ದೇವಳ ನವೀಕರಣ ಅದ್ಭುತ ಸೇವೆ: ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ

ಕುಂದಾಪುರ: ತಾಲೂಕಿನ ಕೋಟೆ ಹನುಮಂತ ದೇವಸ್ಥಾನದ ಪುನರ್‌ನಿರ್ಮಾಣ ಒಂದು ಅದ್ಭುತ ಸೇವೆ. ಇದು ಭಕ್ತಾಭಿಮಾನಿಗಳಿಗೆ ಅಪಾರ ಆನಂದ ನೀಡುವಂತೆ ನಿರ್ಮಾಣವಾಗಿದೆ ಎಂದು ಕಾಶೀಮಠಾೀಶ ಶ್ರೀಸುೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಕೋಟೆ ಹನುಮಂತ ದೇವಸ್ಥಾನದ ಲೋಕಾರ್ಪಣೆ, ನಾಗಪ್ರತಿಷ್ಠೆ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. 

ಗುರುಗಳ ಗುರು ಎಂದೇ ಕರೆಯುವ ಎಲ್ಲ ಕಾಲದಲ್ಲೂ ತನ್ನ ಅಸ್ತಿತ್ವ ಸಾಮರ್ಥ್ಯ ತೋರ್ಪಡಿಸಿರುವ ಶ್ರೀ ಹನುಮಂತ ದೇವರ ಆರಾಧನೆ ಆತ್ಮ ಶಕ್ತಿಯನ್ನು ವೃದ್ಧಿಸುತ್ತದೆ. ಯುವಕರಿಗೆ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಪ್ರಾಮಾಣಿಕ ಸೇವಕನಾಗಿ, ನಾಯಕನಾಗಿ, ಎಂತಹ ಸಮಸ್ಯೆಗಳೆದುರಾದರೂ ಪರಿಹರಿಸುವ ಸ್ವಾಮಿ ಹನುಮಂತನ ವಿಚಾರಗಳನ್ನು ತಿಳಿಸಬೇಕು. ಗುರು ಮುಖ್ಯಪ್ರಾಣ ಅವರಲ್ಲಿ ಸೂರ್ತಿ ತುಂಬುತ್ತಾನೆ. ಕುಂದಾಪುರದಲ್ಲಿ ಕೋಟೆ ಹನುಮಂತ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಶ್ರಮಿಸಿದ ಹರಿಗುರು ಸೇವಾ ಪ್ರತಿಷ್ಠಾನ ಸೇವಾ ಪ್ರತಿಷ್ಠಾನ ಹಾಗೂ ಅವರಿಗೆ ಪ್ರೋತ್ಸಾಹ ನೀಡಿದ ಪೇಟೆ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯವರು ಅಭಿನಂದನಾರ್ಹರು ಎಂದರು. 

ಹರಿಗುರು ಸೇವಾ ಪ್ರತಿಷ್ಠಾನದವರು ದಿಲ್ಲಿ, ಹರಿದ್ವಾರಗಳಲ್ಲಿ ಸಮಾಜ ಮಂದಿರ, ವ್ಯಾಸಪುಟ ಸ್ಮೃತಿ ಭವನ, ನಿರ್ಮಾಣ ಮಾಡಿದವರು, ಕುಂದಾಪುರದಲ್ಲಿ ಶಿಥಿಲವಾಗಿದ್ದ ಕೋಟೆ ಹನುಮಂತ ದೇವಸ್ಥಾನದ ಪುನರ್‌ನಿರ್ಮಾಣ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಗುರುಗಳ ಆಶೀರ್ವಾದ ಪಡೆದರು, ಮಾರ್ಗದರ್ಶನ ಪಡೆದರು, ಪೇಟೆ ವೆಂಕಟರಣ ದೇವಸ್ಥಾನದ ಆಡಳಿತ ಮಂಡಳಿ ಸಹಕಾರ ಪಡೆದು ನಿರ್ಮಾಣ ಆರಂಭಿಸಿದರು. ಆರು ತಿಂಗಳಲ್ಲಿ ಭವ್ಯ, ಸುಂದರ, ಸುವ್ಯವಸ್ಥಿತ ದೇವಾಲಯದ ನಿರ್ಮಾಣ ಮಾಡಿದ್ದಾರೆ. ಅವರಿಗೆ ಶ್ರೀ ಹನುಮಂತ ಇನ್ನಷ್ಟು ಸಾಧನೆ ಮಾಡುವ ಶಕ್ತಿ ಕರುಣಿಸುತ್ತಾನೆ ಎಂದು ಅವರು ಆಶೀರ್ವದಿಸಿದರು. 

ಹರಿಗುರು ಸೇವಾ ಪ್ರತಿಷ್ಠಾನದ ಕೆ.ಶ್ರೀನಿವಾಸ ಪ್ರಭು ಮಾತನಾಡಿ ದೇವಸ್ಥಾನ ನಿರ್ಮಾಣದಲ್ಲಿ ಮಾರ್ಗದರ್ಶನ ಮಾಡಿದ ಗುರುಗಳು, ಆಡಳಿತ ಮಂಡಳಿ, ಸಹಕರಿಸಿದ ದಾನಿಗಳು, ಸ್ವಯಂ ಸೇವಕರು, ಗುತ್ತಿಗೆದಾರರು, ಶಿಲ್ಪಿಗಳು, ಕುಶಲ ಕಾರ್ಮಿಕರನ್ನು ಅಭಿನಂದಿಸಿದರು. ಜತೆ ಮೊಕ್ತೇಸರರಾದ ಕೋಡಿ ಶ್ರೀನಿವಾಸ ಶೆಣೈ, ಪಿ. ಮಾಳಪ್ಪ ಪ್ರಭು, ಹರಿಗುರು ಸೇವಾ ಪ್ರತಿಷ್ಠಾನದ ಯು. ಗಣೇಶ ಮಲ್ಯ ಉಪಸ್ಥಿತರಿದ್ದರು. ಪೇಟೆ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪಿ. ಜಯವಂತ ಪೈ ಕಾರ್ಯಕ್ರಮ ನಿರ್ವಹಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com