ಯಕ್ಷಗಾನ ಕಲಾವಿದ ಜಗನ್ನಾಥ ಶೆಟ್ಟಿ ಸಂಸ್ಮರಣೆ

ಕುಂದಾಪುರ: ದಿ.ನಗರ ಜಗನ್ನಾಥ ಶೆಟ್ಟಿ ಅಭಿಜಾತ ಯಕ್ಷಪ್ರತಿಭೆ. ಘಟ್ಟದ ಮೇಲಿನಿಂದ ಬಂದು ಕರಾವಳಿಯಲ್ಲಿ ತನ್ನದೇ ವಿಶಿಷ್ಟ ಕಂಪು ಬೀರಿದ ಮಹಾನ್ ಕಲಾವಿದ. ಅವರ ಸ್ಮರಣೆ ಮಾಡಿಕೊಳ್ಳುವುದು ಯಕ್ಷಗಾನ ಕಲೆಗೆ ನೀಡುವ ಗೌರವ ಎಂದು ಯಕ್ಷಗಾನ ವಿಮರ್ಶಕ ಎಸ್.ವಿ.ಉದಯಕುಮಾರ ಶೆಟ್ಟಿ ಹೇಳಿದರು. 

ಶನಿವಾರ ರಾತ್ರಿ ಇಲ್ಲಿನ ಗಾಂಧಿಮೆದಾನದಲ್ಲಿ ಜರುಗಿದ ಪೆರ್ಡೂರು ಮೇಳದ ಯಕ್ಷಗಾನ ಬಯಲಾಟ ವೇದಿಕೆಯಲ್ಲಿ ಯಕ್ಷಗಾನ ಕಲಾವಿದ ದಿ.ನಗರ ಜಗನ್ನಾಥ ಶೆಟ್ಟಿ 10ನೇ ವರ್ಷದ ಸಂಸ್ಮರಣೆ ಸಮಾರಂಭದಲ್ಲಿ ಮಾತನಾಡಿದರು. 

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕೋಟ ಅಮತೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಬೆಂಗಳೂರು ತೆರಿಗೆ ಸಲಹೆಗಾರ ಆರೂರು ನಾರಾಯಣ ಶೆಟ್ಟಿ, ದಿ.ನಗರ ಜಗನ್ನಾಥ ಶೆಟ್ಟಿ ಸಂಸ್ಮರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸರ್ಪು ಸದಾನಂದ ಪಾಟೀಲ್ ಉಪಸ್ಥಿತರಿದ್ದರು. 

ಈ ಸಂದರ್ಭ ದಿ.ನಗರ ಜಗನ್ನಾಥ ಶೆಟ್ಟಿಯವರ ಪತ್ನಿ ಮೀರಾ ಅವರಿಗೆ ಸಾರ್ವಜನಿಕ ನಿಧಿ ಸಮರ್ಪಿಸಲಾಯಿತು. ಸಮಿತಿ ಅಧ್ಯಕ್ಷ ವೆ.ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕಷ್ಣಾರ್ಜುನ-ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com