ಮಿಂಚಿನ ವೇಗದಲ್ಲಿ ಸಂಘಟನೆ ಆಸ್ಕರ್‌

ಬ್ರಹ್ಮಾವರ : ವಿಧಾನಸಭಾ ಚುನಾವಣೆಯ ದ್ವಿಗುಣ ವೇಗವನ್ನು ಕಂಡುಕೊಂಡು ಉತ್ತಮ ವಾತಾವರಣ ನಿರ್ಮಿಸಬೇಕು. ಯುವಕರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಅಂತರದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿ ಕೇಂದ್ರ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು.

ಅವರು ಸೋಮವಾರ ಬ್ರಹ್ಮಾವರ ಮದರ್‌ಪ್ಯಾಲೇಸ್‌ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ- 2014ರ ಬ್ರಹ್ಮಾವರ ಜಿ.ಪಂ. ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.

ಕಾಂಗ್ರೆಸ್‌ ಸಿದ್ಧಾಂತಗಳ ಮೇಲೆ ಕಟ್ಟಿದ ಪಕ್ಷ. ಸಾಮಾಜಿಕವಾಗಿ ಹಿಂದುಳಿದವರಿಗೆ ಹತ್ತು ಹಲವು ಕಾರ್ಯಕ್ರಮಗಳು, ರೈತರಿಗೆ ಪ್ರೋತ್ಸಾಹ, ನಿವೇಶನ ನೀಡಿಕೆಯಂತರ ದಿಟ್ಟ ನಿರ್ಧಾರ ಕೈಗೊಂಡ ಕಾಂಗ್ರೆಸ್‌ ಕುರಿತು ಬಿಜೆಪಿಗೆ ಮಾತನಾಡುವ ಹಕ್ಕು ಇಲ್ಲ ಎಂದು ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು.

ಸಭೆಯಲ್ಲಿ ಶಾಸಕ ಪ್ರಮೋದ್‌ ಮಧ್ವರಾಜ್‌, ಸಚಿವ ವಿನಯ ಕುಮಾರ್‌ ಸೊರಕೆ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ, ಪ್ರಮುಖರಾದ ಬ್ಲೋಸಂ ಫೆರ್ನಾಂಡಿಸ್‌, ರಾಜೇಶ್‌ ಶೆಟ್ಟಿ ಬಿರ್ತಿ, ವೆರೋನಿಕಾ ಕರ್ನೇಲಿಯೊ, ಎಂ.ಎ. ಗಫೂರ್‌, ಸರಸು ಬಂಗೇರ, ಅಶೋಕ್‌ ಕೊಡವೂರು, ಮಲ್ಲಿಕಾ ಬಿ. ಪೂಜಾರಿ, ಗೋಪಿ ಕೆ. ನಾಯ್ಕ, ಎಸ್‌. ನಾರಾಯಣ್‌, ಕೇಶವ ಕುಮಾರ್‌, ಉಷಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಜಿ.ಪಂ. ಮಾಜಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ ಸ್ವಾಗತಿಸಿದರು. ಹರೀಶ್‌ ಶೆಟ್ಟಿ ಚೇರ್ಕಾಡಿ ಮತ್ತು ದಿನಕರ ಹೇರೂರು ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com