ಜನರ ಸಮಸ್ಯೆಗೆ ಸ್ಪಂದಿಸಲು ಶಿವಮೊಗ್ಗದಲ್ಲೇ ಇರುವೆ: ಗೀತಾ ಶಿವರಾಜ್‌ಕುಮಾರ್‌

ಹೆಮ್ಮಾಡಿ: ತನ್ನ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರೂ ಸಂಸದೆಯನ್ನಾಗಿ ತನ್ನನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರು ಆರಿಸಿ ಆಶೀರ್ವದಿಸಿದಲ್ಲಿ ಕ್ಷೇತ್ರದ ಜನತೆ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಿಚಯ ಹಾಗೂ ಜನರ ಸಮಸ್ಯೆಗಳ ಸಾಕಷ್ಟು ಅರಿವು ತನಗಿದೆ. ಜನರು ಬಯಸಿದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಶಿವಮೊಗ್ಗದಲ್ಲಿಯೇ ಮನೆ ಮಾಡುವೆ ಎಂದು ಜೆಡಿಎಸ್‌ ಪಕ್ಷದ ಶಿವಮೊಗ್ಗ ಲೋಕಸಭಾ ಚುನಾವಣಾ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಹೇಳಿದ್ದಾರೆ. ಗುಡ್ಡಮ್ಮಾಡಿ ಗ್ರೀನ್‌ವುಡ್‌ ರೆಸಾರ್ಟ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜಾತಿ ಆಧಾರದಲ್ಲಿ ಮತ ಕೇಳುವುದಿಲ್ಲ

ತಂದೆಯವರಾದ ಎಸ್‌. ಬಂಗಾರಪ್ಪ ಅವರ ಅಭಿಮಾನಿಗಳ ಆಶೀರ್ವಾದದಿಂದ ಸ್ಪರ್ಧಿಸುತ್ತಿದ್ದೇನೆ. ಜಾತಿಯ ಆಧಾರದಲ್ಲಿ ಮತ ಕೇಳುವುದಿಲ್ಲ. ತನಗೆ ಮತ ನೀಡಿ ಗೆಲ್ಲಿಸಿದಲ್ಲಿ ಕ್ಷೇತ್ರದ ಜನತೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಅವರು ಹೇಳಿದರು.

ಯಡಿಯೂರಪ್ಪಗೆ ಅಧಿಕಾರದ ದುರಾಸೆ: ಮಧು

ಬಿಜೆಪಿಯಿಂದ ಹೊರಬಂದು ಕೆಜೆಪಿ ಪಕ್ಷ ಕಟ್ಟಿ ಬಿಜೆಪಿಯನ್ನು ನಿರ್ನಾಮ ಮಾಡುತ್ತೇನೆ ಎಂದಿದ್ದ ಬಿ.ಎಸ್‌. ಯಡಿಯೂರಪ್ಪ, ಅಧಿಕಾರದ ದುರಾಸೆಯಿಂದ ಮತ್ತೆ ಬಿಜೆಪಿ ಸೇರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ನೈತಿಕತೆ ಎಂಬುದೇ ಇಲ್ಲ. ಸೋಲಿಲ್ಲದ ಸರದಾರ ಎಂದೆನಿಸಿಕೊಂಡಿದ್ದ ಎಸ್‌. ಬಂಗಾರಪ್ಪ ಅವರ ಸೋಲಿಗೆ ಈ ಚುನಾವಣೆಯಲ್ಲಿ ಪûಾತೀತ ಹಾಗೂ ಜಾತ್ಯತೀತವಾಗಿ ಮತ ನೀಡುವ ಮೂಲಕ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.

ಮುಖಂಡರಾದ ಡಿ.ಆರ್‌. ರಾಜು, ಮನ್ಸೂರ್‌ ಇಬ್ರಾಹಿಂ, ಶ್ರೀಕಾಂತ್‌ ಅಡಿಗ, ರಂಜಿತ್‌ಕುಮಾರ್‌ ಶೆಟ್ಟಿ, ಕಿಶೋರ್‌ಕುಮಾರ್‌, ಅಣ್ಣಪ್ಪ ಪೂಜಾರಿ, ಸಂದೇಶ ಭಟ್‌, ವೇದಾ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com