ಕೊಲ್ಲೂರು-ನಾಗೋಡಿ ಘಾಟ್ ಸಂಚಾರ ನಿರ್ಬಂಧ

ಕುಂದಾಪುರ: ಕೊಲ್ಲೂರು ಸಮೀಪದ ನಾಗೋಡಿ ಘಾಟಿಯ ಕಾಂಕ್ರಿಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಫೆ.15ರಿಂದ ಮಾ.15ರ ತನಕ ವಾಹನ ಸಂಚಾರ ನಿರ್ಬಂಸಿ ಉಡುಪಿ ಜಿಲ್ಲಾಕಾರಿ ಆದೇಶ ಹೊರಡಿಸಿದ್ದಾರೆ. ಒಟ್ಟು 8.40 ಕಿ.ಮೀ. ಕಾಂಕ್ರಿಟೀಕರಣ ಕಾಮಗಾರಿಯಲ್ಲಿ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಕಾಮಗಾರಿ ಉಳಿದಿದ್ದು ಘಾಟಿ ಮಾರ್ಗ ತೀರಾ ಇಕ್ಕಟ್ಟಾಗಿರುವುದರಿಂದ ಕಾಂಕ್ರೀಟ್ ಕ್ಯೂರಿಂಗ್‌ಗೆ ಕನಿಷ್ಠ 55 ದಿನಗಳು ಬೇಕಾಗಿರುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. 
  ಈ ದಿನಗಳಲ್ಲಿ ಬೈಂದೂರು ಮತ್ತು ಕುಂದಾಪುರದಿಂದ ಹೊರಡುವ ವಾಹನಗಳು ಕೊಲ್ಲೂರಿಗೆ ತೆರಳಿ ವಾಪಸಾಗುವುದು, ಕೊಲ್ಲೂರಿನಿಂದ ಹೊಸನಗರಕ್ಕೆ ಪಯಣ ಬೆಳೆಸುವ ವಾಹನಗಳು ವಂಡ್ಸೆ, ಅಂಪಾರು, ಸಿದ್ಧಾಪುರ, ಹೊಸಂಗಡಿ ಮಾರ್ಗವಾಗಿ ಬಾಳೆಬರೆ ಘಾಟ್ ಮೂಲಕ ಸಾಗುವುದು ಹಾಗೂ ಹೊಸನಗರದಿಂದ ಕೊಲ್ಲೂರಿಗೆ ಆಗಮಿಸುವ ವಾಹನಗಳು ನಗರ, ಮಾಸ್ತಿಕಟ್ಟೆ, ಹೊಸಂಗಡಿ, ಸಿದ್ಧಾಪುರ, ಅಂಪಾರು, ವಂಡ್ಸೆ ಮೂಲಕ ಕೊಲ್ಲೂರಿಗೆ ತೆರಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com