ಕೋಟೆ ಹನುಮಂತ ದೇವಸ್ಥಾನ ಲೋಕಾರ್ಪಣೆ

ಕುಂದಾಪುರ: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ಜೀರ್ಣೋದ್ಧಾರಗೊಂಡ ಕೋಟೆ ಶ್ರೀ ಹನುಮಂತ ದೇವಸ್ಥಾನದ ಲೋಕಾರ್ಪಣೆ ಬುಧವಾರ ಬೆಳಗ್ಗೆ ಜರುಗಿತು. ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಸಂಯಮೀಂದ್ರ ತೀರ್ಥ ಸ್ವಾಮೀಜಿ ನವೀಕೃತ ಆಕರ್ಷಕ ದೇಗುಲವನ್ನು ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು. 

ಇದೇ ಸಂದರ್ಭ ಹನುಮಂತ ದೇವರಿಗೆ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಶತಕಲಶಾಭಿಷೇಕ, ಶಿಖರ ಕಲಶ ಪ್ರತಿಷ್ಠೆ, ಪವಮಾನ ಅಭಿಷೇಕ, ಕಲಶಾಭಿಷೇಕ, ಗಂಗಾ ಜಲಾಭಿಷೇಕ, ಪ್ರಸನ್ನ ಪೂಜೆ ನಡೆಯಿತು. ಕಲಶ ಸ್ಥಾಪನೆಯ ಕೈಂಕರ್ಯದಲ್ಲಿ ಪ್ರಭಾಕರ ಆಚಾರ್ಯ, ತ್ರಿವಿಕ್ರಮ ಪೈ, ಅನಂತ ಕಾಮತ್, ಗಣೇಶ ಪ್ರಭು, ಶ್ರೀಧರ ಪ್ರಭು, ಅನಂತರಾಮ ಶೆಣೈ, ಅರ್ಜುನ ಶೆಣೈ, ಪ್ರಕಾಶ್ ಶೆಣೈ, ಪ್ರಸನ್ನ ಪ್ರಭು, ಲಕ್ಷ್ಮೀಶ ಪ್ರಭು, ಪ್ರಕಾಶ್ ಪೈ, ಸುರೇಶ ಸಹಕರಿಸಿದ್ದರು. 

ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ರಾಧಾಕೃಷ್ಣ ಶೆಣೈ ನಾಮಫಲಕ ಅನಾವರಣಗೊಳಿಸಿದರು. ಜತೆ ಮೊಕ್ತೇಸರರಾದ ಕೋಡಿ ಶ್ರೀನಿವಾಸ ಶೆಣೈ, ಪಿ. ಮಾಳಪ್ಪ ಪೈ, ಹೊಸದಿಲ್ಲಿಯ ಶ್ರೀ ಹರಿಗುರು ಸೇವಾ ಪ್ರತಿಷ್ಠಾನದ ಶ್ರೀನಿವಾಸ ಪ್ರಭು, ಯು. ಗಣೇಶ ಮಲ್ಯ, ಪಿ.ಎಂ. ಪೈ ಸಿಂಗಪುರ, ವಿಜಯ ಶೆಣೈ ದುಬೈ, ಅನಿಲ್ ಗೀರೋತ್ರಾ ಹೊಸದಿಲ್ಲಿ, ಎಂ.ಎ. ಪೈ ಬೆಂಗಳೂರು, ಎಚ್. ಜಯಪ್ರಕಾಶ್ ಬೆಂಗಳೂರು, ಎಂ.ಬಿ. ಪಡಿಯಾರ್, ದಯಾನಂದ ಮುಂಬಯಿ, ಹೊಸದಿಲ್ಲಿ ಜಿಎಸ್‌ಬಿ ಸಮಾಜ ಸೇವಾ ಸಂಘ ಅಧ್ಯಕ್ಷ ಗೋಕುಲ್‌ದಾಸ್ ರಾವ್ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com