ಸನ್ಮಾನಿಸುವುದರಿಂದ ಹೊಣೆಗಾರಿಕೆ ಹೆಚ್ಚು:

ಗುಜ್ಜಾಡಿ: ವ್ಯಕ್ತಿಯ ಸಾಧನೆ, ಸೇವೆಗಳನ್ನು ಗುರುತಿಸಿ ಸನ್ಮಾನಿಸಿದಾಗ ಅವರ ಹೊಣೆಗಾರಿಕೆ ಹೆಚ್ಚುತ್ತದೆ. ಅವರು ಇನ್ನಷ್ಟು ಉತ್ಸಾಹ ದಿಂದ, ಬದ್ಧತೆಯಿಂದ ಕೆಲಸ ಮಾಡ ಬೇಕೆಂಬ ಸೂಚನೆಯನ್ನು ಅದು ನೀಡುತ್ತದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಗುಜ್ಜಾಡಿಯ ಚೆನ್ನಬಸವೇಶ್ವರ ಭಜನಾ ಮಂಡಳಿ ಮತ್ತು ಯುವಕ ಮಂಡಳಿ ಜಂಟಿಯಾಗಿ ಸಂಗಮೇಶ್ವರ ದೇವಸ್ಥಾ ನದಲ್ಲಿ ಈಚೆಗೆ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೇಲ್‌ ಗಂಗೊ ಳ್ಳಿಯ ಅಂಬೇಡ್ಕರ್‌ ಯುವಕ ಮಂಡಳಿ ಸ್ಥಾಪಕಾಧ್ಯಕ್ಷ, ಸಾಮಾಜಿಕ ಕಾರ್ಯ ಕರ್ತ ಭಾಸ್ಕರ ಎಚ್‌.ಜಿ. ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. 
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಪೂಜಾರಿ, ದೇವಸ್ಥಾನದ ಮೊಕ್ತೇಸರ ನರಸಿಂಹ, ಶೇಖರ, ನಾರಾಯಣ, ಅಧ್ಯಕ್ಷ ರಘು, ಮಂಜುನಾಥ ಸಾಲಿಯಾನ್‌, ಯುವಕ ಮಂಡಳದ ಅಧ್ಯಕ್ಷ ರಾಘವೇಂದ್ರ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com