ಬಿಜೆಪಿ ಕೇಂದ್ರದಲ್ಲಿ ಏನು ಸಾಧನೆ ಮಾಡೀತು?: ಆಸ್ಕರ್‌ ಫೆರ್ನಾಂಡಿಸ್‌

ಕೋಟೇಶ್ವರ: ಅಧಿಕಾರಕ್ಕೆ ಯಾವತ್ತೂ ಅಂಟಿಕೊಂಡ ಪಕ್ಷ ಕಾಂಗ್ರೆಸ್‌ ಅಲ್ಲ. ಅಧಿಕಾರ ನೀಡಿದಾಗ ಆಡಳಿತದಲ್ಲಿ ಸಂಪೂರ್ಣ ವೈಫಲ್ಯಗೊಂಡು ದುರಾಡಳಿತ ನೀಡಿದ ಬಿಜೆಪಿಗೆ ತಕ್ಕ ಪಾಠ ಕಲಿಸಿದ ಮತದಾರರು ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಅಧಿಕಾರಕ್ಕೆ ಬರುವ ಮೊದಲೇ ಓರ್ವ ವ್ಯಕ್ತಿಯನ್ನು ಪೂಜಿಸುವ ಬಿಜೆಪಿ ನಿಲುವು ಹಾಸ್ಯಾಸ್ಪದ ಎಂದು ಕೇಂದ್ರ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು.

ಅವರು ಕೋಟೇಶ್ವರದ ವಾದಿರಾಜ ಸಭಾಭವನದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಕಂದಾಯ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ ಲೋಕಸಭಾ ಸದಸ್ಯ ಜಯಪ್ರಕಾಶ ಹೆಗ್ಡೆಯವರು ತಮ್ಮ 2 ವರುಷದ ಆಡಳಿತ ಅವಧಿಯಲ್ಲಿ ಜಿಲ್ಲೆಯ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿರುವುದಲ್ಲದೇ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯದಲ್ಲಿ ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ಮಾಡಿರುವ ಸಾಧನೆ ಇತರರಿಗೆ ಮಾದರಿ ಎಂದರು.

ಬೆ„ಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರದ ಸಾಧನೆಯನ್ನು ವಿವರಿಸಿದರಲ್ಲದೇ ಬಡ ಜನರ ಮೂಲಭೂತ ಸೌಕರ್ಯ ಒದಗಿಸುವುದರಲ್ಲಿ ಸರಕಾರ ಕೈಗೊಂಡ ಕಾರ್ಯಕ್ರಮ ವಿವರಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಮಾತನಾಡಿ ದೊರತ 2 ವರುಷ ಆಡಳಿತ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನಗಳನ್ನು ಬಳಸಿ ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಪೂರೈಸಲಾಗಿದೆ. ಜನಪರ ಕಾಳಜಿಯಿಂದ ಜನಸೇವೆ ಮಾಡಿರುವ ತƒಪ್ತಿ ಇದೆ. ಮತದಾರರು ಕಳೆದ ಚುನಾವಣೆಯಲ್ಲಿ ಅತೀ ಹೆಚ್ಚಿನ ಬಹುಮತ ನೀಡಿ ಲೋಕಸಭೆಗೆ ಕಳುಹಿಸಿದ್ದರು. ಈ ಬಾರಿ ಜನಪ್ರತಿನಿಧಿಯಾಗಿ 2 ವರುಷದ ಆಡಳಿತ ಅವಧಿಯಲ್ಲಿ ಕ್ಷೇತ್ರದ ಜನತೆಗಾಗಿ ಬಹುತೇಕ ಅಗತ್ಯತೆ ಪೂರೈಸಿರುವ ತƒಪ್ತಿ ಇದೆ ಎಂದು ಹೇಳಿದರಲ್ಲದೇ ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವಂತೆ ವಿನಂತಿಸಿದರು. ತಾ. ಪಂ. ಸದಸ್ಯ ಕೆದೂರು ಸದಾನಂದ ಶೆಟ್ಟಿ, ಪರ್ತಕರ್ತ ರಾಮಕೃಷ್ಣ ಹೆರಳೆ ಮಾತನಾಡಿದರು.

ವೇದಿಕೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೊಳ್ಕೆಬೆ„ಲು ಕಿಶನ್‌ ಕುಮಾರ್‌ ಹೆಗ್ಡೆ, ಎಂ. ಎ. ಗಪೂರ್‌, ಬ್ಲೊಸಂ ಫೆರ್ನಾಂಡಿಸ್‌ , ಎಸ್‌. ದಿನಕರ ಶೆಟ್ಟಿ. ಹೆರಿಯಣ್ಣ ಬೀಜಾಡಿ. ಚಂದ್ರಶೇಖರ ಶೆಟ್ಟಿ, ಅಶೋಕ ಪೂಜಾರಿ ಬೀಜಾಡಿ, ಹಿರಿಯ ಕಾಂಗ್ರೆಸ್‌ ಮುಖಂಡ ಮಾಣಿ ಗೋಪಾಲ್‌, ಪ್ರಕಾಶ್ಚಂದ್ರ ಶೆಟ್ಟಿ, ಖಂಬದ ಕೋಣಿ ಲಕ್ಷ್ಮೀನಾರಾಯಣ ಆಚಾರ್ಯ, ಶರತ್‌ ಶೆಟ್ಟಿ, ತಾ. ಪಂ. ಸದಸ್ಯ ರಾಜು ಪೂಜಾರಿ, ದಿನೇಶ್‌ ಪುತ್ರನ್‌, ಅಮರನಾಥ್‌, ಸುಜಾತ ವಾಸುದೇವ ಮುಂತಾದವರು ಉಪಸ್ಥಿತರಿದ್ದರು.

ಕೋಟೇಶ್ವರ ಗ್ರಾ. ಪಂ. ಅಧ್ಯಕ್ಷ ರಾಜಶೇಖರ ಶೆಟ್ಟಿ ಮಾರ್ಕೋಡು ಸ್ವಾಗತಿಸಿದರು. ಬಿ. ಹೆರಿಯಣ್ಣ ಧನ್ಯವಾದವಿತ್ತರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com