ಮಾ. 2: ಆನೆಗುಡ್ಡೆ ವಿನಾಯಕ ದೇವಸ್ಥಾನ. ಯಜ್ಞ ಮಂಟಪ ಉದ್ಘಾಟನೆ, ಸುವರ್ಣ ಉತ್ಸವ ಪ್ರಭಾವಳಿ ಸಮರ್ಪಣೆ

ಕುಂಭಾಶಿ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ವಿಶ್ವೇಶ್ವರ ಯಜ್ಞ ಮಂಟಪ ಉದ್ಘಾಟನೆ ಹಾಗೂ ನೂತನವಾಗಿ ನಿರ್ಮಿಸಿರುವ ಸುವರ್ಣ ಉತ್ಸವ ಪ್ರಭಾವಳಿ (ಉತ್ಸವ ಮೂರ್ತಿ ಕವಚ ಸಹಿತ) ಸಮರ್ಪಣೆ, ಸಹಸ್ರ ನಾಳಿಕೇರ ಗಣಯಾಗ, ಬ್ರಹ್ಮ ಕಲಶ ವರ್ಧಂತಿ ಪ್ರಯುಕ್ತ 108 ರಜತ ಕಲಶಾಭಿಷೇಕ ಮಾ. 2ರಂದು ನಡೆಯಲಿದೆ.

ಬೆಳಗ್ಗೆ 8.30ಕ್ಕೆ ಆನೆಗುಡ್ಡೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶ್ರೀ ವಿದ್ಯಾಸಾಗರತೀರ್ಥ ಪಾದರ ಉಪಸ್ಥಿತಿಯಲ್ಲಿ ಸುವರ್ಣ ಪ್ರಭಾವಳಿಯ ಮೆರವಣಿಗೆಯೊಂದಿಗೆ ದೇವರಿಗೆ ಸಮರ್ಪಣೆ, 9.30ಕ್ಕೆ ಶ್ರೀಪಾದರಿಂದ ಶ್ರೀ ವಿಶ್ವೇಶ್ವರ ಯಜ್ಞ ಮಂಟಪದ ಉದ್ಘಾಟನೆ ನಡೆಯಲಿದೆ ಎಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com