ಕೊಲ್ಲೂರಿನಲ್ಲಿ ಹಾಲಿವುಡ್‌ ನಟರ ವಿವಾಹ

ಕೊಲ್ಲೂರು: ಕೊಲ್ಲೂರಿನ ಚರಿತ್ರೆಯಲ್ಲೇ ಪ್ರಥಮ ಬಾರಿಗೆ ಹಾಲಿವುಡ್‌ ಸಿನೆಮಾ ರಂಗದ ಖ್ಯಾತ ನಟಿ ಜೈಮಿಷ್‌ ಹಾಗೂ ಯೋಗಗುರು ವಿದೇಶೀ ಕಿರುತೆರೆ ನಟ ಕ್ಯಾಮರನ್‌ ಅವರು ಗುರುವಾರ ಮಧ್ಯಾಹ್ನ 12 ಗಂಟೆಯ ಸುಮುಹೂರ್ತದಲ್ಲಿ ಕೊಲ್ಲೂರಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸನಾತನ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಅವತಾರ್‌ ಸಿನೆಮಾ ನಟಿ ಸಿಂಥಿಯಾ, ಮೈಕೆಲ್‌ ಜಾಕ್ಸನ್‌ ತಂಡದ ಗಾಯಕಿ ಟೇಲರ್‌ ಡೇನ್‌, ಹಾಲಿವುಡ್‌ ನಟಿ ಲೀಸಾ ಲಂಡನ್‌, ಕ್ಯಾಥರಿನ್‌, ನಿರ್ದೇಶಕ ಬೇರಿ ಸೇಟಲ್‌, ಜೋವಿ ಥೈರಾನ್‌ ಸೇರಿದಂತೆ 15 ಮಂದಿ ಹಾಲಿವುಡ್‌ ನಟರು ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು.

ಕ್ಯಾಲಿಫೋರ್ನಿಯಾ ಜೋಡಿ

ಜೈಮಿಷ್‌ ಹಾಗೂ ಕ್ಯಾಮರನ್‌ ಕ್ಯಾಲಿಫೋರ್ನಿಯಾದವರಾಗಿದ್ದು ಅನೇಕ ವರ್ಷಗಳಿಂದ ಭಾರತದೊಂದಿಗೆ ನಂಟು ಹೊಂದಿದ್ದಾರೆ. ಜೈಮಾ ಸುಮಾರು 85 ಚಿತ್ರಗಳಲ್ಲಿ ನಟಿಸಿದ್ದು ಅನೇಕ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ನಿರ್ಮಿಸಿವೆ.

ಭಾರತೀಯ ಸಂಸ್ಕೃತಿಗೆ ಮಾರು ಹೋದ ಜೈಮಾ 'ವೇದಿಕ್‌ ಫೌಂಡೇಶನ್‌' ಸ್ಥಾಪಿಸಿ ಧರ್ಮ ಸಂರಕ್ಷಣೆಯ ಕೈಂಕರ್ಯಕ್ಕೆ ತೊಡಗಿದ್ದಾರೆ. ಕೊಯಮತ್ತೂರು ಆರ್ಯವೈದ್ಯ ಶಾಲೆಯಲ್ಲಿ ಆಯುರ್ವೇದ ವ್ಯಾಸಂಗ ಮಾಡಿರುವ ಆಕೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ಪರಮ ಭಕ್ತೆುಯಾಗಿದ್ದು ಆಧ್ಯಾತ್ಮಿಕ ಚಿಂತಕಿಯಾಗಿದ್ದಾರೆ. ಆಯುರ್ವೇದ ಶಿಕ್ಷಣ ಪದ್ಧತಿಯಲ್ಲಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಸಾಧ್ಯವೆನ್ನುವ ಈರ್ವರೂ ಇಲ್ಲಿನ ಧಾರ್ಮಿಕ ಶ್ರದ್ಧೆಯ ಬಗ್ಗೆ ತೀವ್ರ ಆಸಕ್ತರಾಗಿದ್ದಾರೆ.

ಕೊಲ್ಲೂರಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸೀರೆ - ರವಕೆ ಹಾಗೂ ಅಂಗಿ - ಪಂಚೆಯಲ್ಲಿ ಮಿಂಚಿದ ಮದುಮಕ್ಕಳು ಸುರೇಶ್‌ ಭಟ್ಟರ ಪೌರೋಹಿತ್ಯದಲ್ಲಿ ಸಭಾಪೂಜೆ, ಸಂಕಲ್ಪ, ಗಣಪತಿ ಪೂಜೆ, ವರಪೂಜೆ, ಮಾಂಗಲ್ಯ ಧಾರಣೆ, ಕನ್ಯಾದಾನ, ಸಪ್ತಪದಿ, ಲಾಜಹೋಮ, ಅರುಂಧತೀ ದರ್ಶನದೊಂದಿಗೆ ವಿವಾಹ ವಿಧಿಧಿ ಪೂರೈಸಿದರು.

ಕೊಲ್ಲೂರು ದೇವಳದ ಕಾರ್ಯನಿರ್ವಾಹಣಾಧಿಕಾರಿ ಎಲ್‌.ಎಸ್‌. ಮಾರುತಿ, ಉಪಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧಿಧೀಕ್ಷಕ ರಾಮಕೃಷ್ಣ ಅಡಿಗ, ಅರ್ಚಕ ಕೆ.ಎನ್‌. ಗೋವಿಂದ ಅಡಿಗ, ಕ್ಷೇತ್ರ ಪುರೋಹಿತ ಚಂದ್ರಶೇಖರ ಪುರಾಣಿಕ, ಗಜಾನನ ಜೋಯಿಸ್‌, ಸುದರ್ಶನ ಜೋಯಿಸ್‌, ನರಸಿಂಹ ಭಟ್‌, ವಿಷ್ಣುಮೂರ್ತಿ ಉಡುಪ ಮುಂತಾದವರು ಉಪಸ್ಥಿತರಿದರು.

ಅಧ್ಯಾತ್ಮ ಸಾಧನೆಗೆ ಹಿಂದೂ ಧರ್ಮ ಶ್ರೇಷ್ಠ.

ಹಿಂದೂ ಧರ್ಮದಲ್ಲಿ ಆಚರಣೆಗಳು ದೇವರ ಧ್ಯಾನದೊಡನೆ ಪರಿಶುದ್ಧ ಭಾವನೆಯಿಂದ ಕೂಡಿದ್ದಾಗಿವೆ. ಧ್ಯಾನದಿಂದ ಭಗವಂತನನ್ನು ಸಾûಾತ್ಕಾರಗೊಳಿಸಲು ಸಾಧ್ಯ ಎಂದು 'ಉದಯವಾಣಿ' ಪ್ರತಿನಿಧಿಯೊಡನೆ ನೂತನ ವಧೂವರರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇಲ್ಲಿನ ಧರ್ಮ, ನೀತಿ, ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಮಾರು ಹೋಗಿರುವ ಅವರು 'ವೇದ ಗ್ರಾಮಂ ಡಿವೈನ್‌ ಪಾರ್ಕ್‌' ಸ್ಥಾಪಿಸುವ ಇರಾದೆ ಹೊಂದಿದ್ದಾರೆ.

ಜೈಮಾ - ರಾಮ

ವಧು ಜೈಮಿಷ್‌ ಅವರು 'ಜೈಮಾ' ಆಗಿ ವರ ಕ್ಯಾಮರನ್‌ 'ರಾಮ' ನಾಮಾಂಕಿತರಾಗಿ ಹಸೆಮಣೆಗೇರಿದರು.

* ವಿವಾಹ ಮಂಟಪವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸುಮಾರು 250 ಮಂದಿ ನೂತನ ವಧೂವರರಿಗೆ ಶುಭ ಹಾರೈಸಿ ಭೋಜನ ಕೂಟದಲ್ಲಿ ಪಾಲ್ಗೊಂಡರು.

* ವಧೂವರರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಶ್ರೀ ದೇವಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.

* ಸಂಜೆ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಟೇಲರ್‌ಡೆನ್‌ ಹಾಗೂ ಖ್ಯಾತ ಹಾಡುಗಾರ ಸಾಯಿರಾಮ್‌ ಅಯ್ಯರ್‌ ತಂಡದಿಂದ ಸಂಗೀತ ಕಾರ್ಯಕ್ರಮ ಸುರೇಶ್‌ ಭಟ್‌ ಅವರ ತೋಟದಲ್ಲಿ ಜರಗಿತು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com