ವಿಶ್ವಕರ್ಮ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ

ಸಿದ್ದಾಪುರ: ಗಾಯತ್ರಿ ಮಂತ್ರ ಉಪದೇಶಿತ ವಟುಗಳು ಕಾಯ, ವಾಚ, ಮನಸಾ ಅನುಷ್ಠಾನ ಮಾಡಿದಾಗ ಪರಮ ಜ್ಞಾನ ಸಿಗುತ್ತದೆ ಎಂದು ಆನೆಗುಂದಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು. 

ಅವರು ಅಮಾಸೆಬೆಲು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಸಾಮೂಹಿಕ ಉಚಿತ ಬ್ರಹ್ಮೋಪದೇಶ ಹಾಗೂ ಸಂಘದ ಶ್ರೀ ವಿಶ್ವಕರ್ಮ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರದಂದು ಅಮಾಸೆಬೆಲು ಶ್ರೀ ಕುಮಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೆರವೇರಿಸಿ, ವಟುಗಳಿಗೆ ಆಶೀರ್ವಚನ ನೀಡಿ ಮಾತನಾಡಿದರು. 

ಅಮಾಸೆಬೆಲು ಇಂತಹ ಗ್ರಾಮೀಣ ಭಾಗಗಳಲ್ಲಿ ತಮ್ಮದೆಯಾದ ವೆಬ್‌ಸೆಟ್ ಸಮಾಜಕ್ಕೆ ಲೋಕಾರ್ಪಣೆ ಮಾಡುತ್ತಿರುವುದು ಸಂತೋಷದಾಯಕವಾದ ವಿಚಾರ. ವಿಶ್ವಕರ್ಮರು ಸಂಘಟನೆ ಸ್ಥಾಪನೆ ಮಾಡುವ ಮೂಲಕ ಕಡಿಮೆ ಅವಯಲ್ಲಿ ಇಂತಹ ಉತ್ತಮ ಕಾರ್ಯಮಾಡುತ್ತಿರುವುದು ಶ್ಲಾಘನೀಯ. ತಮ್ಮ ಸಂಪಾದನೆಯ ಸ್ವಲ್ಪ ಮೊತ್ತವನ್ನು ಸಮಾಜದ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಹೇಳಿದರು. 

ಲಯನ್ ಡಿಸ್ಟ್ರಿಕ್ಟ್ ಅಧ್ಯಕ್ಷ ಲಯನ್ ಟಿ.ಜಿ. ಆಚಾರ್ಯ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮದ ಅಭಿವದ್ಧಿಗೆ ಸಂಘಟನೆ ಮುಖ್ಯ. ಜಗತ್ತಿಗೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ವಿಶ್ವಕರ್ಮರ ಈ ಸಂಘಟನೆಯ ಮೂಲಕ ಮಹಿಳೆಯರು ಕೂಡ ಮುಂದೆ ಬರಬೇಕಾಗಿದೆ. ಪ್ರಸುತ್ತ ಪರಿಸ್ಥಿತಿಯಲ್ಲಿ ವಿಶ್ವಕರ್ಮರು ರಾಜಕೀಯವಾಗಿ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. 
ಮುಖ್ಯ ಅತಿಥಿಯಾಗಿ ಎಸ್.ಕೆ.ಎಫ್ ಗ್ರೂಪ್ಸ್‌ನ ಸಿ.ಎಂ.ಡಿ. ರಾಮಕಷ್ಣ ಆಚಾರ್ ಮೂಡಬಿದ್ರೆ ಅವರು ಮಾತನಾಡಿ, ವಿಶ್ವಕರ್ಮರಿಗೆ ಜನ್ಮದತ್ತವಾದ ಪ್ರತಿಭೆ ಇದೆ. ಸಮಾಜದಲ್ಲಿರುವ ಮುಖಂಡರಿಗೆ ಸಮಾಜದ ಬಗ್ಗೆ ಕಾಳಜಿ ಕಡಿಮೆಯಾಗುತ್ತದೆ. ವಿಶ್ವಕರ್ಮರು ಆದಾಯ ಮಿತಿ ಅರಿತು, ಶುಭ ಕಾರ್ಯಗಳಿಗೆ ಹಾಗೂ ಇನ್ನಿತರಗಳಿಗೆ ದುಂದುವೆಚ್ಚ ಮಾಡಬಾರದು ಎಂದು ಹೇಳಿದರು. ಮಾಸೆಬೈಲು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಕೆ. ಭಾಸ್ಕರ ಆಚಾರ್ಯ ಗುಂಡಿಬೇರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೆಸಿದರು. 
ಕುಂದಾಪುರ ಶ್ರೀ ವಿಶ್ವಬ್ರಾಹ್ಮಣ ಸಂಘ ದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಕೋಟ ಪಡುಕರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಂಜುನಾಥ ಆಚಾರ್ ಯಳ್ಳಂಪಳ್ಳಿ, ಸಂಘದ ಗೌರವಾಧ್ಯಕ್ಷ ವಿಶ್ವನಾಥ ಆಚಾರ್ಯ ಅಡಿಗದ್ದೆ, ಗ್ರಾಮ ಮೊಕ್ತೇಸರ ಗಣಪತಿ ಆಚಾರ್ಯ ಕುಂದ, ಮಾಸೆಬೈಲು ಶ್ರೀ ಕಾಳಿಕಾಂಬಾ ಮಹಿಳಾ ಸಂಘದ ಅಧ್ಯಕ್ಷೆ ಸಪ್ನ ಪ್ರಭಾಕರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. 

ಹಿರಿಯ ಆದರ್ಶ ದಂಪತಿಗಳಾದ ಮಹಾಲಿಂಗ ಆಚಾರ್ಯ ದಂಪತಿಗಳು ಕೆಲಾ ಹಾಗೂ ಮಹಾಬಲ ಆಚಾರ್ಯ ದಂಪತಿಗಳು ಕೆಲಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷರಾದ ನರಸಿಂಹ ಆಚಾರ್ಯ ಕುಂದ ಸ್ವಾಗತಿಸಿದರು. ಅಮಾಸೆಬೆಲು ಗ್ರಾ. ಪಂ. ನಿಕಟ ಪೂರ್ವಾಧ್ಯಕ್ಷ ಎಂ. ಅಶೋಕ್ ಕುಮಾರ ಆಚಾರ್ಯ ಪ್ರಾಸ್ಥವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಜಯರಾಮ ಎಚ್. ಆಚಾರ್ಯ ಮಚ್ಚಟ್ಟು ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಮಚ್ಚಟ್ಟು ಕಾರ್ಯಕ್ರಮ ನಿರೂಪಿಸಿದರು. ಶ್ರೀ ವಿಶ್ವಕರ್ಮ ಯುವ ಒಕ್ಕೂಟದ ಅಧ್ಯಕ್ಷ ಅರುಣ ಆಚಾರ್ಯ ಕುಂದ ವಂದಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com