ಮಯ್ನಾಡಿ: ಧಾರ್ಮಿಕ ಸ್ಥಳಗಳ ಅಭಿವೃದ್ದಿಯಿಂದ ಊರಿಗೆ ಶ್ರೇಯಸ್ಸು: ಕೆ.ಗೋಪಾಲ ಪೂಜಾರಿ.

ಬೈಂದೂರು: ಶ್ರದ್ದಾ ಪೂರ್ವಕ ಭಕ್ತಿಯಿಂದ ಮಾಡುವ ದೇವರ ಕಾರ್ಯ ಪುಣ್ಯಪ್ರಾಪ್ತವಾಗುತ್ತದೆ. ಧಾರ್ಮಿಕ ಸ್ಥಳಗಳ ಅಭಿವೃದ್ದಿ ಊರಿಗೆ ಶ್ರೇಸ್ಸನ್ನು ನೀಡುತ್ತದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.

ಅವರು ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ಮಯ್ನಾಡಿ ಇದರ ನೂತನ ಶಿಲಾಮಯ ಗರ್ಭಗುಡಿಯ ಹಾಗೂ ನವ ನಿರ್ಮಿತ ಪ್ರಕಾರದ ಸಮರ್ಪಣೆ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸೂÅರು ಇದರ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿ ವೇದೋಪನಿಷತ್‌ ಕಾಲದಿಂದಲೂ ಸ್ತ್ರೀಗೆ ವಿಶೇಷವಾದ ಪ್ರಾದಾನ್ಯತೆಯಿದೆ. ಮಹಾಸತಿ ದೇವಿ ನಂಬಿದವರ ರಕ್ಷಕಳಾಗಿದ್ದಾಳೆ. ಪರಸ್ಪರ ಸಹಕಾರ ಮನೋಭಾವನೆಯ ಧರ್ಮ ಎಂದರು.

ಕಟ್ಕೆರೆ ಪ್ರೇಮಾನಂದ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಸುರೇಶ ಬೆಟ್ಟಿನ, ತಾ.ಪಂ ಸದಸ್ಯ ರಾಮ ಬೈಂದೂರು, ರಾಜು ಪೂಜಾರಿ, ಮಾತ್ರ ಮಂಡಳಿ ಅಧ್ಯಕ್ಷ ಆಶಾ ಕಿಶೋರ್‌, ಶೈಲಜಾ ಗಣಪತಿ, ರಾಮಕ್ಷತ್ರೀಯ ಯುವ ಸೇವಾ ಸಂಘದ ಗೌರವಾಧ್ಯಕ್ಷ ನಾಗರಾಜ್‌ ಬಿಜೂರು, ಆಹಾರ ಇಲಾಖೆ ಉಪತಹಶೀಲ್ದಾರ ಜನಾರ್ಧನ ಹೆಬ್ಟಾಗಿಲು , ಶ್ರೀಧರ ಪಿ.ಎಸ್‌, ಸುರೇಶ ನಾಯಕ್‌ ಮಯ್ನಾಡಿ, ಸಣ್ಣಯ್ಯ.ಎಂ.ಬಿ, ಸುಬ್ರಹ್ಮಣ್ಯ ತಿಮ್ಮಪ್ಪ ಗದ್ದೆಮನೆ, ಭಾಗೀರತಿ, ಸುರೇಶ ಗ್ರಾ.ಪಂ ಸದಸ್ಯರು, ರಾಮಕೃಷ್ಣ ಬಿಜೂರು ಉಪಸ್ಥಿತರಿದ್ದರು.

ನಿತ್ಯಾನಂದ ಎನ್‌ ಸ್ಥಳ ಪರಿಚಯ ಮಾಡಿದರು. ಕಾರ್ಯಾಧ್ಯಕ್ಷ ಕೃಷ್ಣಯ್ಯ ಮಧ್ದೋಡಿ ಸ್ವಾಗತಿಸಿದರು. ಆನಂದ ಮಧ್ದೋಡಿ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com