ಯುವಜನರೇ ನಿರ್ಧಾರಕ ಶಕ್ತಿ: ಸೊರಕೆ

ಕುಂದಾಪುರ: ದೇಶದಲ್ಲಿ 38 ವರ್ಷಕ್ಕಿಂತ ಕೆಳಗಿನ ಶೇ.55 ಮತದಾರರಿದ್ದು, ಅವರು ಈ ಚುನಾವಣೆಯಲ್ಲಿ ದೇಶದ ಭವಿಷ್ಯ ನಿರ್ಧರಿಸಲಿದ್ದಾರೆ ಎಂದು ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. 

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ನಾಗೂರಿನ ಸಾಗರ ಸಭಾಭವನದಲ್ಲಿ ಬೈಂದೂರು ವಿಧಾನಸಭೆ ವ್ಯಾಪ್ತಿಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಭೆಯಲ್ಲಿ ಅವರು ಮಾತನಾಡಿದರು. 

ಅಭಿವದ್ಧಿ ಪರ್ವ: ವಾರಾಹಿ ನೀರಾವರಿ ಯೋಜನೆ ಪ್ರಗತಿಯಾಗಿದ್ದು, ಮೇ 15ರೊಳಗೆ 8 ಲಕ್ಷ ಹೆಕ್ಟೇರ್ ಕಷಿಭೂಮಿಗೆ ನೀರು ನೀಡಲಾಗುತ್ತದೆ. ಡೀಮ್ಡ್ ಫಾರೆಸ್ಟ್ ಕ್ಲಿಯರೆನ್ಸ್ ಪಡಕೊಂಡಿದ್ದೇವೆ. ಸಿಆರ್‌ಝಡ್, ಕಸ್ತೂರಿರಂಗನ್ ವರದಿಯಿಂದ ವಿನಾಯಿತಿ ನೀಡಲಾಗುತ್ತದೆ, ಬಡವರಿಗೆ ಹಕ್ಕುಪತ್ರ,ಸರಕಾರಿ ಭೂಮಿಯಲ್ಲಿ ನೆಲೆಸಿದವರಿಗೆ ಹಕ್ಕುಪತ್ರ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು ಸೊರಕೆ. 

ಯುವಜನರಿಂದ ನಿರ್ಧಾರ: ಕರಾವಳಿಯ ಕೆಲವು ಭಾಗದಲ್ಲಿ ಕೆಲವು ಸಂಘಟನೆಗಳು ಯುವಕರನ್ನು ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಯುವಕರು ಹರಿಯುವ ನೀರು ಇದ್ದಂತೆ, ಅದಕ್ಕೆ ಅಣೆಕಟ್ಟು ಕಟ್ಟುವುದರ ಮೂಲಕ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೇ ಹೊರತು ಅದನ್ನು ಹಾಗೆ ಬಿಟ್ಟರೆ ಮನೆ, ಮಠ ಕೊಚ್ಚಿಕೊಂಡು ಹೋಗುತ್ತದೆ ಎಂದರು. 

ಉಪಸ್ಥಿತಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಗೋಪಾಲ ಪೂಜಾರಿ, ಕಾಂಗ್ರೆಸ್ ನಾಯಕರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೆ.ರಮೇಶ ಗಾಣಿಗ, ಸುಬ್ರಹ್ಮಣ್ಯ ಪೂಜಾರಿ, ರಾಜು ಪೂಜಾರಿ, ರಾಜು ದೇವಾಡಿಗ, ಜಾಕೋಬ್ ಡಿಸೋಜ, ಗಣೇಶ್ ಶೇರುಗಾರ್, ದೇವಕಿ ಸಣ್ಣಯ್ಯ, ಜ್ಯೋತಿ ವಿ.ಪುತ್ರನ್, ಸುನಿಲ್ ಬಂಗೇರ, ಪ್ರಥ್ವಿರಾಜ್ ಶೆಟ್ಟಿ, ವಿಕಾಸ ಹೆಗ್ಡೆ, ಮದನ ಕುಮಾರ, ಸಿ.ಎಸ್. ಖಾರ್ವಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com