ಕೊಲ್ಲೂರಿನಲ್ಲಿ ಸಂಭ್ರಮದ ಮನ್ಮಹಾ ರಥೋತ್ಸವ

ಕೊಲ್ಲೂರು : ಶ್ರೀ ಮೂಕಾಂಬಿಕಾ ದೇವಳದ ಮನ್ಮಹಾ ರಥೋತ್ಸವ ಸೋಮವಾರ ಸಂಭ್ರಮ, ಸಡಗರದಿಂದ ನೆರವೇರಿತು. ಮನ್ಮಹಾ ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ದೇವಳದಲ್ಲಿ ಮುಹೂರ್ತ ಮಂಗಳಾರತಿಯಿಂದ ಮೊದಲ್ಗೊಂಡು ದೇವರ ಉತ್ಸವ ಮೂರ್ತಿಗಳನ್ನು ಹೊರಗಡೆ ತರಲಾಯಿತು, ಬಳಿಕ ಭೂತ ಬಲಿ ನಡೆದು, ದೇವರ ಉತ್ಸವ ಮೂರ್ತಿಯನ್ನು ಓಲಗ ಮಂಟಪಕ್ಕೆ ಕರೆತರಲಾಯಿತು. ಮಧ್ಯಾಹ್ನ ದೇವರ ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಲಾಯಿತು. ಸಂಜೆ ಹೊತ್ತಿಗೆ ದೇವಳದ ರಥಬೀದಿಯಲ್ಲಿ ವಿಜೃಂಭಣೆಯಿಂದ ರಥೋತ್ಸವ ನಡೆಯಿತು. 

ಈ ಸಂದರ್ಭ ದೇಶದ ನಾನಾ ಭಾಗಗಳಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಕೃತಾರ್ಥರಾದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಸದಸ್ಯರಾದ ಮಂಜುನಾಥ ಅಡಿಗ, ರಾಜೇಶ್ ಕೆ.ಎಂ., ಸವಿತಾ ಯು. ದೇವಾಡಿಗ, ಕಲ್ಪನಾ ಭಾಸ್ಕರ್, ಶ್ರೀನಿವಾಸ ಕಲ್ಲೂರಾಯ, ಅಣ್ಣಪ್ಪ ಖಾರ್ವಿ, ಜಯಾನಂದ ಹೋಬಳಿದಾರ್, ಡಾ. ಅತುಲ್ ಕುಮಾರ ಶೆಟ್ಟಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ಅಧೀಕ್ಷಕ ರಾಮಕೃಷ್ಣ ಅಡಿಗ ಮತ್ತಿತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com