ಫೆ. 17ರಿಂದ ಅರ್ಧ ಗಂಟೆಗೊಮ್ಮೆ ಬಸ್‌. ಮಂಗಳೂರು-ಮಣಿಪಾಲ ವೋಲ್ವೊ

ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಂಗಳೂರು - ಮಣಿಪಾಲ ನಡುವಣ ವೋಲ್ವೋ ಬಸ್ಸುಗಳ ಓಡಾಟಕ್ಕೆ ಸಂಬಂಧಿಸಿ ಸಾರ್ವಜನಿಕರ ಬೇಡಿಕೆಗೆ ಕೊನೆಗೂ ಸ್ಪಂದಿಸಿದ್ದು, ಇದೇ ಫೆ. 17 ರಿಂದ ಈ ಹಿಂದಿನಂತೆ ಅರ್ಧ ಗಂಟೆಗೊಂದರಂತೆ ಸೇವೆಯನ್ನು ಪುನರಾರಂಭಿಸುವುದಾಗಿ ಪ್ರಕಟಿಸಿದೆ.

ಪೀಕ್‌ ಆವರ್‌ಗಳಲ್ಲಿ 20 ನಿಮಿಷಕ್ಕೊಂದರಂತೆ ಹಾಗೂ ಉಳಿದ ಸಮಯದಲ್ಲಿ (ಮಧ್ಯಾಹ್ನ ವೇಳೆ) 45 ನಿಮಿಷಗಳಿಗೆ ಒಂದರಂತೆ ಬಸ್ಸು ಬಿಡುವುದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ಆಗುವ ಅನಾನುಕೂಲತೆಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ವರದಿ ಮಾಡಲಾಗಿತ್ತು.

ಜನಾಭಿಪ್ರಾಯಕ್ಕೆ ಮಣಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಳೆಯ ವೇಳಾ ಪಟ್ಟಿಯ ಪ್ರಕಾರ ನಗರೈಸಾರಿಗೆ ವೋಲ್ವೋ ಬಸ್ಸುಗಳ ಕಾರ್ಯಾಚರಣೆ ಮಾಡಲು ನಿರ್ಧರಿಸಿದ್ದಾರೆ. ಈ ಬಸ್ಸುಗಳು ಮಂಗಳೂರು-ಮಣಿಪಾಲ ಮಾರ್ಗದಲ್ಲಿ ಪ್ರತಿ ದಿನ 25 ದುಂಡು ಸುತ್ತುವಳಿ ಕಾರ್ಯಾಚರಣೆ ಮಾಡುತ್ತಿದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಈ ಹಿಂದೆ ಪ್ರಯಾಣಿಕರ ಹಿತದೃಷ್ಠಿಯ ಕಾರಣ ನೀಡಿ ಸಾರಿಗೆಗಳ ವೇಳೆಯನ್ನು ಪ್ರಾಯೋಗಿಕವಾಗಿ 2013ರ ಡಿ. 6ರಿಂದ ಬದಲಾವಣೆ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸಂಚಾರದ ಒತ್ತಡ ಹೆಚ್ಚಾಗಿರುವ ಸಮಯದಲ್ಲಿ 20 ನಿಮಿಷಕ್ಕೊಂದರಂತೆ ಫ್ರೀಕ್ವೆನ್ಸಿಯನ್ನು ಮಾಡಲಾಗಿದ್ದು, ಸಂಚಾರ ಒತ್ತಡ ಕಡಿಮೆಯಿರುವ ಮಧ್ಯಾಹ್ನದ ಸುತ್ತುವಳಿಗಳಲ್ಲಿ ಸಮಯ ಬದಲಾವಣೆ ಮಾಡಲಾಗಿತ್ತು.

ಫೆ. 17 ರಿಂದ ಅನ್ವಯವಾಗುವಂತೆ ವೋಲ್ವೊ ವಾಹನಗಳ ವೇಳಾಪಟ್ಟಿ ಈ ರೀತಿ ಇದೆ.

ಮಂಗಳೂರಿನಿಂದ ಹೊರಡುವ ವೇಳೆ: ಬೆಳಗ್ಗೆ 7, 7.30, 8, 8.30, 9, 9.30, 10, 10.30, 11, 11.30, ಮಧ್ಯಾಹ್ನ 12, 12.30, 1, 1.30, 2, 2.30, 3, 3.30, ಸಂಜೆ 4, 4.30, 5, 5.30, 6, 6.30 ಹಾಗೂ ರಾತ್ರಿ 7 ಗಂಟೆ.

ಮಣಿಪಾಲದಿಂದ ಹೊರಡುವ ವೇಳೆ: ಬೆಳಗ್ಗೆ 7.15, 7.45, 8.15, 8.45, 9.15, 9.45, 10.15, 10.45, 11.15, 11.45, ಮಧ್ಯಾಹ್ನ 12.15, 12.45, 1.15, 1.45, 2.15, 2.45, 3.15, 3.45, ಸಂಜೆ 4.15, 4.45, 5.15, 5.45, 6.15, 6.45 ಹಾಗೂ ರಾತ್ರಿ 7.15 ಗಂಟೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com