ತಾಲೂಕು ಪರಿಯಾಳ ಮಹಿಳಾ ಸಮಾಜ ಉದ್ಘಾಟನೆ

ಕುಂದಾಪುರ: ಯಾವುದೇ ಸಮಾಜ ಅಭಿವದ್ಧಿಯಾಗಬೇಕಾದರೆ ಮೊತ್ತ ಮೊದಲಿಗೆ ಮನುಷ್ಯ ಸಂಬಂಧ ಗಟ್ಟಿಗೊಳ್ಳಬೇಕು. ಇಂದಿನ ಕಾಲಘಟ್ಟದಲ್ಲಿ ಜಾತೀಯ ಸಂಘಟನೆಗಳ ಅವಶ್ಯಕತೆ ಎದ್ದು ಕಾಣುತ್ತಿದೆ. ಮಹಿಳೆಯರು ಜಾಗತರಾಗಿ ಸಮಾಜದ ಮುಂದೆ ಬಂದಾಗ ಪ್ರಗತಿ ಕಾಣಲು ಸಾಧ್ಯವಿದೆ ಎಂದು ಕೋಟ-ಪಡುಕರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜೇಂದ್ರ ನಾಯಕ ಹೇಳಿದರು. 

ಮಂಗಳವಾರ ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕುಂದಾಪುರ ತಾಲೂಕು ಪರಿಯಾಳ ಸಮಾಜ ಸುಧಾರಕ ಸಂಘದ ನೂತನ ತಾಲೂಕು ಮಹಿಳಾ ಪರಿಯಾಳ ಸಮಾಜ ಉದ್ಘಾಟಿಸಿ ಅವರು ಮಾತನಾಡಿದರು. 

ತಾಲೂಕು ಪರಿಯಾಳ ಸಮಾಜ ಅಧ್ಯಕ್ಷ ಸುಜಯ್ ಸುವರ್ಣ ವಕ್ವಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪರಿಯಾಳ ಸುಧಾರಕ ಸಂಘ ಅಧ್ಯಕ್ಷ ಯು.ಶಂಕರ ಸಾಲಿಯಾನ್ ಕಟಪಾಡಿ, ದಕ್ಷಿಣ ಕನ್ನಡ ಸಮಾಜ ಸುಧಾರಕ ಸಂಘ ಅಧ್ಯಕ್ಷ ಸಂಜೀವ ಬಂಗೇರ, ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕುಂದಾಪುರ ತಾಲೂಕು ಸಂಘದ ಕಾರ್ಯದರ್ಶಿ ಮಹೇಶ್ ಸುವರ್ಣ ಅರಾಟೆ, ನಾರಾಯಣ ಬಂಗೇರ ಬೀಜಾಡಿ ಉಪಸ್ಥಿತರಿದ್ದರು. 

ತಾಲೂಕು ಮಹಿಳಾ ಪರಿಯಾಳ ಸಮಾಜ ಅಧ್ಯಕ್ಷೆ ಸುಜಾತ ಮಂಜುನಾಥ ಸಾಲಿಯಾನ್, ಉಪಾಧ್ಯಕ್ಷರಾದ ವೀಣಾ ರಾಜ ಸಾಲಿಯಾನ್, ಸ್ವಾತಿ ದೀಪಕ್ ಕುಂದಾಪುರ, ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಸುವರ್ಣ, ಕೋಶಾಧಿಕಾರಿ ಪ್ರೇಮ ಬಾಬುರಾಜ್ ತ್ರಾಸಿ ಅಧಿಕಾರ ಸ್ವೀಕರಿಸಿದರು. 

ತಾಲೂಕು ಪರಿಯಾಳ ಸಮಾಜ ಕೋಶಾಧಿಕಾರಿ ಸಂತೋಷ ಸಾಲಿಯಾನ್ ಬಸ್ರೂರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಶಕ್ತವಾಗಿರುವ ಪರಿಯಾಳ ಸಮಾಜ ಸಂಘಟನೆ ಇತ್ತೀಚೆಗಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿಯೂ ಬಲವಾಗುತ್ತಿದೆ. ಪ್ರವರ್ಗ 3ಎಯಲ್ಲಿ ಸೇರ್ಪಡೆಗೊಂಡಿರುವ ಸಮಾಜಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳು ತಾಲೂಕು ಕಚೇರಿಯಲ್ಲಿ ಲಭ್ಯವಿದೆ. ಹೊಸದಾಗಿ ರಚನೆಗೊಂಡಿರುವ ಮಹಿಳಾ ಸಮಾಜಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು. ರೇಷ್ಮಾ ಮತ್ತು ಸುಶ್ಮಾ ಬಳಗ ಪ್ರಾರ್ಥಿಸಿದರು. ವೀಣಾ ರಾಜ ಸಾಲಿಯಾನ್ ಸ್ವಾಗತಿಸಿದರು. ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ಎಸ್. ಬಂಗೇರ ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com