯ ಮಾಜಿ ಸದಸ್ಯೆ ರತ್ನಾವತಿ ಜೆ.ಬೈಕಾಡಿ, ಉಪನ್ಯಾಸಕಿ ಸಿದ್ಧಕಟ್ಟೆ ಮಲ್ಲಿಕಾ ಶೆಟ್ಟಿ, ಎಂ.ರಾವ್, ಕರುಣಾಕರ ಬಳ್ಕೂರು ಉಪಸ್ಥಿತರಿರುವರು.
ಬೆಳದಿಂಗಳ ಗೌರವ ಪ್ರದಾನ:
ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಡಾ, ಅಣ್ಣಯ್ಯ ಕುಲಾಲ್, ಪ್ರೊ.ನರಸಿಂಹಮೂರ್ತಿ, ರಾಮಚಂದರ್ ಬೈಕಂಪಾಡಿ, ಯತೀಶ್ ಬಿ. ಶ್ರೀನಿವಾಸ ಜೋಕಟ್ಟೆ ಮೊದಲಾದವರ ಉಪಸ್ಥಿತಿಯಲ್ಲಿ ಸಮ್ಮೇಳನದ ಗೌರವವನ್ನು ಪ್ರದಾನಿಸುವರು.
ಈ ಬಾರಿಯ ಕರ್ನಾಟಕ ಸಾಹಿತ್ಯ ದಂಪತಿ ಗೌರವಕ್ಕೆ ಡಾ. ಗಣನಾಥ ಎಕ್ಕಾರು ಮತ್ತು ಡಾ.ನಿಕೇತನಾ ಅವರು ಪಾತ್ರರಾಗಿದ್ದಾರೆ.
ಡಾ.ಜಿ.ಡಿ ಜೋಶಿ, ಮುಂಬಯಿ, ಕೆ.ಪಿ ಆಚಾರ್ಯ ಚೆನ್ನೈ, ಫಾ. ಬೇಸಿಲ್ ವಾಸ್, ಮೂಡುಬಿದಿರೆ, ಪ್ರದೀಪ್ ಕುಮಾರ್ ಕಲ್ಕೂರ,ಮಂಗಳೂರು, ಯೋಗೀಶ್ ಭಟ್, ಮಂಗಳೂರು, ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಬೆಳುವಾಯಿ, ಎಂ.ವಿ.ರೇವಣ ಸಿದ್ಧಯ್ಯ ಬೆಂಗಳೂರು, ಮೊಹಮ್ಮದ್ ಆಲಿ ಅಬ್ಬಾಸ್, ಮೂಡುಬಿದಿರೆ, ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಕುದ್ರೋಳಿ ಗಣೇಶ್,ಮಂಗಳೂರು, ಪಾರ್ವತಿ ಜಿ. ಐತಾಳ್ ಕುಂದಾಪುರ, ಶಿಲ್ಪಿ ಕೆ.ಶಿವರಾಮ ಆಚಾರ್ಯ, ಕುಕ್ಕುಂದೂರು, ಸೀತಾರಾಮ್ ಕುಮಾರ್ ಕಟೀಲ್, ತೋಕೂರು, ಬಿ.ವಿ ಗಾಯತ್ರಿ ನಿಂಗಪ್ಪ, ಸಾಗರ ಈ ವರ್ಷದ ಗೌರವ ಸ್ವೀಕರಿಸುವರು.
ದೆಹಲಿ ಕನ್ನಡ ಸಂಘ, ಬಂಟ್ಸ್ ಸಂಘ ಮುಂಬಯಿ, ಅಕ್ಷಯ ಮಾಸ ಪತ್ರಿಕೆ ಮುಂಬಯಿ, ಬೆಥನಿ ಸಂಸ್ಥೆ ಮಂಗಳೂರು, ಸೌತ್ ಕೆನರಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್, ನವಕರ್ನಾಟಕ ಪ್ರಕಾಶನ, ಶಾಂತಿ ವನ ಟ್ರಸ್ಟ್ ಉಜಿರೆ ಈ ವರ್ಷದ ಸಾಂಸ್ಥಿಕ ಗೌರವಕ್ಕೆ ಪಾತ್ರರಾಗುವರು.
ನಾಡು ನುಡಿ ಗೋಷ್ಢಿ:
ಕಾಸರಗೋಡಿನ ಪತ್ರಕರ್ತ ಕವಿ ರಾಧಾಕೃಷ್ಣ ಉಳಿಯತಡ್ಕ ಅಧ್ಯಕ್ಷತೆ ಮತ್ತು ಡಾ. ಗಣನಾಥ ಎಕ್ಕಾರು, ಪಿ.ಬಿ ಹರೀಶ ರೈ, ವಿತೋರಿ ಕಾರ್ಕಳ್ ಪಾಲ್ಗೊಳ್ಳುವಿಕೆಯಲ್ಲಿ ನಾಡು ನುಡಿಯ ಬಗೆಗಿನ ವಿಚಾರ ಮಂಥನ ನಡೆಯಲಿದೆ. ಯುವ ಗೋಷ್ಠಿಯು ಬೆಂಗಳೂರಿನ ವಿವೇಕ್ ನಂಬಿಯಾರ್ ಅವರ ಅಧ್ಯಕ್ಷತೆಯಲ್ಲಿ ಶಿವಶಂಕರ್ ಮೈಸೂರು, ಮಂಜುನಾಥ್ ಬೋರ್ಗಲ್‌ಗುಡ್ಡೆ, ಜಿವಿ.ಎಸ್ ಉಳ್ಳಾಲ್ ಮಾತನಾಡುವರು. ಮುಂಬಯಿಯ ಪತ್ರಕರ್ತ, ಖ್ಯಾತ ಕವಿ ಶ್ರೀನಿವಾಸ ಜೋಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಪತ್ರಕರ್ತ ರಾಧಾಕೃಷ್ಣ ತೋಡಿಕಾನ, ಸರಾಜಿತ್ ಮೊಂಡಾಲ್, ಬೆಂಗಾಲ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆಯುವ ೫೦ ರಷ್ಟು ಕವಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಬೆಳಗ್ಗೆ ೬,೦೦ ರ ಹೊತ್ತಿಗೆ ನಡೆಯುವ ಸಮಾರೋಪದಲ್ಲಿ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಸಮಾಪನ ಭಾಷಣ ಮಾಡಲಿರುವರು.

ಸಮ್ಮೇಳನ ವಿಶೇಷತೆಗಳು
# ಮಕ್ಕಳಿಗೆ ಮೊದಲು, ಬಳಿಕ ಮಹಿಳೆಯರಿಗೆ, ನಂತರ ನಾಡು ನುಡಿ, ಯುವ ಗೋಷ್ಠಿಗಳು.
# ಹಡಗಿನಲ್ಲಿ ಅಧ್ಯಕ್ಷರ ಮೆರವಣಿಗೆ- ಹಡಗಿನಲ್ಲಿ ಮಾತುಕತೆ
# ೧೪ ಮಂದಿ ಸಾಧಕರು, ೭ ಸಂಸ್ಥೆಗಳು, ೧೦ ಮಂದಿ ಬಾಲ, ಯುವ ಸಾಧಕರಿಗೆ ಗೌರವ
# ನೂರ ಐವತ್ತುರಷ್ಟು ಮಂದಿಗೆ ವೇದಿಕೆ
# ಡುಂಡಿರಾಜ್, ಎಂ.ಎಸ್.ನರಸಿಂಹಮೂರ್ತಿ, ಜಯಂತ್ ಕಾಯ್ಕಿಣಿ, ಡಾ.ದೊಡ್ಡ ರಂಗೇಗೌಡ ಈ ಮೊದಲ ಸಮ್ಮೇಳನಗಳ ಅಧ್ಯಕ್ಷರು
# ಮಾದರಿ ಹೆಲಿಕಾಷ್ಟರ್ ಹಾರಾಟ : ಕಾರ್ಕಳ ರತ್ನಾಕರ ನಾಯ್ಕ್, ಸ್ಕೈವ್ಯೂ, ಕಾರ್ಕಳ ಸಂಜೆ .೫.೫೦ ಕ್ಕೆ
# ಸಾಗರದ ಮಹಿಳೆಯರ ಲಂಬಾಣಿ ನೃತ್ಯ ಪ್ರದರ್ಶನದೊಂದಿಗೆ ಶುಭಮುಂಜಾವು ರಾತ್ರಿ ೧೨.೦೧ ನಿಮಿಷಕ್ಕೆ.
# ಸಮ್ಮೇಳನಾಧ್ಯಕ್ಷರಿಂದ ಪೂರ್ವಾರ್ಧ- ಉತ್ತರಾರ್ಧ ಮತ್ತು ಪ್ರತಿಕ್ರಿಯೆ ಮೂರು ವಿಶಿಷ್ಠ ಭಾಷಣಗಳು
# ಪುಸ್ತಕ ಬಿಡುಗಡೆ: ಯಕ್ಷಗಾನ ಪ್ರದೀಪಿಕೆ ಶ್ರೀ ಕೃಷ್ಣ ಪುಣ್ಯ ಚರಿತೆ( ಕುಡುಮಲ್ಲಿಗೆ ಕೃಷ್ಣ ಶೆಟ್ಟಿ), 
# ಉದ್ಘಾಟಕ ಎ.ಎಸ್. ಎನ್ ಹೆಬ್ಬಾರರ ಕುಂದಾಪ್ರಕನ್ನಡ ಮತ್ತು ಹಾಸ್ಯ ಮಿಶ್ರಿತ ಆಕರ್ಷಕ ಮಾತುಗಳು
# ೩ ನೇ ಶ್ರೀ ಪುಸ್ತಕ ಮೇಳ ಫೆ: ೧೩-೧೪ ಸಂಯೋಜನೆ: ಪ್ರಕಾಶ್ ಕೊಡಂಕೇರಿ ಉದ್ಘಾಟನೆ: ಫೆ.೧೩ ರ ಗುರುವಾರ ಬೆಳಗ್ಗೆ ೧೦.೩೦
# ಮುಂಬಯಿಯ ಶ್ರೀನಿವಾಸ ಜೋಕಟ್ಟೆ ಅವರ ಅಧ್ಯಕ್ಷತೆಯಲ್ಲಿ ೫ ಹಂತದಲ್ಲಿ ಅರ್ಧ ಶತಕದಷ್ಟು ಕವಿಗಳಿಂದ ಕವಿತಾ ವಾಚನೆಯ ದಾಖಲೆ
# ಒಂದೂವರೆ ಗಂಟೆಗಳ ಕಾಲ ಖ್ಯಾತ ಯುವ ಮತ್ತು ಬಾಲ ಕಲಾವಿದರ ಪ್ರತಿಭಾ ಪ್ರದರ್ಶನ

ಪತ್ರಿಕಾ ಗೋಷ್ಢಿ ನಡೆಸಿದವರು: ಶೇಖರ ಅಜೆಕಾರು,
ಉಪಸ್ಥಿತಿ : ಶೇಖರ್ ಅಧ್ಯಕ್ಷರು, ಬೆಂಗರೆ ಮಹಾಜನ ಸಭಾ, 
          ಯತೀಶ್, ಬಿ. ಅಧ್ಯಕ್ಷರು, ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲ 
         
ಸಂಪರ್ಕ: ಶೇಖರ ಅಜೆಕಾರು, ಅಂಚೆ. ಅಜೆಕಾರು: ೫೭೪೧೦೧
sE-mail: tuluva1@gmail.com, www.shekarajekar.com/ kundapra.com

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com