ಶಿವಮೊಗ್ಗ-ಬೈಂದೂರು ಪ್ರತ್ಯೇಕತಾ ಭಾವನೆ ಬೇಡ: ಗೀತಾ ಶಿವರಾಜ್‌ ಕುಮಾರ್‌

ಬೈಂದೂರು : ಲೋಕಸಭಾ ಕ್ಷೇತ್ರದ ಬಹುತೇಕ ಭಾಗಗಳು ಶಿವಮೊಗ್ಗ ವ್ಯಾಪ್ತಿಯಲ್ಲಿದೆ. ಹೀಗಾಗಿ ಚುನಾವಣೆಯ ಬಳಿಕ ಬೈಂದೂರು ನಗಣ್ಯವಾಗುತ್ತದೆ ಎನ್ನುವ ಭಾವನೆ ಬೇಡ ಬೈಂದೂರಿನ ಅಭಿವೃದ್ದಿಗೆ ವಿಶೇಷ ಆಧ್ಯತೆ ನೀಡುತ್ತೇನೆ. ಎಂದು ಶಿವಮೊಗ್ಗ ಲೋಕಸಭೆಯ ಜೆ.ಡಿ.ಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಹೇಳಿದರು.

ಅವರು ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ದಿ. ಎಸ್‌. ಬಂಗಾರಪ್ಪರವರು ಸದಾ ಬಡಜನರ, ಹಿಂದುಳಿದ ವರ್ಗದವರ ಅಭಿವೃದ್ದಿಗಾಗಿ ಶ್ರಮಿಸಿದವರಾಗಿದ್ದಾರೆ. ರಾಜ್ಯವ್ಯಾಪ್ತಿ ಅವರ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಮೂರ್ತೆದಾರರ ಸಮಸ್ಯೆ, ಮೀನುಗಾರರ ಸಮಸ್ಯೆ, ರಸ್ತೆ, ಕೊಲ್ಲೂರು ತಾಳಗುಪ್ಪ ರೈಲ್ವೆ ಮಾರ್ಗ ಸೇರಿದಂತೆ ಕ್ಷೇತ್ರದ ಅಭಿವೃದ್ದಿಯ ಕನಸುಗಳನ್ನು ಹೊಂದಿದ್ದೇನೆ. ರಾಜಕೀಯ ಅನುಭವ ಕೊರತೆ ಜನಸೇವೆಗೆ ತೊಂದರೆಯಾಗದು. ಶಿವಮೊಗ್ಗ, ಶಿಕಾರಿಪುರ ಸೇರಿದಂತೆ ಕ್ಷೇತ್ರದಾದ್ಯಂತ ಉತ್ತಮ ಬೆಂಬಲವಿದೆ .ಜೆ.ಡಿ.ಎಸ್‌ಗೆ ಗೆಲುವು ನಿಶ್ಚಿತ ಎಂದರು.

ಜೆ.ಡಿ.ಎಸ್‌. ಶಾಸಕ ಮಧು ಬಂಗಾರಪ್ಪ ಮಾತನಾಡಿ ಯಡ್ನೂರಪ್ಪ ನವರು ಪುತ್ರ ಸಂಸದನಾಗಿರುವ ವೇಳೆ 23 ದಿನ ಜೈಲುವಾಸ ಅನುಭವಿಸಿದ್ದಾರೆ. ಕ್ಷೇತ್ರವನ್ನು ಅಭಿವೃದ್ದಿ ಮಾಡಿದ್ದೇವೆ ಎನ್ನುವ ಭಾವನೆಯಲ್ಲಿದ್ದಾರೆ ರಾಘವೇಂದ್ರರ ಬದಲು ಯಡಿಯೂರಪ್ಪ ಸ್ಫರ್ಧಿಸುತ್ತಿರಲಿಲ್ಲ .ಹೀಗಾಗಿ ಯಡ್ನೂರಪ್ಪ ತನಗಾಗಿ ಮತ ಕೇಳುತ್ತಿಲ್ಲ, ನರೇಂದ್ರ ಮೋದಿಗಾಗಿ ಮತ ಕೇಳುತ್ತಿದ್ದಾರೆ ಎಂದರು.

ರಾಜ್‌ ಕುಟುಂಬದ ರಾಜಕೀಯ ನಂಟಿನ ಬಗ್ಗೆ ಪ್ರತಿಕ್ರಯಿಸಿದ ಆವರು ಬಂಗಾರಪ್ಪರವರದ್ದು ರಾಜಕೀಯ ಕುಟುಂಬ, ಅಭ್ಯರ್ಥಿಗಳ ಆಯ್ಕೆ ನಡೆಸುವಾಗ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಆಯ್ಕೆ ಮಾಡಲಾಗಿದೆ. 17 ಸಾವಿರಕ್ಕೂ ಅಧಿಕ ಜನ ಬಂಗಾರಪ್ಪರವರ ಪುತ್ರಿ ಗೀತಾ ಚುನಾವಣೆಗೆ ಸ್ಫರ್ಧಿಸಬೇಕೆನ್ನುವ ಒತ್ತಾಯದಿಂದ ಚುನಾವಣೆಗೆ ಸ್ಫರ್ಧಿಸಲಾಗಿದೆ. ಶಿವರಾಜ್‌ ಕುಮಾರ್‌ ಒಪ್ಪಿಗೆ ನೀಡಿದ ಬಳಿಕ ಮತ್ತೆ ಯಾವುದೇ ಗೊಂದಲಗಳಿಲ್ಲ. ಡಾ.ರಾಜ್‌ಕುಮಾರ್‌ ರವರ ಹೆಸರು ಚುನಾವಣೆಗೆ ಎಳೆದು ತರುವುದು ಸರಿಯಲ್ಲ ಎನ್ನುವ ಅಭಿಪ್ರಾಯದಿಂದ ರಾಜ್‌ ಹೆಸರು ಪ್ರಸ್ತಾಪಿಸುತ್ತಿಲ್ಲ. ಬದಲಾಗಿ ಅವರ ಕುಟುಂಬದ ಸಂಪುರ್ಣ ಸಹಕಾರ, ಆಶೀರ್ವಾದವಿದೆ ಎಂದರು.

ಎಪ್ರಿಲ್‌ 1ರಿಂದ ವಿ.ಕೆ.ಮೋಹನ್‌ ಚುನಾವಣಾ ಪ್ರಚಾರ

ವರನಟ ಡಾ.ರಾಜ್‌ ಕುಮಾರ್‌ ಕುಟುಂಬದ ಆಪ್ತ, ಬಿಲ್ಲವ ಮುಂದಾಳು ಕಪಾಲಿ ಮೋಹನ ಎಪ್ರಿಲ್‌ 1ರಿಂದ ಗೀತಾ ಶಿವರಾಜ್‌ ಕುಮಾರ್‌ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ವಿ.ಕೆ.ಮೋಹನ್‌ ಜೀವಮಾನದಲ್ಲಿ ಇಲ್ಲಿಯವರೆಗೆ ರಾಜಕೀಯ ಪ್ರವೇಶಿಸಿಲ್ಲ ಆದರೆ ರಾಜ್‌ ಕುಟುಂಬದ ಶಿವಣ್ಣ ಅವರ ಪತ್ನಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಫರ್ಧಿಸಿರುವುದರಿಂದ ಅವರ ಗೆಲುವಿಗೆ ಪೂರ್ಣ ಪ್ರಮಾಣದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ವಿ.ಆರ್‌.ರಾಜು, ಶಾಲಿನಿ ಶೆಟ್ಟಿ, ಮನ್ಸೂರ್‌ ಇಬ್ರಾಹಿಂ, ರಂಜಿತ್‌ ಶೆಟ್ಟಿ, ಸಂದೇಶ್‌ ಭಟ್‌, ಕಿಶೋರ್‌ ಕುಮಾರ್‌ ಮುಂತಾದವರು ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com