ಪ್ರಚಾರ ಗಿಟ್ಟಿಕೊಳ್ಳುವ ಭರದಲ್ಲಿ ಕಾಂಗ್ರೆಸ್‌: ಕೋಟ ಶ್ರೀನಿವಾಸ ಪೂಜಾರಿ ಟೀಕೆ

ಬ್ರಹ್ಮಾವರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ  ಕೋಡಿ ಆನಗಳ್ಳಿ ಸೇತುವೆ, ಕೋಡಿ ಕನ್ಯಾಣದ ಜಟ್ಟಿ,  ಕುಂದಾಪುರ ಕೋಡಿ ಸಂಪರ್ಕ ವ್ಯವಸ್ಥೆ ಮುಂತಾದ ಅಭಿವೃದ್ದಿ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷ ತನ್ನದೇ ಸಾಧನೆ ಎನ್ನುವ ರೀತಿಯಲ್ಲಿ ಶಿಲಾನ್ಯಾಸ, ಉದ್ಘಾಟನೆ ಮುಂತಾದ  ಕಾರ್ಯಕ್ರಮಗಳಿಂದ ಪ್ರಚಾರ ಗಿಟ್ಟಿಸಿಕೊಳ್ಳುವ ಕಾರ್ಯದಲ್ಲಿ ನಿರತವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಸಾಸ್ತಾನ ಸಮೀಪದ ಕೋಡಿ ಕನ್ಯಾಣದಲ್ಲಿ ಭಾನುವಾರ ನಡೆದ ನಮೋ ಟೀ ಪಾರ್ಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿ ಸರ್ಕಾರದ ಅವಽಧಿಯಲ್ಲಿ ಮಂಜೂರಾದ ಪಡಿತರಚೀಟಿ ಮತ್ತು ಪಿಂಚಣಿ ಯೋಜನೆಗಳನ್ನು ಸಭೆ ಸೇರಿಸಿ ಹಂಚುವುದರಲ್ಲೇ ತಲ್ಲೀನರಾಗಿದ್ದಾರೆ ಹೊರತು  ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತಿಸುತ್ತಿಲ್ಲ ಎಂದರು.
ಕೋಟ ಶಕ್ತಿ ಕೇಂದ್ರದ ಅಧ್ಯಕ್ಷ ವಿಠಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. 

ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜೇಶ್ ಕಾವೇರಿ, ರಾಜ್ಯ ಮೀನುಗಾರಿಕಾ ಪ್ರಕೋಷ್ಠದ  ಸಂಚಾಲಕ ಕಿಶೋರ್ ಕುಮಾರ್, ಕೋಟ ವಲಯ ಯುವ ಮೋರ್ಚಾದ ಅಧ್ಯಕ್ಷ ಸಂತೋಷ್ ಪ್ರಭು, ಸಹಕಾರಿ ಭಾರತೀಯ ಅಧ್ಯಕ್ಷ ಮಂಜುನಾಥ್ ಕೆ.ಎಸ್, ಸ್ಥಾನೀಯ ಸಮಿತಿಯ ಅಧ್ಯಕ್ಷ ಮಹಾಬಲ ಕುಂದರ್, ಜಗನ್ನಾಥ್‌ ಅಮೀನ್‌ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರವೀಂದ್ರ ಕುಂದರ್, ಮಹೇಶ್ ಕುಮಾರ್ ಅವರಿಗೆ ಪಕ್ಷದ ಧ್ವಜವನ್ನು ನೀಡಿ ಬಿಜೆಪಿಗೆ ಸೇರ್ಪೆಡೆಗೊಳಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com