ಹೂವಿನಕೆರೆ: ವಾದಿರಾಜ ಗುರು ಜಯಂತಿ ಆಚರಣೆ

ಕುಂದಾಪುರ: ವಾದಿರಾಜ ಗುರುಗಳು ತಮ್ಮ ಅದ್ಭುತ ತಪಃಶಕ್ತಿ, ಪವಾಡಗಳ ಮೂಲಕ ಸಮಾಜದ ವೌಢ್ಯಗಳು, ಜನರ ಸಂಕಷ್ಟಗಳನ್ನು ನಿವಾರಿಸಿದ್ದಾರೆ. ತಮ್ಮ ಅಪ್ರತಿಮ ಕೃತಿಗಳ ಮೂಲಕ ಸಾಹಿತ್ಯ, ಸಂಗೀತ ಕ್ಷೇತ್ರಗಳನ್ನೂ ಶ್ರೀಮಂತಗೊಳಿಸಿದ್ದಾರೆ. ಅವರ ಕೀರ್ತನೆಗಳ ಗಾಯನ, ಕೃತಿಗಳ ಅಧ್ಯಯನಗಳಿಂದಲೇ ಜೀವನ ಸಾರ್ಥಕ್ಯ ಪಡೆಯಬಹುದು ಎಂದು ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ಸ್ವಾಮೀಜಿ ಹೇಳಿದರು. 

ವಾದಿರಾಜ ಯತಿಗಳ ಜನ್ಮಕ್ಷೇತ್ರ ವಕ್ವಾಡಿ ಸಮೀಪದ ಹೂವಿನಕೆರೆ ಮಠದಲ್ಲಿ ಜರುಗಿದ ವಾದಿರಾಜಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. 

ಉಡುಪಿ ಶ್ರೀಕೃಷ್ಣ ಪೂಜಾ ಕೈಂಕರ್ಯ ಮುಗಿಸಿ ಪ್ರಥಮ ಬಾರಿಗೆ ಶ್ರೀಕ್ಷೇತ್ರ ಹೂವಿನಕೆರೆಗೆ ಆಗಮಿಸಿದ ಸ್ವಾಮೀಜಿಯವರನ್ನು ಶಿಷ್ಯವರ್ಗವಾದ ಕೋಟೇಶ್ವರ ಮಾಗಣೆಯವರ ಪರವಾಗಿ ಮಠದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ರಾಮಹತ್ವಾರ್ ಫಲಪುಷ್ಪ ಪಾದ ಕಾಣಿಕೆ ನೀಡಿ ಸತ್ಕರಿಸಿದರು. 

ಹಯವದನ ಉಪನಿಷತ್ ಪ್ರಸಾರ ಪ್ರತಿಷ್ಠಾನದವರು ಹೊರತಂದ ಶ್ರೀ ವಾದಿರಾಜಗುರುರಚಿತ ಕೀರ್ತನೆಗಳ ಸಿಡಿಗಳನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಶ್ರೀಪಾದ ಭಟ್ ಧ್ವನಿಮುದ್ರಿಕೆಯ ವಿವರ ನೀಡಿದರು. ಭಾರತಿ ಭಟ್ ಪ್ರಾರ್ಥಿಸಿದರು. ಕೋಟೇಶ್ವರ ಶ್ರೀ ಕೋದಂಡರಾಮ ಮಂದಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ. ನಾಗೇಂದ್ರ ಭಟ್ ಸ್ವಾಗತಿಸಿದರು. ವಿದ್ವಾನ್ ಶ್ರೀಪತಿ ಉಪಾಧ್ಯಾಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ.ಜಿ. ವೈದ್ಯ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com