ಕಾರ್ಪೊರೇಶನ್ ಬ್ಯಾಂಕ್ ಸ್ಥಾಪನೆ ದಿನಾಚರಣೆ

ಉಡುಪಿ: ಕಾರ್ಪೊರೇಶನ್ ಬ್ಯಾಂಕ್ ಉಡುಪಿ ವಲಯವು ಬ್ಯಾಂಕಿನ 109ನೇ ಸ್ಥಾಪನಾ ದಿನವನ್ನು ಬುಧವಾರ ಆಚರಿಸಿತು. ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಬನ್ಸಾಲ್ ಬ್ಯಾಂಕಿನ ಹೆರಿಟೇಜ್ ಮ್ಯೂಸಿಯಂ, ಹಾಜಿ ಅಬ್ದುಲ್ಲಾ ಸಾಹೇಬ್ ಮೆಮೋರಿಯಲ್ ಬಿಲ್ಡಿಂಗ್ ಹಾಗೂ ಸ್ಥಾಪಕರ ಶಾಖೆಯಾದ ಉಡುಪಿ ಶಾಖೆಗೆೆ ಭೇಟಿ ನೀಡಿ ಬ್ಯಾಂಕ್ ಸ್ಥಾಪಕಾಧ್ಯಕ್ಷ ದಿ. ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್ ಬಹಾದ್ದೂರ್‌ರ ಪ್ರತಿಮೆ ಹಾಗೂ ಭಾವಚಿತ್ರಗಳಿಗೆ ಪುಷ್ಪಾಂಜಲಿ ಸಲ್ಲಿಸಿದರು. 

ಅವರು ಬಳಿಕ ಮಾತನಾಡಿ, ಬ್ಯಾಂಕ್ ತನ್ನ ಅಮೂಲ್ಯ ಗ್ರಾಹಕರ ಸೇವೆಯಲ್ಲಿ ಫಲಪ್ರದ 108 ವರ್ಷಗಳನ್ನು ಪೂರ್ಣಗೊಳಿಸಿದ್ದು ಈ ಸಂದರ್ಭದಲ್ಲಿ ಸಿಬ್ಬಂದಿಗಳು ಬ್ಯಾಂಕಿನ ಉನ್ನತಿಗಾಗಿ ಹಾಗೂ ಪ್ರಗತಿಗಾಗಿ ತಮ್ಮನ್ನು ಮರುಸಮರ್ಪಣೆಗೊಳಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು. 

ಈ ಶುಭ ದಿನವನ್ನು ಸ್ಮರಣೀಯವಾಗಿಸಲು ಬ್ಯಾಂಕ್ ಈ ದಿನ 109 ಶಾಖೆಗಳನ್ನು ಹಾಗೂ 109 ಎಟಿಎಂಗಳನ್ನು ತೆರೆಯಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 302 ಶಾಖೆಗಳನ್ನು ತೆರೆಯುವುದರೊಂದಿಗೆ ಬ್ಯಾಂಕ್ ಒಟ್ಟು 2009 ಶಾಖೆಗಳನ್ನು ಹೊಂದಿದಂತಾಗುತ್ತದೆ ಎಂದು ತಿಳಿಸಿದರು. 

ಬ್ಯಾಂಕ್ ಈ ಸಂದರ್ಭದಲ್ಲಿ 'ಫಾರೆಕ್ಸ್ ಟ್ರಾವೆಲ್ ಕಾರ್ಡ್', 'ಈ ಪಾಸ್ ಬುಕ್' ಮತ್ತು ಬ್ಯಾಂಕಿನ ಗಹ ಪತ್ರಿಕೆ 'ಕ್ಷೇಮ'ದ 150ನೇ ಆವತ್ತಿಯನ್ನು ಬಿಡುಗಡೆ ಮಾಡಲಿದ್ದು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ 'ಕಾರ್ಪ್ ಕಿರಣ್' ಎಂಬ ಮಹಿಳಾ ಕಲ್ಯಾಣ ಸಂಘ ಸ್ಥಾಪಿಸಿ ಅದರ ಮೂಲಕ ಅವಕಾಶ ವಂಚಿತ ವರ್ಗದವರಿಗೆ ಸಹಾಯ ಮಾಡಲು ಕ್ರಮ ಕೈಗೊಂಡಿದೆ. 

ಈ ಸಂದರ್ಭದಲ್ಲಿ ಸರಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಜಿಲ್ಲಾ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಹಂಚಲಾಯಿತು. ಕಾರ್ಪೊರೇಶನ್ ಬ್ಯಾಂಕ್ ಸುವರ್ಣ ಮಹೋತ್ಸವ ಸ್ಮಾರಕ ಸರಕಾರಿ ನಾರ್ತ್ ಶಾಲೆಯ ಮಕ್ಕಳಿಗೆ ಸಿಹಿಯೂಟ ಬಡಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com