ಮಹಿಳೆಯರ ಸುರಕ್ಷತೆಗೆ 'ಗ್ರ್ಯಾಜೆಟ್‌' ಉಪಕರಣ ಸಿದ್ಧ: ವಾಮನ್ ಕಾಮತ್

ಮಂಗಳೂರು: ಅಮೃತಾನಂದಮಯಿ ಸಂಶೋಧನೆ ಸಂಸ್ಥೆ ವತಿಯಿಂದ ಮಹಿಳೆಯರ ಸುರಕ್ಷತೆಗಾಗಿ 'ಗ್ರ್ಯಾಜೆಟ್‌' ಎಂಬ ಉಪಕರಣ ಸಿದ್ಧಪಡಿಸಿದ್ದು, ಕರ್ನಾಟಕದ ಮಹಿಳೆಯರಿಗೆ ಪರಿಚಯಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ವಾಮನ್ ಕಾಮತ್ ಹೇಳಿದ್ದಾರೆ.
 ಬೋಳೂರು ಅಮೃತ ವಿದ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
 ಈಗಾಗಲೇ ಕಳೆದ ಸೆ.17 ರಂದು ಕೇರಳದ ಅಮೃತಪುರಿಯಲ್ಲಿ ಮಹಿಳೆಯರಿಗೆ ವಿತರಿಸಲಾಗಿದೆ. ಇದು ಅಪಾಯದ ಅಲಾರಾಂ ಗಂಟೆ ಬಾರಿಸುತ್ತದೆ. ಇದರ ಇನ್ನೊಂದು ಉಪಕರಣ ಪೊಲೀಸರ ಬಳಿ ಇದ್ದು, ಮಹಿಳೆ ತನಗೆ ತೊಂದರೆ ಉಂಟಾದ ಸಂದರ್ಭದಲ್ಲಿ ಬಟನ್ ಅದುಮಿದರೆ ಅಲಾರಾಂ ಹೊಡೆಯುತ್ತದೆ. ಈ ಉಪಕರಣದಿಂದ ಆರೋಪಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಮತ್ತು ಮಹಿಳೆಯರನ್ನು ರಕ್ಷಿಸಬಹುದು ಎಂದರು.
 ಮಾತಾ ಅಮೃತಾನಂದಮಯಿ ಮಠದಿಂದ ಈಗಾಗಲೇ ಉತ್ತರಾಖಂಡದಲ್ಲಿ ದುರಂತಕ್ಕೊಳಗಾದ 42 ಗ್ರಾಮದಲ್ಲಿ ರು. 50 ಕೋಟಿ ವೆಚ್ಚದಲ್ಲಿ 500 ಮನೆ ನಿರ್ಮಾಣಗೊಳಿಸಲಾಗುವುದು. ಅಲ್ಲದೆ ವೈದ್ಯಕೀಯ ಕ್ಲಿನಿಕ್, ಅನಾಥಾಲಯ, ಶಾಲೆ ಕೂಡ ನಿರ್ಮಿಸಲಾಗುವುದು ಎಂದರು.
 ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ದೇಶದ 111 ಗ್ರಾಮಗಳನ್ನು ಆಧುನಿಕ ಗ್ರಾಮಗಳನ್ನಾಗಿ ರೂಪಿಸಲು ತೀರ್ಮಾನಿಸಲಾಗಿದೆ. ಕರ್ನಾಟಕದಲ್ಲಿ 5 ಗ್ರಾಮಗಳನ್ನು ಗುರುತಿಸಿದ್ದು, ಸದ್ಯಕ್ಕೆ ದ.ಕ. ಜಿಲ್ಲೆಯ ಕಾರ್ನಾಡ್ ಹಾಗೂ ಶಿವಮೊಗ್ಗದ ಬೈಸ್ ಗ್ರಾಮಗಳಲ್ಲಿ ಕಾರ್ಯ ಪ್ರಾರಂಭಿಸಲಾಗಿದೆ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com