ಭಾರತಕ್ಕೆ ಹೊಸ ಯೋಜನೆಯ ದಿಟ್ಟ ನಾಯಕತ್ವದ ಅಗತ್ಯವಿದೆ: ಸೂಲಿಬೆಲೆ

ಕೋಟ: ಜಗತ್ತಿನಲ್ಲಿ ಸಕಲ ಜೀವಿಗಳು ಸುಖವಾಗಿರಲಿ ಎನ್ನುವ ಆಶಯವಿರುವ ಏಕೈಕ ದೇಶ ಭಾರತ. ಆದರೆ, ಈ ಆಶಯಕ್ಕೆ ಈಗ ಧಕ್ಕೆ ಬಂದಿದೆ. ಆದ್ದರಿಂದ ಮುಂದೆ ಪ್ರಜ್ವಲಿಸುವ ಭಾರತದ ನಿರ್ಮಾಣವಾಗಬೇಕಿದೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇಲ್ಲಿನ ಸಾಸ್ತಾನದಲ್ಲಿ ನಡೆದ 'ನಾನು ಮತ್ತು ನನ್ನ ಭಾರತ ದೇಶ' ಎಂಬ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಈ ಕಾರ್ಯಕ್ರಮವನ್ನು ಇಲ್ಲಿನ ಸ್ಥಳೀಯ 35 ಮಂದಿ ಸೈನಿಕರು ಮತ್ತು ಮತ್ತವರ ಮನೆಯವರು ಉದ್ಘಾಟಿಸಿದರು.
ಈಜುಪಟು ಗೋಪಾಲ ಖಾರ್ವಿ, ಅಂಗವಿಕಲ ಈಜುಪಟು ಪ್ರಕಾಶ ಖಾರ್ವಿ, ಹಿರಿಯರ ವಿಭಾಗದ ಕ್ರೀಡಾಪಟು ಕೃಷ್ಣ ದೇವಾಡಿಗ, ಓಟಗಾರ ವಿಠಲ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಸಂಘಟನಾ ಸಮಿತಿ ಗೌರವಾಧ್ಯಕ್ಷ ರಿಷಿರಾಜ್ ಇದ್ದರು.
ಸ್ಥಳೀಯ ಬಿಜೆಪಿ ನಾಯಕರಾದ ಕಿಶೋರ್ ಕುಂದಾಪುರ, ರಾಜೇಶ್ ಕಾವೇರಿ, ಸುಪ್ರಸಾದ ಶೆಟ್ಟಿ, ಐರೋಡಿ ವಿಠಲ್ ಪೂಜಾರಿ ಸಂದೀಪ ಕೋಡಿ, ಕಾರ್ಯಕ್ರಮ ಸಮಿತಿಯ ಹರೀಶ್, ಅನಂತ ನಾಯಕ್ ಇದ್ದರು.
ಈ ಕಾರ್ಯಕ್ರಮಕ್ಕೆ ಮೊದಲು ಭಾರತೀಯ ಸೈನ್ಯದ ಕಿಂಗ್ಸ್ ಆಫ್ ನಾಗಾಸ್ ವಿಭಾಗದ ನಿವೃತ್ತ ಹಿರಿಯ ಸೈನಿಕ  ಕೆ. ನಾರಾಯಣ ಅವರನ್ನು ಸೂಲಿಬೆಲೆ ಮತ್ತು ಇತರರ ಅವರ ಮನೆಗೆ ತೆರಳಿ ಗೌರವಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com