ಟ್ವೆಂಟಿ-20: ಭಾರತಕ್ಕೆ ಭರ್ಜರಿ ಜಯ

ಮೀರ್ಪುರ್‌: ಯುವರಾಜ್‌ ಸಿಂಗ್‌ ಮತ್ತು ಅಶ್ವಿ‌ನ್‌ ಅವರ ಸಾಹಸದಿಂದಾಗಿ ಭಾರತ ತಂಡವು ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಕೂಟದ ರವಿವಾರದ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 73 ರನ್ನುಗಳಿಂದ ಸೋಲಿಸಿದೆ.

ಈ ಜಯದಿಂದ ಭಾರತ ಬಣ ಎರಡರಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲಿಗೇರಿದೆ.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತವು ಯುವರಾಜ್‌ ಸಿಂಗ್‌ ಅವರ ಅರ್ಧಶತಕದಿಂದಾಗಿ 7 ವಿಕೆಟಿಗೆ 159 ರನ್‌ ಪೇರಿಸಿತು. ಇದಕ್ಕುತ್ತರವಾಗಿ ಅಶ್ವಿ‌ನ್‌ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ ತಂಡವು 16.2 ಓವರ್‌ಗಳಲ್ಲಿ ಕೇವಲ 86 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಇದು ಟ್ವೆಂಟಿ-20 ಪಂದ್ಯವೊಂದರಲ್ಲಿ ಭಾರತದ ಅಮೋಘ ಜಯವಾಗಿದೆ.

ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಈಗಾಗಲೇ ಸೆಮಿಫೈನಲಿಗೇರಿದ್ದ ಭಾರತ ಈ ಪಂದ್ಯದಲ್ಲೂ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿತ್ತು. ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ನೀಡುವ ಮೂಲಕ ಆಸ್ಟ್ರೇಲಿಯವನ್ನು ಕಟ್ಟಿ ಹಾಕಲು ಯಶಸ್ವಿಯಾದ ಭಾರತ ಭರ್ಜರಿ ಗೆಲುವು ಒಲಿಸಿಕೊಂಡು ಸಂಭ್ರಮಿಸಿತು.

ಭಾರತೀಯ ಸ್ಪಿನ್ನರ್‌ಗಳ ದಾಳಿಯನ್ನು ದಿಟ್ಟವಾಗಿ ಎದುರಿಸಲು ಆಸ್ಟ್ರೇಲಿಯ ಆಟಗಾರರು ವಿಫ‌ಲರಾದರು. 23 ರನ್‌ ಗಳಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಫಿಂಚ್‌ ಅವರ ವಿಕೆಟನ್ನು ಹಾರಿಸುವ ಮೂಲಕ ಅಶ್ವಿ‌ನ್‌ ಆಸ್ಟ್ರೇಲಿಯದ ಕುಸಿತಕ್ಕೆ ಚಾಲನೆ ನೀಡಿದರು. ಭುವನೇಶ್ವರ್‌ ಕುಮಾರ್‌ ಅವರು ಕ್ಯಾಮರೂನ್‌ ವೈಟ್‌ ಅವರನ್ನು ಕೆಡಹಿದರೆ ಮೊಹಮ್ಮದ್‌ ಶಮಿ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ಮೋಹಿತ್‌ ಶರ್ಮ ಅಪಾಯಕಾರಿ ಆಟಗಾರ ಶೇನ್‌ ವಾಟ್ಸನ್‌ ಅವರನ್ನು ಬೌಲ್ಡ್‌ ಮಾಡಿದರು.

ಮಾರಕ ದಾಳಿ ಸಂಘಟಿಸಿದ ಅಶ್ವಿ‌ನ್‌ ತನ್ನ 3.2 ಓವರ್‌ಗಳ ದಾಳಿಯಲ್ಲಿ ಕೇವಲ 11 ರನ್ನಿಗೆ 4 ವಿಕೆಟ್‌ ಕಿತ್ತು ಮಿಂಚಿದರು. ಅಮಿತ್‌ ಮಿಶ್ರಾ 13 ರನ್ನಿಗೆ 2 ವಿಕೆಟ್‌ ಹಾರಿಸಿದರು

ಆಸ್ಟ್ರೇಲಿಯ

ಅರೋನ್‌ ಫಿಂಚ್‌ ಸಿ ಕೊಹ್ಲಿ ಬಿ ಅಶ್ವಿ‌ನ್‌ 6

ಡೇವಿಡ್‌ ವಾರ್ನರ್‌ ಸಿ ರೋಹಿತ್‌ ಬಿ ಅಶ್ವಿ‌ನ್‌ 19

ಕ್ಯಾಮರೂನ್‌ ವೈಟ್‌ ಸಿ ಜಡೇಜ ಬಿ ಕುಮಾರ್‌ 0

ಶೇನ್‌ ವಾಟ್ಸನ್‌ ಬಿ ಮೋಹಿತ್‌ ಶರ್ಮ 1

ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಿ ಅಶ್ವಿ‌ನ್‌ 23

ಜಾರ್ಜ್‌ ಬೈಲಿ ಸಿ ಕೊಹ್ಲಿ ಬಿ ಜಡೇಜ 8

ಬ್ರಾಡ್‌ ಹಾಜ್‌ ಸಿ ಜಡೇಜ ಬಿ ಮಿಶ್ರಾ 13

ಬ್ರಾಡ್‌ ಹ್ಯಾಡಿನ್‌ ಸಿ ರಹಾನೆ ಬಿ ಮಿಶ್ರಾ 6

ಮಿಚೆಲ್‌ ಸ್ಟಾರ್ಕ್‌ ರನೌಟ್‌ 2

ಮ್ಯೂರ್‌ಹೆಡ್‌ ಸಿ ಧೋನಿ ಬಿ ಅಶ್ವಿ‌ನ್‌ 3

ಡಿ. ಬೊಲಿಂಜರ್‌ ಔಟಾಗದೆ 1

ಇತರ: 4

ಒಟ್ಟು (16.2 ಓವರ್‌ಗಳಲ್ಲಿ ಆಲೌಟ್‌) 86

ವಿಕೆಟ್‌ ಪತನ: 1-13, 2-19, 3-21, 4-44, 5-55, 6-63, 7-75, 8-79, 9-83

ಬೌಲಿಂಗ್‌:

ಭುವನೇಶ್ವರ ಕುಮಾರ್‌ 3-0-7-1

ಮೋಹಿತ್‌ ಶರ್ಮ 2-0-11-1

ಆರ್‌. ಅಶ್ವಿ‌ನ್‌ 3.2-0-11-4

ಸುರೇಶ್‌ ರೈನಾ 1-0-16-0

ರವೀಂದ್ರ ಜಡೇಜ 4-0-25-1

ಅಮಿತ್‌ ಮಿಶ್ರಾ 3-0-13-2

ಪಂದ್ಯಶ್ರೇಷ್ಠ: ಆರ್‌. ಅಶ್ವಿ‌ನ್‌
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com