ದೇಶದ ಭವಿಷ್ಯ ಯುವಕರ ಕೈಯಲ್ಲಿದೆ: ಆಸ್ಕರ್ ಫರ್ನಾಂಡಿಸ್

ಕುಂದಾಪುರ: ದೇಶದ ಭವಿಷ್ಯವಿಂದು ಯುವಕರ ಕೈಯಲ್ಲಿದೆ. ಅತಿ ಹೆಚ್ಚು ಯುವಕರು ಈ ಬಾರಿ ಮತದಾನಕ್ಕೆ ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿರುವ ತಂತ್ರಜ್ಞಾನ ಕೊಡುಗೆಯಿಂದಾಗಿ ದೇಶದ ಯುವ ಜನಾಂಗದ ಭವಿಷ್ಯ ಅರಳಿದೆ. ಯೋಚಿಸಿ ಮತ ನೀಡಿ ಎಂದು ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದರು. ಕೋಟೇಶ್ವರದ ವಾದಿರಾಜ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು. 

ಬಿಜೆಪಿ ಪಕ್ಷ ಯುವಕರ ಕೈಯಲ್ಲಿ ತ್ರಿಶೂಲ ಕೊಡಬೇಕು ಅನ್ನುತ್ತಿದೆ. ಆದರೆ ಕಾಂಗ್ರೆಸ್ ಯುವಕರ ಕೈಯಲ್ಲಿ ಕಲಂ (ಲೇಖನಿ) ಕೊಡಲು ಬಯಸಿತು. ಲೇಖನಿಯಿಂದಲೇ ದೇಶದ ಸಮೃದ್ಧಿ ಅನ್ನುವುದನ್ನು ಯುವಕರು ಮರೆಯಕೂಡದು ಎಂದರು. ಉಡುಪಿ-ಚಿಕ್ಕಮಗಳೂರು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಿಕ್ಕಿರುವ ಕಡಿಮೆ ಅವಧಿಯಲ್ಲಿ ನನ್ನ ಕ್ಷೇತ್ರವಲ್ಲದೆ ಪಕ್ಕದ ಕ್ಷೇತ್ರದ ಅಭಿವೃದ್ಧಿಗೋಸ್ಕರ ಶ್ರಮವಹಿಸಿದ್ದೇನೆ. ಟೀಕೆ ಮಾಡುವವರು ಮಾಡುತ್ತಾರೆ. ಕಾರ್ಯಕರ್ತರು ಅದಕ್ಕೆ ಮನ್ನಣೆ ನೀಡಬಾರದು ಎಂದರು. 

ಸಚಿವ ವಿನಯಕುಮಾರ ಸೊರಕೆ, ಬ್ಲೋಸಂ ಫರ್ನಾಂಡಿಸ್, ಮುಖಂಡರಾದ ಎಂ.ಎ. ಗಫೂರ್, ಪ್ರಕಾಶ್ಚಂದ್ರ ಶೆಟ್ಟಿ, ಮಾಣಿಗೋಪಾಲ, ಬಿ. ಹೆರಿಯಣ್ಣ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೆ. ಗೋಪಾಲ ಪೂಜಾರಿ, ಕೆದೂರು ಸದಾನಂದ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಕೆ.ಎನ್. ಚಂದ್ರಶೇಖರ ಶೆಟ್ಟಿ, ಲಕ್ಷ್ಮೀನಾರಾಯಣ ಆಚಾರ್ಯ, ಸುಜಾತ ವಾಸುದೇವ, ಅಶೋಕ ಪೂಜಾರಿ ಬೀಜಾಡಿ, ಅಮರನಾಥ ಬೆಂಗಳೂರು, ಶರತ್ ಹೆಗ್ಡೆ, ರಾಮಕೃಷ್ಣ ಹೇರ್ಳೆ, ರಂಗನಾಥ ಭಟ್, ರಾಜಶೇಖರ ಶೆಟ್ಟಿ, ಕೃಷ್ಣದೇವ ಕಾರಂತ ಕೋಣಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com