ಜ್ವಲಂತ ಸಮಸ್ಯೆ ಪರಿಹಾರಕ್ಕೆ ಸಮರ್ಥ ನಾಯಕರ ಅವಶ್ಯಕತೆಯಿದೆ ಯಡಿಯೂರಪ್ಪ

ಬೈಂದೂರು: ಕಳೆದ ಐವತ್ತು ವರ್ಷಗಳ ಕಾಂಗ್ರೇಸ್‌ ಪಕ್ಷದ ಆಡಳಿತದಿಂದ ದೇಶದ ಆಡಳಿತ ವ್ಯವಸ್ಥೆ ನಿಯಂತ್ರಣ ಕಳೆದುಕೊಂಡಿದೆ. ದೇಶದ ಅಸ್ತಿತ್ವದ ಸಮಸ್ಯೆಗೆ ಸ್ಫಂದಿಸದ ಪರಿಣಾಮ ಭಾರತದ ಗಡಿಗಳಲ್ಲಿ ಚೀನಾ, ಪಾಕ್‌ ಅತಿಕ್ರಮಣ ನಡೆಸುತ್ತಿದೆ. ಹಣದುಬ್ಬರ ಅಂತರಿಕ ಭಯೋತ್ಪಾದನೆ ನಿಗ್ರಹ ಸೇರಿದಂತೆ ದೇಶದ ಜ್ವಲಂತ ಸಮಸ್ಯೆಯ ಪರಿಹಾರಕ್ಕೆ ಸಮರ್ಥ ನಾಯಕರ ಅವಶ್ಯಕತೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ಎಸ್‌.ಯಡ್ನೂರಪ್ಪ ಹೇಳಿದರು.

ಅವರು ಗೋಳಿಹೊಳೆಯಲ್ಲಿ ನಡೆದ ಬೈಂದೂರು ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ ಮುಖ್ಯ ಮಂತ್ರಿಯಾಗಿದ್ದ ಸಂಧರ್ಭದಲ್ಲಿ ಬಡವರಿಗಾಗಿ ವಿನೂತನ ಯೋಜನೆಯನ್ನು ದೇಶದಲ್ಲೆ ಪ್ರಪ್ರಥಮವಾಗಿ ಜಾರಿಗೆ ತಂದಿದ್ದೇವೆ. ಸುವರ್ಣಭೂಮಿ ಯೋಜನೆ, ರೈತರಿಗಾಗಿ ವಿಶೇಷ ಬಜೆಟ್‌ ಮಂಡಿಸಿದ್ದೆನೆ. ಸ್ವಾಭಿಮಾನದ ಬದುಕಿಗೆ ಬಿಜೆಪಿ ಬೆಂಬಲಿಸಬೇಕು ಎಂದರು.

ರಾಜ್ಯ ಹಿಂದುಳಿದ ಮೋರ್ಚಾದ ಅಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಕಾಂಗ್ರೇಸ್‌ನ ಭ್ರಷ್ಟಾಚಾರದ ಆಡಳಿತಕ್ಕೆ ಮುಕ್ತಿ ನೀಡುವ ಜೊತೆಗೆ ಈ ಚುನಾವಣೆ ದೇಶದ ಭವಿಷ್ಯ ನಿರ್ಧರಿಸುತ್ತದೆ ಎಂದರು.

ಮಾಜಿ ಶಾಸಕ ಕೆ.ಲಕ್ಷ್ಮಿನಾರಾಯಣ, ಅಪ್ಪಣ್ಣ ಹೆಗ್ಡೆ, ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ, ಜಿ.ಪಂ ಸದಸ್ಯರಾದ ಬಾಬು ಶೆಟ್ಟಿ, ಗೌರಿ ದೇವಾಡಿಗ, ತಾ.ಪಂ ಸದಸ್ಯರಾದ ಶ್ರೀಮತಿ ಮೊಗವೀರ, ಮಹೇಂದ್ರ ಪೂಜಾರಿ, ಮಹಿಳಾ ಮೋರ್ಚಾದ ನಯನಾ ಶ್ಯಾನುಭಾಗ್‌, ಜಿಲ್ಲಾ ಕಾರ್ಯದರ್ಶಿ ಸುರೇಶ ಶೆಟ್ಟಿ, ಗುರುರಾಜ್‌ ಗಂಟಿಹೊಳೆ, ಪ್ರಥ್ವಿರಾಜ್‌ ಜೈನ್‌, ವೆಂಕ್ಟ ಪೂಜಾರಿ, ಸದಾನಂದ ಮುಂತಾದವರು ಹಾಜರಿದ್ದರು.

ಈ ಸಂಧರ್ಭದಲ್ಲಿ ವಿವಿಧ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು,. ಎಮ್‌.ಆರ್‌.ಶೆಟ್ಟಿ ಸ್ವಾಗತಿಸಿದರು. ಸದಾಶಿವ.ಡಿ ಕಾರ್ಯಕ್ರಮ ನಿರೂಪಿಸಿದರು. ಯುವ ಮೋರ್ಚಾ ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com