ಕರಾವಳಿಯ ಪ್ರವಾಸೋದ್ಯಮ ಅಭಿವದ್ಧಿಗೆ ಯತ್ನ: ಹೆಗ್ಡೆ

ಉಡುಪಿ: ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ಸಾಕಷ್ಟು ಅವಕಾಶವಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗ್ಡೆ ಭರವಸೆ ನೀಡಿದರು. ಪಲಿಮಾರು, ಎರ್ಮಾಳ್, ಉಚ್ಚಿಲ ಭಾಗದಲ್ಲಿ ಭಾನುವಾರ ಚುನಾವಣೆ ಪ್ರಚಾರ ಕೈಗೊಂಡು ಬಳಿಕ ಹೆಜಮಾಡಿಯಲ್ಲಿ ನಡೆದ ಕಾಂಗ್ರೆಸ್ ಸ್ಥಾನೀಯ ಸಮಿತಿ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಲೋಕಸಭೆಯ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಬೀದಿ ವ್ಯಾಪಾರಸ್ಥರ ಮಸೂದೆ ಮೇಲಿನ ಚರ್ಚೆ, ಕುದುರೆಮುಖದಲ್ಲಿ ಪ್ರವಾಸೋದ್ಯಮ ಅಭಿವದ್ಧಿಗೊಳಿಸುವ ಬಗ್ಗೆ, ಹಾಸನ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿಯ ಸಮಸ್ಯೆ ಮುಂತಾದ 12 ಚರ್ಚೆಗಳಲ್ಲಿ ಭಾಗವಹಿಸಿದ್ದು, 67 ಪ್ರಶ್ನೆಗಳನ್ನು ಕೇಳಿದ್ದೇನೆ. ಇದರ ಅರಿವಿಲ್ಲದವರು ಸಂಸತ್‌ನಲ್ಲಿ ತಾನು ಮಾತನಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ ಎಂದು ತನ್ನ ಪ್ರತಿರ್ಸ್ಪ ಶೋಭಾ ಅವರ ಆರೋಪಕ್ಕೆ ತಿರುಗೇಟು ನೀಡಿದರು. 

ವಿಧಾನ ಪರಿಷತ್‌ಗಾಗಿ ನಡೆಯುವ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಕರಿಗೂ ಮತದಾನದ ಹಕ್ಕು ನೀಡಬೇಕು ಮತ್ತು ಅನಿವಾಸಿ ಭಾರತೀಯರಿಗೆ ಯಾವರೀತಿ ಅವರವರ ಊರಿನಲ್ಲಿ ಮತದಾನದ ಹಕ್ಕು ಕೊಟ್ಟಿರುತ್ತಾರೋ ಅದೇರೀತಿ ನಿವಾಸಿ ಭಾರತೀಯರಿಗೂ ಉದ್ಯೋಗದ ನಿಮಿತ್ತ ಪರಊರಿನಲ್ಲಿದ್ದರೂ ಅವರ ಊರಿನಲ್ಲೇ ಮತದಾನದ ಹಕ್ಕು ನೀಡಬೇಕು ಎಂಬ ಎರಡು ವಿಷಯದ ಮೇಲೆ ಖಾಸಗಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದೇನೆ ಎಂದು ತಿಳಿಸಿದರು. 

ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಪೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಶೆಟ್ಟಿ, ನವೀನ್ ಎನ್. ಶೆಟ್ಟಿ, ಎಂ.ಪಿ. ಮೊಯಿದಿನಬ್ಬ, ಸುಕುಮಾರ್ ಮತ್ತು ಪಕ್ಷದಕಾರ್ಯಕರ್ತರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com