ಕಾನೂನು ಮಾಹಿತಿ ಶಿಬಿರ

ಕುಂದಾಪುರ: ಪ್ರತಿ ಸಮಸ್ಯೆಗೂ ಕಾನೂನಿನಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಕಾನೂನು ಕೈಗೆ ತೆಗೆದುಕೊಳ್ಳುವ ಬದಲು ಜನ ಕಾನೂನನ್ನು ಗೌರವಿಸಲು ಕಲಿಯಬೇಕು. ಆಗ ಕಾನೂನು ಸಹ ಅವರನ್ನು ರಕ್ಷಿಸುತ್ತದೆ ಎಂದು ಕುಂದಾಪುರ ಸಿಟಿ ಜೇಸಿಸ್‌ ಸ್ಥಾಪಕಾಧ್ಯಕ್ಷ ಹುಸೇನ್‌ ಹೈಕಾಡಿ ಹೇಳಿದರು.

ಅವರು ಕುಂದಾಪುರದ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಕಾರ್ಯಕರ್ತೆ, ಸ್ತಿÅàಶಕ್ತಿ ಗುಂಪಿನ ಸದಸ್ಯರಿಗೆ ಹಾಗೂ ಕುಂದಾಪುರ ಶಿಶು ಅಭಿವೃದ್ಧಿಯ ಯೋಜನಾಧಿಕಾರಿ ಕಚೇರಿಯ ಮೇಲ್ವಿಚಾರಿಕೆಯ ಸದಸ್ಯರಿಗೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆಯ ಬಗ್ಗೆ ಕಾನೂನು ಅರಿವು ಮೂಡಿಸುವ ಹೋಬಳಿ ಮಟ್ಟದ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಈ ದೇಶದಲ್ಲಿ ಕಾನೂನಿನ ಭೀತಿ ಇಲ್ಲದಿರುತ್ತಿದ್ದರೆ, ದುರ್ಬಲ ವರ್ಗದವರು, ಬಡವರು ಬದುಕುವುದೆ ಅಸಾಧ್ಯವಾಗುತ್ತಿದ್ದು, ಸ್ವಾತಂತ್ರÂ ಬಂದು ಇಷ್ಟ ವರ್ಷಗಳಾದರೂ ಹೆಚ್ಚಿನ ಜನಕ್ಕೆ ತಮ್ಮ ರಕ್ಷಣೆಗೆ ಇರುವ ಕಾನೂನುಗಳ ಅರಿವೆ ಇರುವುದಿಲ್ಲ ಎಂದು ಹೇಳಿದರು.

ಶಿಬಿರದಲ್ಲಿ ನಾಯ್ಯವಾದಿ ಇಲ್ಯಾಸ ನಾವುಂದ, ಶಿರೂರು ಶಿಶು ಅಭಿವೃದ್ಧಿಯ ಯೋಜನಾಧಿಕಾರಿ ಬಿಂದು ತಂಗಪ್ಪನ, ಕಚೇರಿಯ ಮೇಲ್ವಿಚಾರಿಕೆ ಕೆ. ಲಕ್ಷಿ$¾à ನಾಯಕ್‌ ಭಾಗವಹಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾಗೀರಥಿ ಹೆಬ್ಟಾರ ಸ್ವಾಗತಿಸಿ, ರಾಜೇಶ್ವರಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com