ಬೆಳದಿಂಗಳ ಸಮ್ಮೇಳನ ಉದ್ಘಾಟನೆ: ಸಾಹಿತ್ಯದಲ್ಲಿ ಮಾನವೀಯತೆ ತುಂಬಿರ ಬೇಕು- ಡಾ.ನಾ. ಮೊಗಸಾಲೆ

ಮಂಗಳೂರು: ಸಾಹಿತ್ಯ ಎನ್ನುವುದು ಹೀಗೆ ಇರ ಬೇಕು ಎಂದು ಅದಕ್ಕೆ ಬದ್ಧತೆಯನ್ನು ಅವಾಹಿಸುವುದು ಸರಿಯಲ್ಲ. ಆದರೆ ಸಾಹಿತ್ಯವೇ ತನಗೆ ತಾನೇ ಬದ್ಧತೆಗೆ ಒಳಗಾಗುವುದೇ ಆದರೆ ಅದರಲ್ಲಿ ಮಾನವೀಯತೆಯ ಮೌಲ್ಯಗಳು ತುಂಬಿರ ಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರಿನ ತೋಟ ಬೆಂಗರೆಯ ಡಾ.ಜಿ.ಎಸ್.ಶಿವರುದ್ರಪ್ಪ ವೇದಿಕೆಯಲ್ಲಿ  ಶುಕ್ರವಾರ ಸಂಜೆಯಿಂದ ಮರುದಿನ ಮುಂಜಾವಿನ ವರೆಗೆ ನಡೆದ ಐದನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಾಹಿತ್ಯ ಸಮ್ಮೇಳನಗಳು ಬೇಕೇ ಬೇಡವೇ ಎಂಬ ಚರ್ಚೆ ನಡೆಯುತ್ತಿರುವ ನಡುವೆ ಆಳ್ವಾಸ್ ನುಡಿಸಿರಿ, ಧಾರಾವಾಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೇಕ ವಿಶಿಷ್ಠ ಸಮ್ಮೇಳನಗಳು ನಮ್ಮ ಗಮನ ಸೆಳೆಯುತ್ತಿವೆ.
ಬೆಳದಿಂಗಳಲ್ಲಿ ಇಡೀ ರಾತ್ರಿ ನಡೆಯುವ ಶೇಖರ ಅಜೆಕಾರು ಅವರ ಪರಿಕಲ್ಪನೆಯ ಬೆಳದಿಂಗಳ ಸಮ್ಮೇಳನ ನಿಜವಾದ ಅರ್ಥದಲ್ಲಿ ಹೊಸತನದ ಹುಡುಕಾಟ ಎಂದು ಅವರು ಪ್ರಶಂಸಿದರು.
ಸಾಹಿತಿಗಳು ದೇಶದ ಪ್ರಧಾನಿ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಬಂದರೆ ದೇಶದ ಸ್ಥತಿ ಗುಣಾತ್ಮಕವಾಗಿ ಸುಧಾರಣೆಯಾಗ ಬಹುದು ಎಂದು ಸಮ್ಮೇಳನವನ್ನು ಉದ್ಘಾಟಿಸಿದ ಎ.ಎಸ್.ಎನ್.ಹೆಬ್ಬಾರ್ ಅವರು ಅಭಿಪ್ರಾಯ ಪಟ್ಟರು.

ಸಮ್ಮೇಳನಕ್ಕೆ ಮುನ್ನ ಅಧ್ಯಕ್ಷರು ಮತ್ತು ಅತಿಥಿಗಳ ಜೊತೆ ಸಮುದ್ರದಲ್ಲಿ ವಿಶೇಷ ಪ್ರಯಾಣಿಕರ ಹಡಗಿನಲ್ಲಿ ಮೆರವಣಿಗೆ- ವಿಹಾರ ಮುಕ್ಕಾಲು ಗಂಟೆವರೆಗೆ ನಡೆಯಿತು.

ಅಧ್ಯಕ್ಷರ ಭಾವಚಿತ್ರಗಳ ಅನಾವರಣ ಮತ್ತು ಅಧ್ಯಕ್ಷರಿಗೆ ಗೆಂದಾಳಿ ತೆಂಗಿನ ಸಸಿ ನೀಡುವ ಮೂಲಕ ಹೆಬ್ಬಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕ್ಕಳ ಪ್ರತಿಭೋತ್ಸವವನ್ನು ಖ್ಯಾತ ಜಾದುಗಾರ ಗಿಲಿಗಿಲಿ ಮ್ಯಾಜಿಕ್‌ನ ಜ್ಯು. ಶಂಕರ್ ಉದ್ಘಾಟಿಸಿ ಮಕ್ಕಳ ಮೇಲೆ ಹೆತ್ತವರ ಆಲೋಚನೆಗಳನ್ನು ಹೇರ ಬೇಡಿ ಎಂದು ಕರೆ ನೀಡಿದರು.
ಮುದ್ರಾಡಿಯ ನಮತುಳುವೆರ್ ಸಂಘಟನೆಯ ಸುಕುಮಾರ್ ಮೋಹನ್ ಅವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬೆಂಗ್ರೆ ಮಹಾಜನ ಸಭಾದ ಅಧ್ಯಕ್ಷ ಶೇಖರ ಸುವರ್ಣ, ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ಮಹಾನಗರ ಪಾಳಿಕಾ ಸದಸ್ಯೆ ಮೀರಾ ಕರ್ಕೆರಾ, ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಧ್ಯಕ್ಷ ಯತೀಶ್. ಬಿ, ಕಾರ್ಯದರ್ಶಿ ಕಿರಣ್, ಬೊರ್ಗಲ್ ಗುಡ್ಡೆ ಮಂಜುನಾಥ, ಸುನೀಲ್ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.
ಸಂಘಟಕ, ಬೆಳದಿಂಗಳ ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಸ್ವಾಗತಿಸಿ ಪ್ರಸ್ತಾವಿಕ ಮಾತಗಳನ್ನಾಡಿದರು. ಸಿದ್ಧಕಟ್ಟೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಯಶ್ ಜೋಗಿ ಉಡುಪಿ, ಹರ್ಷಾ ಕೋಟ್ಯಾನ್ ಮೂಡುಬಿದಿರೆ,  ಮಯೂರಿ ಮತ್ತು ಮನವಿ ಸಹೋದರಿಯರು ಕಾಸರಗೋಡು, ಅನಿರುದ್ಧ್ ವಾಸಿಷ್ಠ ಶರ್ಮಾ ಕಾಸರಗೋಡು, ದಿವಿತ್ ಕೋಟ್ಯಾನ್ ಮೂಡುಬಿದಿರೆ, ದಿವ್ಯಶ್ರೀ ಸುಳ್ಯ, ಅಭಿಲಾಷ್ ಕಿನ್ನಿಗೋಳಿ, ಮಹಾಲಕ್ಷ್ಮಿ ಉಪ್ಪಿನಕುದ್ರು, ಸಂಕೇತ್ ಬೆಂಗ್ರೆ ಮೊದಲಾದವರಿಗೆ ಬಾಲ-ಯುವ ಗೌರವವನ್ನು ನೀಡಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com