ಸೌಪರ್ಣಿಕಾ ನದಿ ಮಾಲಿನ್ಯ ಮುಕ್ತಗೊಳಿಸಿ: ಕೇಮಾರು ಶ್ರೀ ಆಗ್ರಹ

ಕೊಲ್ಲೂರು : ಕೊಲ್ಲೂರಿನ ಸೌಪರ್ಣಿಕಾ ಅಗ್ನಿತೀರ್ಥ, ಕಾಶಿ ಹೊಳೆ ಮೊದಲಾದೆಡೆ ನೀರು ತ್ಯಾಜ್ಯ ವಸ್ತುಗಳಿಂದ ಕಲುಷಿತಗೊಂಡಿದ್ದು, ಈ ಬಗ್ಗೆ ಕೊಲ್ಲೂರು ಪಂಚಾಯತ್‌ ಮೊದಲ್ಗೊಂಡು ಸರಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಪರಿಸರವಾದಿಗಳು ಹಾಗೂ ವಿವಿಧ ಸಂಘಟನೆಗಳು ಸೇರಿ ಉಗ್ರ ಹೋರಾಟ ನೆಡೆಸಲಾಗುವುದು ಎಂದು ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್‌ ಗೌರವಾಧ್ಯಕ್ಷ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಎಚ್ಚರಿಸಿದ್ದಾರೆ.

ಕೊಲ್ಲೂರಿನ ಧರ್ಮಪೀಠದಲ್ಲಿ ಫೆ. 26ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಮೂಕಾಂಬಿಕೆಯ ಸಾನ್ನಿಧ್ಯದಲ್ಲಿರುವ ಖಾಸಗಿ ವಸತಿ ಗೃಹಗಳ ಮಲಿನ ನೀರು ಸೌಪರ್ಣಿಕಾ ನದಿಗೆ ಹರಿಯುತ್ತಿದೆ. ಯಾತ್ರಾರ್ಥಿಗಳು ಅದೇ ನೀರನ್ನು ತೀರ್ಥ ಸ್ನಾನಕ್ಕಾಗಿ ಬಳಸಿ ದೇವಸ್ಥಾನಕ್ಕೆ ತೆರಳುವ ಸಂಪ್ರದಾಯ ಹೊಂದಿದ್ದಾರೆ. ಕಲುಷಿತ ನೀರಿನ ಬಳಕೆಯಿಂದ ಅದೆಷ್ಟೊ ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ. ಪ್ಲಾಸ್ಟಿಕ್‌ ಇನ್ನಿತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಮಾಲಿನ್ಯಕ್ಕೆ ಕಾರಣರಾಗುವ ಜನರ ಮೇಲೆ ನಿಗಾ ವಹಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಜವಾಬ್ದಾರಿ ಇದ್ದರೂ ಇಲಾಖೆ ನಿರ್ಲಕ್ಷ್ಯ ತೋರಿಸುತ್ತಿದೆ ಎಂದರು.

ಪಾವಿತ್ರ್ಯತೆ ಕಾಪಾಡಲು ಕ್ರಮಕೈಗೊಳ್ಳಿ

ಕೊಡಚಾದ್ರಿಯಲ್ಲಿ ಮದ್ಯ ವ್ಯಸನಿಗಳು ಹಾಗೂ ಅನೈತಿಕ ಚಟುವಟಿಕೆ ಅದರ ಪಾವಿತ್ರತೆಗೆ ಭಂಗ ತರುತ್ತಿದ್ದು, ಶಂಕರಾಚಾರ್ಯರ ತಪೋಭೂಮಿಯಾದ ಈ ಪುಣ್ಯ ನೆಲವನ್ನು ಕಾಯ್ದುಕೊಳ್ಳುವಲ್ಲಿ ಸರಕಾರ ತತ್‌ಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೊಲ್ಲೂರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರಕಾರ ನೀಡಿರುವ ಆಶ್ವಾಸನೆ ಈವರೆಗೆ ಈಡೇರಿಲ್ಲ. ಇಲ್ಲಿನ ಮುಖ್ಯ ರಸ್ತೆಯ ವಿಸ್ತರಣೆ ಬಗ್ಗೆ ಕೂಡ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಮುಖ್ಯ ಕಾರ್ಯನಿರ್ವಣಾಧಿಕಾರಿಗೆ ಮನವಿ

ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್‌ ಗೌರವಾಧ್ಯಕ್ಷ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ನೇತೃತ್ವದ ತಂಡ ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್‌ ಅಧ್ಯಕ್ಷ ಕೆ.ಕೆ. ಸಾಬು, ಮಾಜಿ ಧರ್ಮದರ್ಶಿ ನವೀನ ಚಂದ್ರ ಉಪ್ಪುಂದ, ಗೌರಿ ದೇವಾಡಿಗ, ಹರೀಶ ತೋಳಾರ್‌, ವಿN°àಶ್ವರ ಶಾಸ್ತ್ರಿ ಮೊದಲಾದವರು ಮುಖ್ಯ ಕಾರ್ಯನಿರ್ವಣಾಧಿಧಿಕಾರಿ ಎಲ್‌.ಎಸ್‌. ಮಾರುತಿ ಅವರನ್ನು ಭೇಟಿ ಮಾಡಿ ಸೌಪರ್ಣಿಕಾ ನದಿಯ ಪಾವಿತ್ರ್ಯತೆ ಕಾಪಾಡುವಂತೆ ಮನವಿ ಸಲ್ಲಿಸಿದರು.

ಈ ಸಂಧರ್ಭ ಧರ್ಮಪೀಠದ ಸಮುದ್ಗೋನಾಂದ ಸ್ವಾಮೀಜಿ ಉಪಸ್ಥಿತರಿದ್ದರು.

ಕೊಡಚಾದ್ರಿ ಪರಿಸರದಲ್ಲಿ ಗಣಿಗಾರಿಕೆಗೆ ಅವಕಾಶವಿಲ್ಲ

ಕೊಡಚಾದ್ರಿ ಪರಿಸರದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಲಾಗುವುದಿಲ್ಲ. ಈ ಹಿಂದೆ ಕೂಡ ಗಣಿಗಾರಿಕೆಗೆ ಬಗ್ಗೆ ಹೋರಾಟ ನೆಡೆಸಿದ್ದು, ಮುಂದೆ ಅಂತಹ ವಿಚಾರಗಳ ಬಗ್ಗೆ ಸದಾ ಜಾಗೃತರಾಗಿರುವುದಾಗಿ ಸ್ವಾಮೀಜಿ ಹೇಳಿದ್ದಾರೆ.

ತಾತ್ಕಾಲಿಕ ಒಡ್ಡು

ಸೌಪರ್ಣಿಕಾ ಸ್ನಾನ ಘಟ್ಟದ ನೀರು ಕಲುಷಿತವಾಗದಂತೆ ತಾಕ್ಕಾಲಿಕ ಒಡ್ಡು ನಿರ್ಮಿಸಿ ಮಲಿನ ನೀರು ಸ್ನಾನಘಟ್ಟದ ಕೆಳಗಡೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಕೊಳಚೆ ನೀರನ್ನು ಎಸ್‌.ಟಿ.ಪಿ. ಮೂಲಕ ಸ್ವಚ್ಚಗೊಳಿಸಿ ಬಿಡುವ ವ್ಯವಸ್ಥೆ ನಿರ್ಮಾಣ ಹಂತದಲ್ಲಿದೆ ಎಂದು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ 'ಉದಯ ವಾಣಿ' ಪ್ರತಿನಿಧಿಧಿಗೆ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com