ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ

ಮಂಗಳೂರು: ಪ್ರವಾಸೋದ್ಯಮ ಇಲಾಖೆಯಿಂದ 2013 - 14ನೇ ಸಾಲಿನಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾಕ ನಿರುದ್ಯೋಗಿ ಯುವಕರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ಪ್ರವಾಸಿ ವಾಹನ ಖರೀದಿಸಿ ವಿತರಿಸಲು ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ದ್ವಿ-ಪ್ರತಿಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರವಾಸಿ ಟ್ಯಾಕ್ಸಿಗಳಿಗೆ ತಗಲುವ ಒಟ್ಟು ವೆಚ್ಚಕ್ಕೆ ಗರಿಷ್ಠ 2 ಲಕ್ಷ ರೂ.ಗಳನ್ನು ಇಲಾಖೆಯಿಂದ ಸಹಾಯ ಧನದ ರೂಪದಲ್ಲಿ ನೀಡಲಾಗುವುದು. ಟ್ಯಾಕ್ಸಿ ಮೊತ್ತದ ಶೇ. 5ರಷ್ಟು ಹಣವನ್ನು ಫಲಾನುಭವಿ ಭರಿಸಿಕೊಂಡು ಉಳಿದ ಮೊತ್ತವನ್ನು ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕ್‌ ಮೂಲಕ ಸಾಲ ಸೌಲಭ್ಯ ಒದಗಿಸಿ ಖರೀದಿಸಿ ವಿತರಿಸಲಾಗುವುದು.

ಅಭ್ಯರ್ಥಿಗಳು ಕನಿಷ್ಠ ಎಸೆಸ್ಸೆಲ್ಸಿ ಉತ್ತೀರ್ಣರಾಗಿದ್ದು, ವಯೋಮಿತಿ 20ರಿಂದ 45ರ ಒಳಗಿರಬೇಕು. ದ. ಕ. ಜಿಲ್ಲೆಯಲ್ಲಿ ಲಘುವಾಹನ ಚಾಲನಾ ಪರವಾನಿಗೆ ಹಾಗೂ ಚಾಲಕರ ಬ್ಯಾಡ್ಜ್ ಹೊಂದಿರಬೇಕು. ಮಾ. 10ರ ಸಂಜೆ 4.30ರ ಒಳಗೆ ನಿಗದಿತ ಅರ್ಜಿಯನ್ನು ಖುದ್ದಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ, ಲಾಲ್‌ಬಾಗ್‌, ಮಂಗಳೂರು ಇವರಿಂದ ಪಡೆಯಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ದ್ವಿ - ಪ್ರತಿಯಲ್ಲಿ ಅದೇ ಕಚೇರಿಗೆ ಸೀಲು ಮಾಡಿದ ಲಕೋಟೆಯಲ್ಲಿ ಮಾ. 20ರ ಸಂಜೆ 4.30ರ ಒಳಗೆ ನೋಂದಾಯಿತ ಅಂಚೆ ಮೂಲಕ ತಲುಪುವಂತೆ ಅಥವಾ ಖುದ್ದಾಗಿ ಲಕೋಟೆ ಸಲ್ಲಿಸಿ ಸ್ವೀಕೃತಿ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com