ನವೀಕೃತ ಆಂಜನೇಯ ದೇವಸ್ಥಾನ ಲೋಕಾರ್ಪಣೆ

ಕುಂದಾಪುರ: ಕುಂದಾಪುರ ತಾಲೂಕಿನ ಪಂಚಗಂಗಾವಳಿ ತಟದಲ್ಲಿ ಪರ್ಯಾಯ ದ್ವೀಪದಂತಿರುವ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಸಮೀಪ ನಿರ್ಮಿಸಲಾಗಿರುವ ನವೀಕೃತ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಫೆ. 23ರಂದು ನಡೆಯಿತು.

ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಶಿಖರ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳು ದೇವಸ್ಥಾನದ ಪ್ರಧಾನ ಅರ್ಚಕ ಪಾಂಡುರಂಗ ನೇತƒತ್ವದಲ್ಲಿ ನಡೆಯಿತು. ದೇವಸ್ಥಾನದ ಅಧ್ಯಕ್ಷ ಅರುಣ್‌ ಬಿ., ಉಪಾಧ್ಯಕ್ಷ ಕೃಷ್ಣ ಎಸ್‌. ಮೊಕ್ತೇಸರ ಈಶ್ವರ ಜಿ., ಕಾರ್ಯದರ್ಶಿ ನರಸಿಂಹ ಜಿ.ಎಂ., ಅರ್ಚಕ ಶಿವ ಜಿ.ಟಿ. ಹಾಗೂ ದೇವಳದ ಆಡಳಿತ ಮಂಡಳಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com