22ರಿಂದ ಪೌರಾಣಿಕ ನಾಟಕೋತ್ಸವ

ಉಡುಪಿ: ಸಾಂಸ್ಕೃತಿಕ ಸೇವಾ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಉಡುಪಿ ಭುಜಂಗ ಪಾರ್ಕ್‌ನ ಬಯಲು ರಂಗ ಮಂಟಪದಲ್ಲಿ ಫೆ.22ರಿಂದ 26ರ ವರೆಗೆ ಪೌರಾಣಿಕ ನಾಟಕೋತ್ಸವ ರಂಗ ಹಬ್ಬ-2 ನಡೆಯಲಿದೆ. 

ಸಂಸ್ಥೆಯ ಪದಾಧಿಕಾರಿಗಳು ಗುರುವಾರ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮವನ್ನು ಫೆ.22ರಂದು ಸಂಜೆ 6.30ಕ್ಕೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಸಂಸ್ಥೆಯ ವೆಬ್‌ಸೈಟ್ ಉದ್ಘಾಟಿಸಲಿದ್ದು, ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. 

ಫೆ.22ರಂದು ಸಂಜೆ 6.30ಕ್ಕೆ ನಾಟ್ಕ ಮುದ್ರಾಡಿ ತಂಡದಿಂದ ಡಾ.ಶ್ರೀಪಾದ ಭಟ್ ಶಿರಸಿ ನಿರ್ದೇಶನದ 'ಮೂರು ಹೆಜ್ಜೆ ಮೂರು ಲೋಕ', ಫೆ.23ರಂದು ಸುಮನಸಾ ಕೊಡವೂರು ತಂಡದಿಂದ ಬಾಸುಮ ಕೊಡಗು ನಿರ್ದೇಶನದ ಭೀಷ್ಮನ ಕೊನೆಯ ದಿನಗಳು, ಫೆ.24ರಂದು ಲಾವಣ್ಯ ಬೈಂದೂರು ತಂಡದಿಂದ ಸುರೇಶ್ ಅನಗಳ್ಳಿ ನಿರ್ದೇಶನದ 'ಏಕಲವ್ಯ', ಫೆ.25ರಂದು ಮಣಿಪಾಲದ ಸಂಗಮ ಕಲಾವಿದರಿಂದ ಡಾ.ಶ್ರೀಪಾದ ಭಟ್ ನಿರ್ದೇಶನದ ತುಳು ನಾಟಕ 'ಕರ್ಣಭಾರ' ಹಾಗೂ ಫೆ.26ರಂದು ಸುಮನಸಾ ಕೊಡವೂರು ತಂಡದಿಂದ ಬಾಲಕೃಷ್ಣ ಕೊಡವೂರು ನಿರ್ದೇಶನದ ತುಳು ನಾಟಕ 'ಕೋಟಿ ಚೆನ್ನಯ' ನಾಟಕ ಪ್ರದರ್ಶನಗೊಳ್ಳಲಿದೆ. 

ನಾಟಕ ಪ್ರದರ್ಶನದ ಮೊದಲು ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಂಗ ಸಾಧಕರಾದ ಆರ್.ಎಲ್.ಭಟ್, ವಸಂತ ಬನ್ನಾಡಿ, ಜೆ.ಸೀತಾರಾಮ ಶೆಟ್ಟಿ ಕೂರಾಡಿ, ಜಯರಾಂ ನೀಲಾವರ ಹಾಗೂ ರಾಜು ಬಿ.ತೋನ್ಸೆ ಅವರಿಗೆ ಸನ್ಮಾನ ನಡೆಯಲಿದೆ. ಫೆ.26ರಂದು ನಡೆಯುವ ರಂಗಹಬ್ಬದ ಸಮಾರೋಪದ ಅಧ್ಯಕ್ಷತೆಯನ್ನು ಸಂಸದ ಜಯಪ್ರಕಾಶ್ ಹೆಗ್ಡೆ ವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಎಂ.ಎಸ್. ಭಟ್, ಅಧ್ಯಕ್ಷ ಪ್ರವೀಣ್ ಜಿ.ಕೊಡವೂರು, ಪ್ರ.ಕಾ.ಯೋಗೀಶ್ ಕೊಳಲಗಿರಿ, ಪ್ರವೀಣ್‌ಚಂದ್ರ ತೋನ್ಸೆ, ನಿರ್ದೇಶಕರಾದ ಬಾಲಕೃಷ್ಣ ಕೊಡವೂರು, ಚಂದ್ರಕಾಂತ ಕಲ್ಮಾಡಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com