ದಲಿತರ ಮಾಹಿತಿ ಕಾರ್ಯಾಗಾರ ಉದ್ಘಾಟನೆ

ಕುಂದಾಪುರ: ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ಹರಿಸಬೇಕು. ಸರಕಾರಿ ಸವಲತ್ತು ಪಡೆಯಬೇಕು. ದಲಿತ ದೌರ್ಜನ್ಯ ಪ್ರಕರಣ ಪರಿಹರಿಸುವ ಮಟ್ಟದಲ್ಲಿ ಪ್ರಯತ್ನಿಸಬೇಕು. ಸಮಸ್ಯೆ ಬಗೆಹರಿಸಲು ಸಂವಿಧಾನದಲ್ಲಿರುವ ಹಕ್ಕು ಕ್ರಮಬದ್ಧವಾಗಿ ತೆಗೆದುಕೊಳ್ಳಬೇಕು ಎಂದು ಶಂಕರನಾರಾಯಣ ಠಾಣಾಧಿಕಾರಿ ದೇಜಪ್ಪ ಹೇಳಿದರು. 

ಜ್ಯೋತಿ ಬಾಪುಲೆ ಜನ್ಮ ದಿನಾಚರಣೆ ಅಂಗವಾಗಿ ಸಿದ್ಧಾಪುರ ಗ್ರಾಪಂ ಸಭಾಂಗಣದಲ್ಲಿ ಬುಧವಾರ ನಡೆದ ದಲಿತರ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸಂಘಟನೆ ಸಂಚಾಲಕ ಉದಯಕುಮಾರ ತಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಸಿದ್ಧಾಪುರ ಗ್ರಾಪಂ ಅಧ್ಯಕ್ಷ ಸದಾನಂದ ಭಂಡಾರಿ ವಿದ್ಯಾರ್ಥಿ ವೇತನ ಹಾಗೂ ನಾನಾ ಇಲಾಖೆಗಳ ಸವಲತ್ತು ವಿತರಿಸಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಶಿವರಾಮೇ ಗೌಡ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ಅನಿತಾ ಬಿ.ಆರ್., ಸಿದ್ಧಾಪುರ ಗ್ರಾಮಾಭಿವೃದ್ಧಿ ಅಧಿಕಾರಿ ಶ್ರೀಧರ ಕಾಮತ್, ಸಿದ್ಧಾಪುರ ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ ಮೂರ್ತಿ ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. 

ಉಡುಪಿ ಜಿಲ್ಲಾ ಸಂಚಾಲಕ ಚಂದ್ರಶೇಖರ ಜಿ., ತಾಲೂಕು ಸಂಚಾಲಕ ಗೋವಿಂದ ಮಾರ್ಗೋಳಿ, ತಾಲೂಕು ಸಂಘಟನೆ ಸಂಚಾಲಕ ಮಂಜುನಾಥ ಸಿದ್ಧಾಪುರ, ಸಿದ್ಧಾಪುರ ಗ್ರಾಮ ಸಂಚಾಲಕ ಚಂದ್ರ ಉಳ್ಳೂರು, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಬ್ರಿಜೇಶ್ ವಿನಯಕುಮಾರ ಉಪಸ್ಥಿತರಿದ್ದರು. ಸಂಚಾಲಕರಾಗಿ ಚಂದ್ರ ಉಳ್ಳೂರು-74, ಸಂಘಟನಾ ಸಂಚಾಲಕರಾಗಿ ಗೋವಿಂದ ಕಾಸನ್‌ಕಟ್ಟೆ, ಸಂದೀಪ ಕಾಸನ್‌ಕಟ್ಟೆ, ಕಿರಣ ಕಾಸನ್‌ಕಟ್ಟೆ, ಕುಷ್ಠ ಕೋಡ್ಗಿ, ಗುರುರಾಜ ಜನ್ಸಾಲೆ, ಕೃಷ್ಣ ಉಳ್ಳೂರು-74, ರಾಘವೇಂದ್ರ ಜನ್ಸಾಲೆ, ದಿನೇಶ ಜನ್ಸಾಲೆ, ಸಲಹಾ ಸಮಿತಿಗೆ ನಾರಾಯಣ ನೂಜಿನಬೈಲು, ನಾಗೇಶ ಕೊಡ್ಗಿ, ಅಂಬರೀಶ್ ಕಾಸನ್‌ಕಟ್ಟೆ, ಅಣ್ಣಪ್ಪ ಜನ್ಸಾಲೆ, ಸಂಪತ್ ಕಾಸನ್‌ಕಟ್ಟೆ ಪದಾಧಿಕಾರಿಯಾಗಿ ಆಯ್ಕೆಯಾದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com