ಜಿಲ್ಲಾ ಮಟ್ಟದ ಶಾಲಾ ಮಕ್ಕಳ ಭಜನೆ ಸ್ಪಧೆ ಉದ್ಘಾಟನೆ

ಕುಂದಾಪುರ: ಭಜನೆಯಿಂದ ದೇವರನ್ನು ಹತ್ತಿರದಿಂದ ನೋಡಲು, ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದೆ. ಮನೆಗಳಲ್ಲಿ ಪ್ರತಿನಿತ್ಯ ಸಂಜೆ ಭಜನೆ ಮಾಡುವುದರಿಂದ ಮನೆಯಲ್ಲಿನ ಅನಿಷ್ಠಗಳು ಹಾಗೂ ದುಷ್ಟ ಶಕ್ತಿಗಳು ದೂರವಾಗಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಉದ್ಯಮಿ ಎಂ.ಎಂ. ಸುವರ್ಣ ಹೇಳಿದರು.

ಗಂಗೊಳ್ಳಿ ಶ್ರೀಇಂದುಧರ ದೇವಸ್ಥಾನ ಗಂಗೊಳ್ಳಿ, ಇಂದುಧರ ಯುವಕ ಮಂಡಲ, ಇಂದುಶ್ರೀ ಮಹಿಳಾ ಸಂಘ ಹಾಗೂ ಮಾತೃಶ್ರೀ ಬಾಲಕಿಯರ ಭಜನಾ ತಂಡ ಗಂಗೊಳ್ಳಿ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಗುರುವಾರ ಗಂಗೊಳ್ಳಿಯ ಶ್ರೀಇಂದುಧರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. 

ಪಂಜುರ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಪುರುಷೋತ್ತಮ ಆರ್ಕಾಟಿ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಉದ್ಯಮಿ ಎಂ.ಜಿ. ರಾಘವೇಂದ್ರ ಭಂಡಾರ್‌ಕಾರ್, ಪತ್ರಕರ್ತ ಬಿ. ರಾಘವೇಂದ್ರ ಪೈ, ಮುಖ್ಯ ಶಿಕ್ಷಕ ಮೂಡರ ಅಂಬಾಗಿಲು, ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಮನಾ ಪಡಿಯಾರ್, ಉದ್ಯಮಿ ದಯಾನಂದ ಪುತ್ರನ್, ಕಲಾವಿದ ಗಣೇಶ ಗಂಗೊಳ್ಳಿ, ದೇವಸ್ಥಾನದ ಅಧ್ಯಕ್ಷ ಅರುಣ್ ಬಿ., ಉಪಾಧ್ಯಕ್ಷ ಕೃಷ್ಣ ಎಸ್., ಮೊಕ್ತೇಸರ ಈಶ್ವರ ಜಿ., ಕಾರ್ಯದರ್ಶಿ ನರಸಿಂಹ ಜಿ.ಎಂ., ಅರ್ಚಕ ಶಿವ ಜಿ.ಟಿ. ಹಾಗೂ ದೇವಳದ ಆಡಳಿತ ಮಂಡಳಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಲಿಂಗಪ್ಪ ಮಾಸ್ಟರ್ ಸ್ವಾಗತಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com