ಫೆ. 22, 23: ಕಾರ್ಕಳದಲ್ಲಿ ನಿಟ್ಟೆ ಉತ್ಸವ

ಕಾರ್ಕಳ: ನಿಟ್ಟೆಯ ಜ| ಕೆ.ಎಸ್‌. ಹೆಗ್ಡೆ ಉದ್ಯಮಾಡಳಿತ ಸಂಸ್ಥೆ ವತಿಯಿಂದ 2014ರ ನಿಟ್ಟೆ ಉತ್ಸವ ಫೆ. 22 ಮತ್ತು 23ರಂದು ಕಾರ್ಕಳ ಪುಲ್ಕೇರಿಯ ನವೋದಯ ವೃತ್ತದ ಪರಿಸರದಲ್ಲಿ ಜರಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಉತ್ಪಾದಕರು ಮತ್ತು ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವಾಗಿ ಈ ಉತ್ಸವದಲ್ಲಿ ಉತ್ತಮ ಕಂಪೆನಿಗಳು ಸ್ಟಾಲ್‌ ತೆರೆಯಲಿದ್ದು, ಗ್ರಾಹಕರು ನೇರವಾಗಿ ಮಾರಾಟಗಾರರೊಡನೆ ಸಂವಹನ, ಸಂಪರ್ಕ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ.

ವಿತ್ತೀಯ ಸಂಸ್ಥೆಗಳು, ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ತ್ವರಿತ ಗತಿಯ ಗ್ರಾಹಕರ ಸರಕುಗಳ ಮಳಿಗೆ, ಅಟೋಮೊಬೈಲ್‌, ಗ್ರಾಹಕ ಕುಶಲೋಪಯೋಗಿ ಸರಕುಗಳ ವಿವಿಧ ಮಳಿಗೆಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದೆ. ಜತೆಗೆ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಉತ್ಸವದಲ್ಲಿ ಸ್ಟಾಲ್‌ ಹಾಕುವವರು ಹಾಗೂ ಹೆಚ್ಚಿನ ಮಾಹಿತಿಗೆ ಪ್ರೊ| ರಾಕೇಶ್‌ ಶೆಟ್ಟಿ, ಸಾಜನ್‌ ಸುವರ್ಣ ಅಥವಾ ಅನಂತಕೃಷ್ಣ ಶೆಣೈ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com