ಐಶ್‌ಳನ್ನು ವರಿಸಿದ್ದು ವಿಶ್ವಸುಂದರಿ ಎಂಬುದಕ್ಕಲ್ಲ

ಮುಂಬೈ: 'ನಾನೊಬ್ಬ ಸಿನಿಮಾನಟ ಎಂಬ ಕಾರಣಕ್ಕಾಗಲೀ, ಬಚ್ಚನ್‌ ವಂಶದ ಕುಡಿ ಎಂಬ ಕಾರಣಕ್ಕಾಗಲೀ ವಿಶ್ವಸುಂದರಿ ಐಶ್ವರ್ಯ ರೈ ತನ್ನನ್ನು ಮದುವೆಯಾಗಲಿಲ್ಲ' ಎಂದು ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಹೇಳಿದ್ದಾರೆ. ಹಾಗೆಯೇ ತಾನೂ ಕೂಡಾ ಐಶ್ವರ್ಯ ರೈ ವಿಶ್ವಸುಂದರಿ ಎಂಬ ಕಾರಣಕ್ಕೆ ಆಕೆಯನ್ನು ವಿವಾಹವಾಗಿದ್ದಲ್ಲ ಎಂದೂ ಅಭಿಷೇಕ್‌ ಹೇಳಿಕೊಂಡಿದ್ದಾರೆ.

ಇನ್ನೂ ಪ್ರಸಾರವಾಗಬೇಕಿರುವ ಕರಣ್‌ ಜೋಹರ್‌ ಅವರ 'ಕಾಫಿ ವಿತ್‌ ಕರಣ್‌' ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿಕೊಂಡಿದ್ದಾರೆ.

'ನಾನು ಕನ್ನಡಿಯೆದುರು ನಿಂತಾಗ ಕೆಟ್ಟದಾಗಿ ಕಂಡು ಬೆಚ್ಚಿದ್ದೇನೆ, ಆದರೆ ಆಕೆ ವಿಶ್ವಸುಂದರಿ. ಅವಳೆದುರು ಸ್ಪರ್ಧಿಸಲು ಸಾಧ್ಯವೇ ಇಲ್ಲ. ಐಶ್ವರ್ಯ ಒಬ್ಬ ನಿರಹಂಕಾರಿ ವ್ಯಕ್ತಿ. ಯಾವುದೇ ಜನಸಾಮಾನ್ಯ ಕೂಡಾ ಆಕೆಯನ್ನು ಭೇಟಿ ಮಾಡಬಹುದು' ಎಂದು ಪತ್ನಿ ಅಭಿಷೇಕ್‌ ಪತ್ನಿಯ ಗುಣಗಾನ ಮಾಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com