ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಬೇಕು

ಕುಂದಾಪುರ : ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ದೊರೆತಾಗ ಮಾತ್ರ ಸಮಾಜದಲ್ಲಿ ಉತ್ತಮ ನಾಗರೀಕನಾಗಲು ಸಾಧ್ಯ ಎಂದು ಸಂಸದ ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಅವರು ಕೋಡಿ ಶ್ರೀರಾಮ ವಿದ್ಯಾಕೇಂದ್ರದ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ ಮಕ್ಕಳಿಗೆ ಎಳೆವೆಯಲ್ಲಿ ಈ ನೆಲದ ಮಣ್ಣಿನ ಬಗ್ಗೆ ಭಕ್ತಿ ಹಾಗೂ ಶೃದ್ದೆಯನ್ನು ಬೆಳೆಸಬೇಕು. ಈ ದೇಶದ ಬಗ್ಗೆ ಅರಿತಾಗ ಮಾತ್ರ ಅವನು ನಿಜವಾದ ದೇಶ ಭಕ್ತನಾಗುತ್ತಾನೆ ಎಂದರು.

ಸಹನಾ ಡೆವಲಪರ ಅಂಕದಕಟ್ಟೆ ಇದರ ಪರವಾಗಿ ದಿ| ವಿಜಯ ಕುಮಾರ್‌ ಅವರ ಸ್ಮರಣಾರ್ಥವಾಗಿ ಕೊಡುಗೆಯಾಗಿ ನೀಡಿದ ತರಗತಿ ಕೋಣೆಯನ್ನು ಸುರೇಂದ್ರ ಶೆಟ್ಟಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಹಮೀದ್‌ ಸಾಹೇಬ್‌ ವಹಿಸಿದ್ದರು. ಪುರಸಭೆಯ ಅಧ್ಯಕ್ಷೆ ಕಲಾವತಿ, ಪುರಸಭಾ ಸದಸ್ಯರಾದ ಜ್ಯೋತಿ, ಪ್ರಭಾಕರ ಕೋಡಿ, ಸಂದೀಪ ಪೂಜಾರಿ, ಶಾಲೆಯ ಸಂಚಾಲಕ ಕೋಡಿ ನಾಗೇಶ ಕಾಮತ್‌, ಆಡಳಿತಾಧಿಕಾರಿ ಮಮತಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಸುಮಿತ್ರಾ ಸ್ವಾಗತಿಸಿ ಶಾಂತಿ ವಂದಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com